ಇಂದಿನಿoದ 2 ದಿನ ವಿಕೆಂಡ್ ಲಾಕ್‌ಡೌನ್

0
1489

ಕಲಬುರಗಿ, ಜೂನ್. 18: ಕೋವಿಡ್ ಸೋಂಕು ನಿಯಂತ್ರಣಕ್ಕಾಗಿ ಜಿಲ್ಲಾಡಳಿತ 13ರಂದು ಹೊರಡಿಸಿದ ಮಾರ್ಗಸೂಚಿಯನ್ವಯ ಇಂದು ದಿನಾಂಕ 18.6.201ರ ಸಂಜೆ 7 ಗಂಟೆಯಿoದ 21.06.2021ರ ಬೆಳಿಗ್ಗೆ 6ರ ವರೆಗೆ ವರ‍್ಯಂತದ ಕರ್ಫ್ಯೂ ಜಾರಿಮಾಡಲಾಗಿದೆ.
ಹೊಟೆಲ್‌ಗಳಲ್ಲಿ ಪಾರ್ಸಲ್‌ನ್ನು ಬೆಳಿಗ್ಗೆ 10ರ ವರೆಗೆ ಮಾತ್ರ ಅವಕಾಶ ನೀಡಿದ್ದಲ್ಲದೇ ಇತರೆ ಅವಶ್ಯಕ ಸೇವೆಗಳಿಗೆ ಕರ್ಫ್ಯೂನಿಂದ ವಿನಾಯಿತಿ ನೀಡಲಾಗಿದೆ.
ಹಾಲು, ಹಣ್ಣಕು, ತರಕಾರಿ ಮಾರಾಟಕ್ಕೆ ಬೆಳಿಗ್ಗೆ 6 ರಿಂದ 10 ಗಂಟೆಯವರೆಗೆ ಎರಡು ಗಂಟೆಗಳ ಮಾತ್ರ ಅವಕಾಶವಿದ್ದು, ಉಳಿದ ಎಲ್ಲ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳಾದ ವಿ.ವಿ. ಜೋತ್ಸಾö್ನ ಅವರು ಆದೇಶ ಜಾರಿಮಾಡಿದ್ದಾರೆ.
21.06.2021ರ ಸರಕಾರ ಹೊರಡಿಸಿದ ಕರ್ಫ್ಯು ಅಂತ್ಯವಾಗಲಿದೆ.
ರಾಜ್ಯದಲ್ಲಿ ಇನ್ನು ಕರೊನಾ ಸಂಪೂರ್ಣವಾಗಿ ನಿಯಂತ್ರಣಕ್ಕೆ ಬಂದರೂ ಕೂಡಾ ಹಂತ ಹಂತವಾಗಿ ಕರ್ಫ್ಯೂ ಸಡಿಲಿಕೆ ಮಾಡಲಿದ್ದು, ಸೋಮವಾರಿಂದ ಈಗಿನ ಬೆಳಿಗ್ಗೆ 6 ರಿಂದ ಮಧ್ಯಾಹ್ನ 2ರ ವರೆಗೆ ನೀಡಲಾಗಿದ್ದ ವಾಣಿಜ್ಯ ಚಟುವಟಿಕೆಗಳ ಸಮಯವನ್ನು ಸೋಮವಾರದಿಂದ ಮಧ್ಯಾಹ್ನ 3ರ ವರೆಗೆ ವಿಸ್ತರಿಸುವ ಸಾಧ್ಯತೆಯಿದೆ ಎಂದು ನಂಬಲರ್ಹ ಮೂಲಗಳಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here