ಜನತಾ ಬಜಾರ ಚುನಾವಣೆ ಫಲಿತಾಂಶ ಪ್ರಕಟ 10 ಜನರ ಆಯ್ಕೆ

0
1365

(ನಮ್ಮ ಪ್ರತಿನಿಧಿಯಿಂದ)
ಕಲಬುರಗಿ, ನ. 28: 2020-2025 ಐದು ವರ್ಷಗಳ ಅವಧಿಗಾಗಿ ಇಂದು ಗುಲಬರ್ಗಾ ಜಿಲ್ಲಾ ಕೇಂದ್ರ ಸಹಕಾರ ಸಗಟು ಮಾರಾಟ ಮಂಡಳಿಯ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 10 ಜನರು ನಿರ್ದೇಶಕ ಮಂಡಳಿಯ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಒಟ್ಟು 19 ಸ್ಥಾನಗಳುಳ್ಳ ನಿರ್ದೇಶಕ ಆಡಳಿತ ನಿರ್ದೇಶಕ ಮಂಡಳಿಗೆ ಈಗಾಗಲೇ 9 ಜನರು ಅವಿರೋಧವಾಗಿ ಆಯ್ಕೆಗೊಂಡಿದ್ದು, ಇಂದು 10 ಸ್ಥಾನಗಳಿಗೆ ನಡೆದ ಮತದಾನದಲ್ಲಿ ಒಟ್ಟು 22 ಜನ ಅಭ್ಯರ್ಥಿಗಳು ಸ್ಪರ್ಧಿಸಿದ್ದರು.
‘ಸಿ’ ವರ್ಗದ ಕ್ಷೇತ್ರದಲ್ಲಿ ಸಾಮಾನ್ಯ, ಪರಿಶಿಷ್ಟ ಜಾತಿ ಮೀಸಲು, ಹಿಂದುಳಿದ ವರ್ಗ ‘ಅ’ ಮೀಸಲು, ಮಹಿಳಾ ಮೀಸಲು, ಮಹಿಳಾ ಸಹಕಾರ ಸಂಘಗಳ ‘ಡಿ’ ವರ್ಗದ ಸಾಮಾನ್ಯ ಹಾಗೂ ಇತರೆ ಸಹಕಾರ ಸಂಘಗಳ ‘ಎ’ ವರ್ಗದ ಸಾಮಾನ್ಯ ಮತಕ್ಷೇತ್ರಗಳಿಂದ ಅಭ್ಯರ್ಥಿಗಳು ಕಣದಲ್ಲಿದ್ದರು.
‘ಸಿ’ ವರ್ಗದ ಸಾಮಾನ್ಯ ಕ್ಷೇತ್ರದಿಂದ ಅಣವೀರಪ್ಪ ಶಿವಶಂಕರ ಕಾಳಗಿ ಅವರು 317, ಅಬ್ದುಲ ಹಫೀಜ ಖಸಾಬ 302, ಸಿದ್ರಾಮಪ್ಪ ಸುರೇಶ ಪಾಟೀಲ 295, ಅಲ್ಲದೇ ಸಿ ವರ್ಗದ ಮಹಿಳಾ ಮೀಸಲು ಮತಕ್ಷೇತ್ರದಿಂದ ಶ್ರೀಮತಿ ಅನ್ನಪೂರ್ಣ ಮಲ್ಲಿನಾಥ ಸರೆಗಶೆಟ್ಟಿ 336, ಶ್ರೀಮತಿ ನಿಲೋಫರ ಬೇಗಂ ಮಹ್ಮದ 270, ‘ಸಿ’ ವರ್ಗದ ಹಿಂದುಳಿದ ವರ್ಗ ‘ಅ’ ಮೀಸಲು ಕ್ಷೇತ್ರದಿಂದ ಮಹ್ಮದ ನಿಜಾಮುದ್ದೀನ್ ಅತ್ತರರವಾಲೆ 337, ‘ಸಿ’ ವರ್ಗದ ಪರಿಶಿಷ್ಟ ಜಾತಿ ಮೀಸಲು ಕಲಬುರಗಿ ಕ್ಷೇತ್ರದಿಂದ ರಮೇಶ ಶರಣಪ್ಪ ಕಮಲಾಪೂರ 368, ಮಹಿಳಾ ಸಹಕಾರ ಸಂಘಗಳ ‘ಡಿ’ ವರ್ಗದ ಸಾಮಾನ್ಯ ಕಲಬುರಗಿ ಕ್ಷೇತ್ರದಿಂದ ಶ್ರೀಮತಿ ಮೇಹರೂನ ನಿಸಾರಬೇಗಂ 06, ಇತರೆ ಸಹಕಾರ ಸಂಘಗಳ ‘ಎಫ್’ ವರ್ಗದ ಕಲಬುರಗಿ ಸಾಮಾನ್ಯ ಕ್ಷೇತ್ರದಿಂದ ರಾಜಕುಮಾರ ಗಉರಲಿಂಗಪ್ಪಾ ಕೋಟಿ ಮತ್ತು ಶ್ರೀಮತಿ ವಂದನಾ ವಿದ್ಯಾಧರ ಮಂಗಳೂರು ಅವರುಗಳು ಅಂತಿಮವಾಗಿ ನಿರ್ದೇಶಕ ಮಂಡಳಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ರಿತೇಶ ಸೂಗೂರ ಅವರು ತಿಳಿಸಿದ್ದಾರೆ.
ಹಿಂದೆAದೂ ಕಾಣದ ತುರುಸಿನ ಚುನಾವಣೆ
ಜನತಾ ಬಜರಾ ಎಂಬುದು ಯಾರಿಗೂ ಗೊತ್ತಿಲ್ಲ ಎನಂತಿಲ್ಲ, ಆದರೆ ಇದಕ್ಕೆ ಚುನಾವಣೆ ನಡೆದದ್ದು ಗೋತ್ತಾಗುವುದು ಫಲಿತಾಂಶ ನಂತರವೇ ಜನತಾ ಬಜರಾಗೆ ಚುನಾವಣೆ ನಡೆದಿದೆ ಎಂದು.
ಆದರೆ ಈ ಬಾರಿ ಭಾರೀ ತುರುಸಿನ ಸ್ಪರ್ಧೆ ಏರ್ಪಟ್ಟಿದ್ದು, ಯಾವ ಸಹಕಾರ ಹಾಗೂ ಸಹಕಾರ ಬ್ಯಾಂಕ್‌ಗಳಿಗೂ ನಡೆಯುವ ಚುನಾವಣೆಗಿಂತ ಭಾರೀ ವಿಭಿನ್ನವಾಗಿತ್ತು.
ಈ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here