ಹಳೆ ವೈಶ್ಯಮ ಮಾಜಿ ಜಿ.ಪಂ. ಸದಸ್ಯನ ಸಹೋದರ ಹಣಮಂತ ಕೂಡಲಗಿ ಬರ್ಬರ ಹತ್ಯೆ

0
2465

ಕಲಬುರ್ಗಿ: ಹಳೆ ವೈಶ್ಯಮದ ಹಿನ್ನೆಲೆಯಲ್ಲಿ ಮಾರಕಾಸ್ತ ಝಳಪಿಳಿಸಿ ಮತ್ತೇ ಭೀಮಾ ತೀರದಲ್ಲಿ ನೆತ್ತರು ಹರಿದಿದೆ.
ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ, ಕಾಂಗ್ರೆಸ್ ಮುಖಂಡ ಶಾಂತಪ್ಪ ಕೂಡಲಗಿ ಅವರ ತಮ್ಮ ಹಣಮಂತ ಚಂದ್ರಶಾ ಕೂಡಲಗಿ (40) ಅವರನ್ನು ದುಷ್ಕರ್ಮಿಗಳು ಮಾರಕಾಸ್ತçಗಳಿಂದ ಕೊಲೆ ಮಾಡಿದ್ದಾರೆ.
ಬುಧವಾರ ಸಂಜೆ ಜೇವರ್ಗಿ ತಾಲ್ಲೂಕಿನ ಬಳ್ಳುಂಡಗಿ ಗ್ರಾಮದ ಬಳಿ ಈ ಘಟನೆ ನಡೆದಿದೆ.

ದೇವಿಯ ದರ್ಶನಕ್ಕಾಗಿ ಹೊರಟಾಗ ಕಾರು ಅಡ್ಡಗಟ್ಟಿ ಮಾರಕಾಸ್ತçಗಳಿಂದ ತಲೆಗೆ ಹೊಡೆದು ಕೊಲೆ ಮಾಡಲಾಗಿದೆ.
ಹಣಮಂತ ಹಾಗೂ ಆತನ ಅಣ್ಣ ಶಾಂತಪ್ಪ ಮಯೂರ ಗ್ರಾಮದ ಬಿಜೆಪಿ ಮುಖಂಡ ಶಿವಲಿಂಗ ಭಾವಿಕಟ್ಟಿ ಅವರ ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪದ ಮೇರೆಗೆ 2019ರ ನವೆಂಬರ್‌ನಲ್ಲಿ ಬಂಧನಕ್ಕೊಳಗಾಗಿದ್ದರು. ಕೆಲ ತಿಂಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಹಳೆ ದ್ವೇಷದ ಹಿನ್ನೆಲೆಯಲ್ಲಿ ಶಿವಲಿಂಗ ಅವರನ್ನು ಕೊಲೆ ಮಾಡಿದ್ದ ಸಹೋದರರ ವಿಚಾರಣೆ ಇನ್ನೂ ನಡೆಯುತ್ತಿತ್ತು.
ಕಲಬುರ್ಗಿಯಿಂದ ಇನ್ನೋವಾ ಕಾರಿನಲ್ಲಿ ಬಳ್ಳುಂಡಗಿಯತ್ತ ತೆರಳುತ್ತಿದ್ದ ಹಣಮಂತ ಅವರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು ಮಾರಕಾಸ್ತçಗಳಿಂದ ಹೊಡೆದುದ್ದರಿಂದ ತಲೆಯ ಭಾಗ ಛಿದ್ರವಾಗಿದೆ. ಕಾರಿನ ಗಾಜುಗಳು ಒಡೆದಿವೆ.
ಮೃತ ದೇಹವನ್ನು ಜೇವರ್ಗಿಯ ಸರಕಾರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕೊಂಡ್ಯೋಯ್ಯಲಾಗಿದೆ.
ಸ್ಥಳಕ್ಕೆ ಡಿವೈಎಸ್ಪಿ ತಾಯಪ್ಪ ದೊಡ್ಡಮನಿ, ಜೇವರ್ಗಿ ಸಿಪಿಐ ಶಿವಪ್ರಸಾದ್, ನೆಲೋಗಿ ಪಿಎಸ್‌ಐ ರಾಜಕುಮಾರ ಜಮಗೊಂಡ ಭೇಟಿ ನೀಡಿದರು.

LEAVE A REPLY

Please enter your comment!
Please enter your name here