ಸುನೀಲ್ ವಲ್ಯಾಪೂರೆ ಅವರಿಗೆ ವಿಧಾನ ಪರಿಷತ್‌ಗೆ ನಾಮನಿರ್ದೇಶನಕ್ಕೆ ಭೋವಿ ವಡ್ಡರ ಸಮಾಜ ಆಗ್ರಹ

0
1685

ಕಲಬುರಗಿ, ಜೂ. ೪: ಮಾಜಿ ಸಚಿವ ಹಾಗೂ ಬಿಜೆಪಿಯ ಹಿರಿಯ ಧುರೀಣರಾದ ಸುನೀಲ್ ವಲ್ಯಾಪೂರೆ ಅವರಿಗೆ ಈ ತಿಂಗಳು ತೆರವಾಗಲಿ ರುವ ವಿಧಾನ ಪರಿಷತ್ ಸ್ಥಾನಕ್ಕೆ ನಾಮನಿರ್ದೇಶನ ಮಾಡಬೇಕೆಂದು ಜಿಲ್ಲಾ ಭೋವಿ (ವಡ್ಡರ) ಸಮಾಜವು ಬಿಜೆಪಿ ನಾಯಕರಿಗೆ ಆಗ್ರಹಿಸಿದೆ.
ಇಂದು ಪತ್ರಿಕಾ ಭವನದಲ್ಲಿ ಪತ್ರಿ ಕಾಗೋಷ್ಠಿಯಲ್ಲಿ ಮಾತನಾಡಿದ ಭೋವಿ ಸಮಾಜದ ಜಿಲ್ಲಾಧ್ಯಕ್ಷರಾದ ತಿಪ್ಪಣ್ಣ ಒಡೆಯರಾಜ, ೧೨ ವಿಧಾನ ಪರಿಷತ್ ಸದಸ್ಯರುಗಳ ಅಧಿಕಾರಾ ವಧಿ ಮುಗಿಯಲಿದ್ದು, ಈ ತೆರವಾದ ಈ ಸ್ಥಾನಗಳಲ್ಲಿಗೆ ಒಡ್ಡರ ಭೋವಿ ಸಮಾಜ ಯಾವುದೇ ಪಕ್ಷಗಳು ಮಾನ್ಯತೆ ನೀಡಿಲ್ಲ, ಕಲಬುರಗಿ ಜಿಲ್ಲೆ ಯಲ್ಲಿ ೧ ಲಕ್ಷಕ್ಕೂ ಅಧಿಕ ಮತದಾ ರರನ್ನು ಹೊಂದಿದ ಭೋವಿ ವಡ್ಡರ ಸಮಾಜವು ಈ ಹಿಂದೆ ಗೋವಿಂದ ಪಿ. ಒಡೆಯರಾಜ ಅವರನ್ನು ಜನತಾ ಪಕ್ಷದಿಂದ ವಿಧಾನ ಪರಿಷತ್ ಗೆ ನಾಮಕರಣ ಮಾಡಿದ್ದು ಬಿಟ್ಟರೆ ಇಲ್ಲಿಯವರೆಗೆ ನಮ್ಮ ಸಮಾಜಯ ಯಾವೊಬ್ಬ ನಾಯಕರಿಗೂ ವಿಧಾನ ಪರಿಷತ್‌ಗೆ ನಾಮಕರಣ ಮಾಡಿಲ್ಲ ಎಂದು ಅವರು ಪ್ರಸ್ತುತ ಲೋಕಸಭೆ ಸದಸ್ಯರಾದ ಉಮೇಶ ಜಾಧವರ ಅವರ ವಿಧಾನ ಸಭೆ ಶಾಸಕ ಸ್ಥಾನ ಕ್ಕೆ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ವಲ್ಯಾಪೂರೆ ಅವರಿಗೆ ಟಿಕೆಟ್ ನೀಡದೇ, ಉಮೇಶ ಜಾಧವರ ಅವರ ಪುತ್ರ ಡಾ. ಅವಿನಾಶ ಜಾಧವ ಅವರಿಗೆ ಚಿಂಚೋಳಿ ಮತಕ್ಷೇತ್ರದ ಟಿಕೆಟ್ ನೀಡಿದಾಗ ಅವರ ಗೆಲುವಿ ಗಾಗಿ ಹಗಲಿರುಳಿ ಶ್ರಮಿಸಿ, ಅವರ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ವಲ್ಯಾಪೂರೆ ಅವರನ್ನು ಈ ಖಾಲಿಯಿರುವ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಭೋವಿ ವಡ್ಡರ ಸಮಾಜ ಕ್ಕೆ ಪ್ರಾತಿನೀಧ್ಯ ನೀಡಿದಂತಾಗುತ್ತದೆ ಎಂದು ಅವರು ಹೇಳಿದ್ದಾರೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರಕಾರದಲ್ಲಿ ಮುಖ್ಯಮಂತ್ರಿ ಯಡಿ ಯೂರಪ್ಪ ಅವರ ಸಂಪುಟದಲ್ಲಿ ಮಂತ್ರಿ ಸ್ಥಾನವನ್ನು ತ್ಯಾಗಮಾಡಿ, ಯಡಿಯೂರಪ್ಪ ಅವರಲ್ಲಿ ನಿಷ್ಠೆಯಿ ಟ್ಟಿ ಸುನೀಲ್ ವಲ್ಯಾಪೂರೆ ಅವರನ್ನು ವಿಧಾನ ಪರಿಷತ್‌ಗೆ ನಾಮನಿರ್ದೇಶ ನ ಮಾಡಬೇಕೆಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ, ರಾಜ್ಯ ಬಿಜೆಪಿ ಅಧ್ಯಕ್ಷರಾದ ನಳಿನಕುಮಾರ ಕಟೀಲ್ ಹಾಗೂ ಬಿಜೆಪಿ ರಾಷ್ಟಾç ಧ್ಯಕ್ಷರಾದ ಜೆ. ಪಿ. ನಡ್ಡಾ ಅವರಲ್ಲಿ ಮನವಿ ಮಾಡಿಕೊಳ್ಳಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭೋವಿ ವಡ್ಡರ ಸಮಾಜದ ಗೌರವಾಧ್ಯಕ್ಷರಾದ ರಾಮು ನಂದೂರ, ನಗರಾಧ್ಯಕ್ಷರಾದ ಭೀಮಾಶಂಕರ ಭಂಕೂರ, ಪ್ರಧಾನ ಕಾರ್ಯದರ್ಶಿ ರಾಜಕುಮಾರ ಶಿಂಧೆ ಅವರುಗಳು ಸೇರಿದಂತೆ ಇನ್ನು ಹಲ ವಾರು ಸಮಾಜದ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here