ಕಲಬುರಗಿ.ಡಿ.0- ಕಲಬುರಗಿ ಜಿಲ್ಲೆಯ 261 ಗ್ರಾಮ ಪಂಚಾಯತಿಗಳ ಪೈಕಿ 242 ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆಸಲು ರಾಜ್ಯ ಚುನಾವಣಾ ಆಯೋಗ ಸೋಮವಾರ ಘೋಷಿಸಿದೆ. ಗ್ರಾಮ ಪಂಚಾಯಿತಿಗಳ ಚುನಾವಣೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ತಾಲೂಕಿನ ತಹಶೀಲ್ದಾರರ ಕಚೇರಿಗಳಲ್ಲಿ ಸಹಾಯವಾಣಿ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಚುನಾವಣಾಧಿಕಾರಿ ವಿ.ವಿ.ಜ್ಯೋತ್ಸಾö್ನ ಅವರು ತಿಳಿಸಿದ್ದಾರೆ.
ಸಹಾಯವಾಣಿ ವಿವರ ಇಂತಿದೆ: ಕಲಬುರಗಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ (ಚುನಾವಣೆ ಶಾಖೆ) ಸಹಾಯವಾಣಿ ಸಂಖ್ಯೆ 08472-278606, ಕಲಬುರಗಿ ತಹಶೀಲ್ದಾರರ ಕಚೇರಿ ಸಹಾಯವಾಣಿ ಸಂಖ್ಯೆ 08472-278657, ಆಳಂದ ತಹಶೀಲ್ದಾರರ ಕಚೇರಿ ಸಹಾಯವಾಣಿ ಸಂಖ್ಯೆ 08477-202428, ಅಫಜಲಪುರ ತಹಶೀಲದ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 08470-283028, ಜೇವರ್ಗಿ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 08442-236025, ಸೇಡಂ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 08441-276038, ಚಿತ್ತಾಪುರ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 08474-236147, ಚಿಂಚೋಳಿ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 08475-273027, ಕಮಲಾಪುರ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 08478-221101 ಹಾಗೂ ಕಾಳಗಿ ತಹಶೀಲ್ದಾರ ಕಚೇರಿ ಸಹಾಯವಾಣಿ ಸಂಖ್ಯೆ 08474-227666.