ಕಲಬುರಗಿ, ಜ. 20: ಉಚ್ಚ ನ್ಯಾಯಾಲಯದ ತೀರ್ಪಿನ ಆಧಾರದ ಮೇಲೆ ರಾಮ ಮಂದಿರ ಟ್ರಸ್ಟ್ ರಚನೆ ಮಾಡಲಾಗಿದ್ದು, ರಾಮ ಮಂದಿರ ನಿರ್ಮಾಣಕ್ಕಾಗಿ ಸರಕಾರದಿಂದ ಒಂದು ರೂಪಾಯಿ ಕೂಡಾ ತೆಗೆದುಕೊಳ್ಳದೇ ದೇಶದ ಎಲ್ಲ ವರ್ಗದ ಜನರಿಂದ ದೇಣಿಗೆ ಸಂಗ್ರಹಿಸಿ ಹಿಂದೂ ಹೃದಯ ಸಾಮ್ರಾಟ್ ಶ್ರೀ ರಾಮನಿಗೆ ಭವ್ಯ ಮಂದಿರ ಕಟ್ಟಲು ನಿಧಿ ಸಂಗ್ರಹಿಸಲಾಗುತ್ತಿದ್ದು, ಇಂತಹದರಲಿ ಲಿಂಗಾಯಿತರು ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿಧಿ ನೀಡಬೇಡಿ ಎಂಬ ಕಾಂಗ್ರೆಸ್ನ ಮಾಜಿ ಶಾಸಕ ಬಿ. ಆರ್. ಪಾಟೀಲರ್ ಹೇಳಿಕೆ ಉದ್ಧಟತನದಿಂದ ಕೂಡಿದೆ ಎಂದು ಜಿಲ್ಲಾ ಪಂಚಾಯತ್ ಸದಸ್ಯ ಹರ್ಷಾನಂದ ಗುತೇದಾರ ಅವರು ಹೇಳಿದ್ದಾರೆ.
ಅವರಿಂದಿಲ್ಲಿ ಪತ್ರಿಕಾ ಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತ ಮಂದಿರ ನಿರ್ಮಾಣಕ್ಕಾಗಿ ಮುಸ್ಲಿಂ ಸಮುದಾಯವರು ಕೂಡಾ ಎಷ್ಟೋ ಕಡೆ ನಿಧಿ ನೀಡುತ್ತಿದ್ದು, ವಿವಿಧತೆಯಲ್ಲಿ ಏಕತೆ ಎಂಬ ಮಹಾಮಂತ್ರದೊAದಿಗೆ ನಮ್ಮ ದೇಶ ವಿಶ್ವದಲ್ಲಿಯೇ ಸೌಹಾರ್ದತೆಗೆ ಪ್ರತೀಕವಾಗಿದೆ. ಸ್ವಾಮಿ ವಿವೇಕಾನಂದರ ವಿಚಾರಧಾರೆಯನ್ನು, ಸಂವಿಧಾನಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಅವರ ಸಮಾನತೆಯ ದೃಷ್ಟಿಕೊನದ ವಿಚಾರಧಾರೆ ಅವರು ಬರೆದ ಸಂವಿಧಾನ ವಿಶ್ವದಲ್ಲಿಯೇ ಉನ್ನತ ಮಟ್ಟದ ಸಂವಿಧಾನವಾಗಿದ್ದು, ಅವರನ್ನು ನಾವು ಪೂಜನೀಯ ಭಾವನೆಯಿಂದ ಗೌರವಿಸುತ್ತೇವೆ, ಅಲ್ಲದೇ 12ನೇ ಶತಮಾನದಲ್ಲಿಯೇ ಅಣ್ಣ ಬಸವಣ್ಣ ಕೂಡಾ ಸಮಾನತೆಯ ಮಂತ್ರ ಸಾರಿದ್ದು, ಅವರ ವಚನಗಳಿಗೂ ಇಂದಿಗೂ ಜನರ ಮನದಲ್ಲಿ ಮೆಲಕುಹಾಕುತ್ತಿವೆ, ಅವರನ್ನು ಕೂಡಾ ನಾವು ಸಾಮಾಜಿಕ ಬದಲಾವಣೆಯ ಸಂಕೇತ ಎಂದು ಗೌರವಿಸಿ ನಮಿಸುತ್ತೇವೆ, ಶ್ರೀ ರಾಮನ ಆದರ್ಶಕ್ಕಾಗಿಯೇ ಅವರನ್ನು ಪೂಜಿಸಲು ಭವ್ಯ ಮಂದಿರ ನಿರ್ಮಾಣ ಮಾಡುತ್ತಿರುವುದಾಗಿದೆ. ಇದು ಯಾವುದೇ ಒಂದು ಪಕ್ಷ, ವ್ಯಕ್ತಿಯ ಸ್ವತ್ವ ಆಗಬಾರದೆಂದು ಸರ್ವರಿಂದ ದೇಣಿಗೆ ಸಂಗ್ರಹಿಸಿ ಮಂದಿರ ನಿರ್ಮಾಣವಾಗಲಿದೆ ಎಂದರು.
ಈಗಾಗಲೇ ಆಳಂದಲ್ಲಿ ಶಿವನ ಭವ್ಯ ಮೂರ್ತಿ ಪ್ರತಿಷ್ಠಾಪನೆಗಾಗಿ 2 ಎಕರೆ ಭೂಮಿಯನ್ನು ಮಂಜೂರು ಮಾಡಲು ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದ್ದು, ಶೀಘ್ರದಲ್ಲಿಯೇ ಶಿವನ ಭವ್ಯ ಮೂರ್ತಿಯನ್ನು ಆಳಂದಲ್ಲಿ ಸ್ಥಾಪಿಸಲಾಗುವುದು ಎಂದು ಕೂಡಾ ಈ ಸಂದರ್ಭದಲ್ಲಿ ಹೇಳಿದರು.
ರಾಮ ಮಂದಿರ ನಿರ್ಮಾಣಕ್ಕಾಗಿ ದೇಣಿಗೆ ನೀಡಬೇಡಿ ಎಂದು ಕರೆ ನೀಡಿರುವ ಬಿ. ಆರ್. ಪಾಟೀಲ್‌ರ ಹೇಳಿಕೆ ಬಹುಸಂಖ್ಯಾತ ಹಿಂದುಗಳ ಭಾವನೆಯನ್ನು ಕೆರಳಿಸುವ ಹೇಳಿಕೆಯಾಗಿದ್ದು, ಕೂಡಲೇ ಬಿ. ಆರ್. ಪಾಟೀಲ್ ಅವರು ಬೇಷರತ್ ಹಿಂದೂಗಳಿಗೆ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ಒಂದು ಸಮಾಜವನ್ನು ಓಲೈಸಲು ಇಂತಹ ಧ್ವಂಧ ಹೇಳಿಕೆಯಿಂದ ಜನರ ಭಾವನೆಗಳಿಗೆ ಧಕ್ಕೆ ತಂದರೆ ಜನ ನಿಮ್ಮನ್ನು ಪಾಠ ಕಲಿಸದೇ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ. ಚುನಾವಣೆಯಲ್ಲಿ ಸೋತು ಹತಾಷೆಯಿಂದ ಈ ರೀತಿಯ ಹೇಳಿಕೆ ನೀಡುತ್ತಿರುವುದು ಖಂಡನೀಯವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ಹಿರಿಯ ಮುಖಂಡ ಹಣಮಂತರಾವ ಮಲಾಜಿ, ಹಿಂದೂಪರ ಸಂಘಟನೆ ಮುಖಂಡ ರಾಜು ಭವಾನಿ, ಹಿಂದೂ ರಕ್ಷಕ ಶಿವಾಜಿ ಬ್ರಿಗೇಡ್ ಅಧ್ಯಕ್ಷ ಗುರುಶಾಂತ ಟೆಂಗಳಿ, ಚಂದ್ರಕಾAತ ಬೋಡಕೆ ಅವರುಗಳು ಉಪಸ್ಥಿತರಿದ್ದರು.
Home Featured Kalaburagi ಶ್ರೀ ರಾಮ ಮಂದಿರ ನಿರ್ಮಾಣಕ್ಕೆ ನಿಧಿ ನೀಡಬೇಡಿ ಬಿ.ರ್. ಹೇಳಿಕೆ ಉದ್ಧಟತನದ್ದು:ಹರ್ಷಾನಂದ ಗುತೇದಾರ