ಬೆಂಗಳೂರು, ಆಗಸ್ಟ 04: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಚೊಚ್ಚಲ ಸಂಪುಟದ ಕಸರತ್ತು ಮುಕ್ತಾಯವಾಗಿದ್ದು, ನೂತನವಾಗಿ ಸಂಪುಟಕ್ಕೆ 29 ಜನ ಶಾಸಕರ ಹೆಸರು ಅಂತಿಮವಾಗಿದೆ.
ಪ್ರಾದೇಶಿಕ ಸಮಾನತೆ ಹಾಗೂ ಜಾತಿವಾರು ಲೆಕ್ಕಾಚಾರ, ಹೊಸಬರಿಗೆ ಮತ್ತು ಯುವಕರಿಗೆ ಈ ಬಾರಿಯ ಸಂಪುಟದಲ್ಲಿ ಆದ್ಯತೆ ನಿಡಲಾಗಿದೆ.
ರಾಜ್ಯದ 13 ಜಿಲ್ಲೆಗಳಿಗೆ ಈ ಬಾರಿ ಬೊಮ್ಮಾಯಿ ಸಂಪುಟದಲ್ಲಿ ಆದ್ಯತೆ ಸಿಗದಿದ್ದು, ಮತ್ತೇ ನಿರಾಶೆ ಮೂಡಿದಂತಾಗಿದೆ.
ಬೊಮ್ಮಾಯಿ ಸಂಪುಟದಲ್ಲಿ ಬೆಂಗಳೂರು ನಗರಕ್ಕೆ ಬಂಪತ್ ಸಚಿವ ಸ್ಥಾನಿ ಸಿಕ್ಕಿದು ಒಟ್ಟು 7 ಜನರು ಬೆಂಗಳೂರು ಕ್ಷೇತರ್ ಪ್ರತಿನಿಧಿಸುವ ಸಚಿವರಾಗುತ್ತಿದ್ದಾರೆ.
ಸಂಪುಟದಲ್ಲಿ ಲಿಂಗಾಯಿತ ಸಮುದಾಯಕ್ಕೆ ಸಿಂಹಪಾಳು ಸಿಕ್ಕಿದ್ದು, ಲಿಂಗಾಯಿತ ಸಮುದಾಯದಿಂದ 8 ಶಾಸಕರು ಸಚಿವರಾಗುತ್ತಿದ್ದು, ನಂತರದಲ್ಲಿ ಒಕ್ಕಲಿಗ ಕೋಟಾದಡಿ 7 ಹಾಗೂ ಹಿಂದುಳಿದ ವರ್ಗಗಳಿಗೆ ಒಕ್ಕಲಿಗರಿಗೆ ಸಮನಾಗಿ 7 ಬಂಪರ್ ಸಚಿವ ಸ್ಥಾನಗಳು ಸಿಕ್ಕಿದೆ.
ಉಳಿದಂತೆ ಎಸ್ಸಿ 3, ಎಸ್ಟಿ 01, ರೆಡ್ಡಿ 1, ಬ್ರಾಹ್ಮಣ-2 ಮತ್ತು ಓರ್ವ ಮಹಿಳೆಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ.
ಬಿಎಸ್ವೆöÊ ಸಂಪುಟದಲ್ಲಿ ಸಚಿವರಾಗಿದ್ದ ಜಗದೀಶ ಶೆಟ್ಟರ್, ಸುರೇಶ ಕುಮಾರ, ಅರವಿಂದ ಲಿಂಬಾವಳಿ, ಸಿ.ಪಿ.ಯೋಗೇಶ್ವರ, ಆರ್. ಶಂಕರ್, ಶ್ರೀಮಂತ ಪಾಟೀಲ್ ಹಾಗೂ ಉಪಮುಖ್ಯಮಂತ್ರಿಯಾಗಿದ್ದ ಲಕ್ಷö್ಮಣ ಸವದಿ ಅವರಿಗೆ ಈ ಬಾರಿಯ ಸಂಪುಟದಿAದ ಕೈಬಿಡಲಾಗಿದೆ.
ಮುಖ್ಯಮಂತ್ರಿಗಳು ಸಂಪುಟಕ್ಕೆ ಸೇರ್ಪಡೆಗಾಗಿ ಪ್ರಮಾಣ ವಚನ ಸ್ವೀಕರಕ್ಕೆ ಬರುವಂತೆ ಕರೆ ಮಾಡಲ್ಟಟ್ಟ ನೂತನ ಸಚಿವರುಗಳೆಂದರೆ
- ಕೆ.ಎಸ್. ಈಶ್ವರಪ್ಪ-ಶಿವಮೊಗ್ಗ
- ಆರ್. ಅಶೋಕ-ಪದ್ಮನಾಭ ನಗರ
- ಡಾ. ಸಿ.ಎನ್. ಅಶ್ವತ್ಥ ನಾರಾಯಣ-ಮಲ್ಲೇಶ್ವರಂ
- ಬಿ.ಶ್ರೀರಾಮುಲು- ಮೊಳಕಾಲುಮ್ಮೂರು,
- ಉಮೇಶ್ ಕತ್ತಿ- ಹುಕ್ಕೇರಿ
- ಎಸ್.ಟಿ.ಸೋಮಶೇಖರ್- ಯಶವಂತಪುರ
- ಡಾ.ಕೆ.ಸುಧಾಕರ್ -ಚಿಕ್ಕಬಳ್ಳಾಪುರ
- ಬೈರತಿ ಬಸವರಾಜ – ಕೆ ಆರ್ ಪುರಂ
- ಮುರುಗೇಶ್ ನಿರಾಣಿ – ಬಿಳಿಗಿ
- ಶಿವರಾಂ ಹೆಬ್ಬಾರ್- ಯಲ್ಲಾಪುರ
- ಶಶಿಕಲಾ ಜೊಲ್ಲೆ- ನಿಪ್ಪಾಣಿ
- ಕೆ.ಸಿ. ನಾರಾಯಣ್ ಗೌಡ – ಕೆಆರ್ ಪೇಟೆ
- ಸುನೀಲ್ ಕುಮಾರ್ -ಕಾರ್ಕಳ
- ಅರಗ ಜ್ಞಾನೇಂದ್ರ – ತೀರ್ಥ ಹಳ್ಳಿ
- ಗೋವಿಂದ ಕಾರಜೋಳ-ಮುಧೋಳ
- ಮುನಿರತ್ನ- ಆರ್ ಆರ್ ನಗರ
- ಎಂ.ಟಿ.ಬಿ ನಾಗರಾಜ್ – ಎಂ ಎಲ್ ಸಿ
- ಗೋಪಾಲಯ್ಯ- ಮಹಾಲಕ್ಷ್ಮಿ ಲೇಔಟ್
- ಮಾಧುಸ್ವಾಮಿ- ಚಿಕ್ಕನಾಯಕನಹಳ್ಳಿ
- ಹಾಲಪ್ಪ ಆಚಾರ್ ಯಲಬುರ್ಗಾ
- ಶಂಕರ್ ಪಾಟೀಲ್ ಮುನೇನಕೊಪ್ಪ
- ಕೋಟಾ ಶ್ರೀನಿವಾಸ ಪೂಜಾರಿ ಎಂ ಎಲ್ ಸಿ
- ಪ್ರಭು ಚೌವ್ಹಾಣ್ ಔರಾದ್
- ವಿ ಸೋಮಣ್ಣ -ಗೋವಿಂದ್ ರಾಜನಗರ.
- ಬಿ.ಸಿ. ನಾಗೇಶ-ತಿಪ್ಪಟೂರು
- ಎಸ್. ಅಂಗಾರ
- ಆನಂದಸಿAಗ್-ವಿಜಯನಗರ
- ಸಿ.ಸಿ. ಪಾಟೀಲ್
- ಬಿ.ಸಿ. ಪಾಟೀಲ್
ಪ್ರಥಮ ಬಾರಿಗೆ ಸಚಿವ ಸ್ಥಾನ ಅದೃಷ್ಟ ಒಲಿದಿರುವುದು ತೀರ್ಥಹಳ್ಳಿ ಕ್ಷೇತ್ರದ ಶಾಸಕ ಅರಗ ಜ್ಞಾನೇಂದ್ರ, ಕಾರ್ಕಳದ ಪಿ. ಸುನೀಲ್ ಕುಮಾರ, ರಾಜರಾಶ್ವರಿ ನಗರದ ಶಾಸಕ ಮುನಿರತ್ನ, ತಿಪ್ಪಟೂರು ಶಾಸಕ ಬಿ.ಸಿ. ನಾಗೇಶ.
13 ಜಿಲ್ಲೆಗಳಿಗೆ ಒಲಿಯದ ಸಚಿವ ಸ್ಥಾನ :
ಮೈಸೂರು, ಕಲಬುರಗಿ, ರಾಮನಗರ, ಕೊಡಗು, ರಾಯಚೂರು, ಹಾಸನ, ವಿಜಯಪುರ, ಬಳ್ಳಾರಿ, ದಾವಣಗೆರೆ
ಕೋಲಾರ, ಯಾದಗಿರಿ ಮತ್ತು ಚಿಕ್ಕಮಗಳೂರು ಈ ಜಿಲ್ಲೆಗಳಿಗೆ ಬೊಮ್ಮಾಯಿ ಸಂಪುಟದಲ್ಲಿ ಪ್ರಾತಿನಿಧ್ಯ ಸಿಕ್ಕಿಲ್ಲ.
ಅಲ್ಲದೇ ರಾಜ್ಯದ ಆರು ಜಿಲ್ಲೆಗಳಿಗೆ ಡಬಲ್ ಧಮಾಕ್ ಸಿಕ್ಕಿದ್ದು, ಇಬ್ಬರಿಬ್ಬರು ಸಚಿವರು ಪ್ರತಿನಿಸುತ್ತಿದ್ದಾರೆ.