ಕಲಬುರಗಿ, ನ. 3: ಮಾರಕಾಸ್ತ್ರಗಳಿಂದ ಕೊಚ್ಚಿ ವ್ಯಕ್ತಿಯೋರ್ವನ ಬರ್ಬರ ಕೊಲೆ ಮಾಡಿದ ಘಟನೆ ನಿನ್ನೆ ರಾತ್ರಿ 8.30ರ ಸುಮಾರಿಗೆ ನಗರದ ಕೈಲಾಸ ನಗರದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಕೊಲೆಯಾದ ವ್ಯಕ್ತಿ ಆಳಂದ ತಾಲೂಕಿನ ಕಡಗಂಚಿ ಗ್ರಾಂದ ಶಿವಲಿಂಗಪ್ಪ ಹಣಮಂತಪ್ಪ ಭೂಗಶೆಟ್ಟಿ (53) ಎಂದು ಹೇಳಲಾಗಿದೆ.
ಈ ಹಿಂದೆ ಅಂದರೆ 2017ರಲ್ಲಿ ಹೊಲ ಖರೀದಿ ಸಂಬAಧ ನಡೆದ ಜಗಳವೇ ಇದಕ್ಕೆ ಕಾರಣವೆಂದು ಹೇಳಲಾಗಿದ್ದು, 4 ಎಕರೆ 4 ಗುಂಟೆ ಹೊಲ ಖರೀದಯ ಪ್ರಕರಣಕ್ಕೆ ಸಂಬAಧಿಸಿದAತೆ ರಾಜಪ್ಪ ಮತ್ತು ಆತನ ಮಕ್ಕಳಾದ ಓಂಕಾರ, ಸೇರಿದಂತೆ 4 ಜನರು ಕೂಡಿಕೊಂಡು ಈ ಕೊಲೆಯನ್ನು ಮಾಡಿದ್ದಾರೆಂದು ಪೋಲಿಸ ಮೂಲಗಳಿಂದ ತಿಳಿದುಬಂದಿದೆ.
ಕಳೆದ ರಾತ್ರಿ ಶಿವಲಿಂಗಪ್ಪ ಭೂಗಶೆಟ್ಟಿ ಅವರು ಮನೆ ಬಳಿ ನಿಂತಾಗ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.
ಶಿವಲಿಂಗಪ್ಪ, ಆಳಂದ ತಾಲೂಕಿನ ಕಡಗಂಚಿ ಗ್ರಾಮದ ನಿವಾಸಿಯಾಗಿದ್ದು, ಅರು ಕಲಬುರಗಿ ನಗರದ ಕೈಲಾಶ್ ನಗರದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಈ ಬಗ್ಗೆ ರಾಘವೇಂದ್ರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಪೋಲಿಸರು ತನಿಖೆ ಮುಂದುವರೆಸಿದ್ದಾರೆ.