29ರ ಮಧ್ಯರಾತ್ರಿಯಿಂದ 30ರ ವರೆಗೆ ಜಿಲ್ಲೆಯಲ್ಲಿ ಮದ್ಯದಂಗಡಿಗಳು ಬಂದ್

0
1303








ಕಲಬುರಗಿ, ಡಿ. 29: ಇತ್ತೀಚೆಗೆ ಗ್ರಾಮ ಪಂಚಾಯತ್‌ಗಳಿಗೆ ಜರುಗಿದ ಚುನಾವಣೆಯ ಮತಗಳ ಏಣಿಕೆ ಶಾಂತಿಯುತವಾಗಿ ನ್ಯಾಯಸಮ್ಮತವಾಗಿ ಜರುಗುವಲ್ಲಿ ಜಿಲ್ಲಾಧಿದಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಗಳಾದ ವಿವಿ ಜೋತ್ಸಾö್ನ ಅವರು ಜಿಲ್ಲೆಯಲ್ಲಿ ಇಂದು 29ರ ಮಧ್ಯರಾತ್ರಿ 12 ರಿಂದ 30.12.2020ರ ಮಧ್ಯರಾತ್ರಿ 12ರ ವರೆಗೆ ಮತ ಏಣಿಕೆ ಕೇಂದ್ರದ 5 ಕಿ.ಮೀ. ವ್ಯಾಪ್ತಿ ಪ್ರದೇಶದಲ್ಲಿ ಮಾತ್ರ ಮದ್ಯಂದಗಡಿಗಳು, ಮದ್ಯ ತಯಾರಿಕಾ ಘಟಕಗಳಣ್ನು ಮುಚ್ಚುವಂತೆ ಆದೇಶಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಮತ ಏಣಕೆ ಜರುಗಲಿರುವ ಎಲ್ಲಾ ತಾಲೂಕು ಕೇಂದ್ರಗಳಿಗೆ ಮಾತ್ರ ಅನ್ವಯವಾಗುವಂತೆ ಆದೇಶ ಹೊರಡಿಸಿದ್ದಾರೆ.
ರಾಜ್ಯ ಚುನಾವಣಾಧಿಕಾರಿಗಳ ಆಧೀನ ಕಾರ್ಯದರ್ಶಿಗಳ ನಿರ್ದೇಶನದ ಮೇರೆಗೆ ಈ ಆದೇಶ ಜಾರಿಮಾಡಲಾಗಿದೆ.
ಜಿಲ್ಲೆಯಲ್ಲಿ ಮತ ಏಣಿಕೆ ಜರುಗಲಿರುವ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಮತ ಏಣಿಕೆ 100 ಮೀಟರ್ ವ್ಯಾಪ್ತಿ ಪ್ರದೇಶದಲ್ಲಿ 30ರಂದು ಬೆಳಿಗ್ಗೆ 6 ರಿಂದ ಮಧ್ಯರಾತ್ರಿ 12ರ ವರೆಗೆ ಕಲಂ 144ರ ಅನ್ವಯ ಮತ ಏಣಿಕೆಗೆ ಸಂಬAಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಹೊರತುಪಡಿಸಿ ಇತರರ ಪ್ರವೇಶವನ್ನು ನಿಷೇಧಿಸಲಾಗಿದೆ.
ಜಿಲ್ಲೆಯಾದ್ಯಂತ ನಡೆಯುತ್ತಿರುವ ಗ್ರಾಮ ಪಂಚಾಯತ್ ಚುನಾವಣೆಯ ಮತ ಏಣಿಕೆ ಕಾರ್ಯವು ಜರುಗಲಿರುವ ಗ್ರಾಮೀಣ್ಹ ಪಟ್ಟಣ, ನಗರದ ವ್ಯಾಪ್ತಿಯಲ್ಲಿ 5 ಅಥವಾ 5ಕ್ಕಿಂತ ಹೆಚ್ಚು ಜನರು ಗುಂಪು ಕೂಡುವುದು ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದು ನಿಷೇಧಿಸಿ ಆದೇಶಿಸಿದ್ದಾರೆ.
ಶವ ಸಂಸ್ಕಾರ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲ

LEAVE A REPLY

Please enter your comment!
Please enter your name here