ಬೆಂಗಳೂರು, ಡಿ. 29: ಬ್ರಿಟನ್‌ನಿಂದ ಆಮದಾದ ಹೊಸ ರೂಪಾಂತರ ಕೊರೊನಾ ಈಗಾಗಲೇ ರಾಜ್ಯ ರಾಜಧಾನಿಯಲ್ಲಿ 3 ಜನರಿಗೆ ಒಕ್ಕರಿಸಿದ್ದು, ಇದನ್ನು ನಿಯಂತ್ರಿಸಲು ಸರಕಾರ ಈಗಾಗಲೇ ಅವರಿದ್ದ ಅಪಾರ್ಟ್ಮೆಂಟ್‌ನಲ್ಲಿಯ ಎಲ್ಲ ಕುಟುಂಬಗಳನ್ನು ಅಂಬ್ಯುಲೇನ್ಸ್ ಮೂಲಕ ವಿವಿಧ ಆಸ್ಪತ್ರೆಗಳಿಗೆ ಸ್ಥಳಾಂತರಿಸಿ, ಅವರನ್ನು ಕ್ವಾರಂಟೈನ್‌ನಲ್ಲಿ ಇಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ ಅವರು ಹೇಳಿದ್ದಾರೆ.
ಆದರೆ ಇದನ್ನು ನಿಯಂತ್ರಿಸಲು ರಾಜ್ಯದಲ್ಲಿ ಲಾಕ್‌ಡೌನ್ ಆಗಲಿ, ಸೀಲ್‌ಡೌನ್ ಮಾಡುವ ಅಗತ್ಯವಿಲ್ಲ ಅಲ್ಲದೇ ನೈಟ್ ಕರ್ಫ್ಯೂ ಕೂಡಾ ಹೇರಲಾಗುವುದಿಲ್ಲ ಎಂದು ಸಚಿವರು ವಿವರಿಸಿದರು.
ರೂಪಾಂತರ ವೈರಸ್‌ನ್ನು ತಡೆಗಟ್ಟಲು ವಿಮಾನ ನಿಲ್ದಾಣದಲ್ಲಿಯೇ ಎಲ್ಲರನ್ನು ವಶಕ್ಕೆ ಪಡೆದು, ಕ್ವಾರಂಟೈನ್ ಇಟ್ಟು, ಅವರ ರಕ್ತದ ಮಾದರಿಯನ್ನು ಪರೀಕ್ಷಿಸಿ, ಕೊರೊನಾ ಇಲ್ಲವೆಂದು ವರದಿ ಬಂದ ಬಳಿಕವೇ ಅವರನ್ನು ಅವರವರ ಮನೆಗಳಿಗೆ ಕಳುಹಿಸಿಕೊಡಲಾಗುತ್ತದೆ ಎಂದರು.