ಡಿಸಿಸಿ ಬ್ಯಾಂಕ್ ಚುನಾವಣೆ ಹಿಡಿತ ಕಳೆದಕೊಳ್ಳಲಿರುವ ಕಾಂಗೈ

0
1214

ಕಲಬುರಗಿ, ನ. 27:ಮುಂದಿನ ಐದು ವರ್ಷದ ಅವಧಿಗಾಗಿ ಇದೇ ತಿಂಗಳು 29ರಂದು ನಡೆಯಲಿರುವ ಕಲಬುರಗಿ, ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ ಈ ಬಾರಿ ಕಳೆದ ಮೂರು ದಶಕಗಳಿಂದ ಹಿಡಿತದಲ್ಲಿಟ್ಟಿ ಕೊಂಡಿದ್ದ ಕಾಂಗೈ ಈ ಬಾರಿ ಅಧಿಕಾರ ಕಳೆದುಕೊಳ್ಳಲಿದೆಯೇ?
ಈಗಾಗಲೇ ಬ್ಯಾಂಕಿನ ಆಡಳಿತ ಮಂಡ ಳಿಯ ಸದಸ್ಯ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗಿದ್ದು, ಅದರಲ್ಲಿ 5 ಸದಸ್ಯರುಗಳು ಕಾಂಗೈ ಬೆಂಬಲಿತ ಅಭ್ಯರ್ಥಿಗಳಾಗಿದ್ದು, ಇನ್ನು ಉಳಿದ ಎರಡು ಸ್ಥಾನಗಳನ್ನು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾ ಗಿದ್ದಾರೆ.
ಒಟ್ಟು 13 ಆಡಳಿತ ಮಂಡಳಿಯ ಸದಸ್ಯ ಸ್ಥಾನದ ಈ ಬ್ಯಾಂಕಿನಲ್ಲಿ ಆಡಳಿತ ಚುಕ್ಕಾಣಿ ಹಿಡಿಯಲು 9 ಮ್ಯಾಜಿಕ್ ನಂಬರ್ ಆಗಿದೆ.
ಇನ್ನು 6 ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ 12 ಜನ ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಕಣದಲ್ಲಿದ್ದವರ ಪೈಕಿ ಈಗಾಗಲೇ ಬ್ಯಾಂ ಕಿನ ಅಧ್ಯಕ್ಷ ಹುದ್ದೆ ಈ ಹಿಂದೆ ಅಲಂಕರಿಸಿದ ಜೆಡಿಎಸ್‌ನ ಕೇದಾರಲಿಂಗಯ್ಯ ಹಿರೇಮಠ, ಕಾಂಗೈನ ಸಿದ್ರಾಮರೆಡ್ಡಿ, ಸೋಮಶೇಖರ ಗೋನಾಯಕ ಅವರುಗಳು ಅವರುಗಳು ಮತ್ತೋಮ್ಮೆ ಅಧ್ಯಕ್ಷ ಗದ್ದುಗೆ ಎರಲು ಕಣ ದಲ್ಲಿ ಧುಮಕಿದ ಪ್ರಮುಖರಾಗಿದ್ದಾರೆ.
ಇನ್ನು ಬೆಜೆಪಿ ಬೆಂಬಲಿತ ಜೇವರ್ಗಿಯ ನಿಂಗಪ್ಪ ಮಾಳಪ್ಪ ದೊಡ್ಡಮನಿ, ಸಾವಿತ್ರಿ ಬಾಯಿ ಕುಳಗೇರಿ, ಶಿವಾನಂದ ಮಾನಕರ್, ಶೈಲೇಂದ್ರಕುಮಾರ ಹುಲಿ ಅವರುಗಳು ಅಭ್ಯರ್ಥಿಗಳಾಗಿದ್ದಾರೆ.
ಈಗಾಗಲೇ ಅವಿರೋಧವಾಗಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಶೋಕ ಸಾವಲೇಶ್ವರ ಅವರು ಆಯ್ಕೆಯಾಗಿ ಕಾಂಗೈ ಸೇರ್ಪಡೆಗೊಂಡಿದ್ದಾರೆ.

LEAVE A REPLY

Please enter your comment!
Please enter your name here