ಕಲಬುರಗಿ:ಅ.14: ರಾಜ್ಯದಲ್ಲಿ ಕಳೆದ 5 ದಿನಗಳಿಂದ ಸುರಿಯುತ್ತಿರುವ ಕುಂಭ ದ್ರೋಣ ಮಳೆಯಿಂದ ಉಂಟಾದ ಹಾನಿಯ ಕುರಿತು ಸರಕಾರಕ್ಕೆ ವರದಿ ಕಳಿಸಲು ಈಗಾಗಲೇ ಸೂಚಿಸಲಾಗಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತ್Àರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಅವರು ಹೇಳಿದರು.
ಬುಧವಾರ ಗೋಲ್ಡ್ ಹಬ್ ಸಭಾಂಗ ಣದಲ್ಲಿ ಈಶಾನ್ಯ ವಲಯ ಶಿಕ್ಷಕರ ಕ್ಷೇತ್ರದಿಂದ ರಾಜ್ಯ ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಶಶೀಲ್ ಜಿ. ನಮೋಶಿ ಪರ ಪ್ರಚಾರಕ್ಕೆ ಆಗಮಿಸಿದ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತ, ಭಾರೀ ಮಳೆಗೆ ಉತ್ತರ ಕರ್ನಾಟಕದ ಜಿಲ್ಲೆಗಳು ತತ್ತರಿಸಿದ್ದು, ಕಲಬುರಗಿ, ಯಾದಗಿರ, ರಾಯಚೂರು, ವಿಜಯಪುರ ಜಿಲ್ಲೆಗಳು ಮಳೆಗೆ ತಲ್ಲರ್ಣಣ ಗೊಂಡಿವೆ, ಅಲ್ಲಿ ಜನ ಜೀವನ ದುಸ್ಥರವಾ ಗಿದ್ದು, ಈ ಹಿನ್ನೆಲೆಯಲ್ಲಿ ಪರಿಹಾರ ಕಾಮಗಾರಿಗಾಗಿ ಮಳೆಹಾನಿ ವರದಿಗೆ ಸೂಚಿ ಸಲಾಗಿದೆ ಎಂದರು.
ಕಳೆದ 50 ವರ್ಷಗಳಲ್ಲಿಯೇ ಈ ಬಾರಿ ಭಾರೀ ಮಳೆಯಾಗಿದ್ದು ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ಎಲ್ಲ ಜಿಲ್ಲಾದಿ üಕಾರಿಗಳು ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಈಗಾಗಲೇ ಸೂಚಿಸಲಾಗಿದೆ ಎಂದು ಅವರು ಹೇಳಿದರು.
ಚುನಾ ವಣೆ ಇರುವುದರಿದ ಯಾವ ಭರವಸೆಯನ್ನೂ ಸಹ ನೀಡಲು ಬರುವು ದಿಲ್ಲ. ರಸ್ತೆ, ಸೇತುವೆ ಹಾಗೂ ಎಲ್ಲ ಹಾನಿಗಳ ಕಾಮಗಾರಿ ಮಾಡಿಸಲಾಗುವುದು ಎಂದು ತಿಳಿಸಿದ ಅವರು, ಇನ್ನು ಚುನಾವಣೆ ಮುಗಿ ಯು ತ್ತಿದ್ದಂತೆಯೇ ಸರ್ಕಾರ ಕಾರ್ಯಪ್ರವೃ ತ್ತವಾಗಲಿದೆ ಎಂದರು.
ಈ ಸಂದರ್ಭದಲ್ಲಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷ ರಾಜಕುಮಾರ್ ಪಾಟೀಲ್ ತೆಲ್ಕೂರ್, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ದತ್ತಾತ್ರೇಯ್ ಪಾಟೀಲ್ ರೇವೂರ್, ಶಾಸಕರಾದ ಬಸವರಾಜ್ ಮತ್ತಿಮೂಡ್, ಸುನೀಲ್ ವಲ್ಲ್ಯಾಪೂರ್, ಡಾ. ಅವಿನಾಶ್ ಜಾಧವ್, ರಘುನಾಥರಾವ್ ಮಲ್ಕಾಪೂರೆ, ರಾಜ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಶಶೀಲ್ ಜಿ. ನಮೋಶಿ, ಅಶ್ವತ್ಥ ನಾರಾಯಣ್, ಪಕ್ಷದ ಜಿಲ್ಲಾಧ್ಯಕ್ಷ ಶಿವರಾಜ್ ಪಾಟೀಲ್ ರದ್ದೆವಾಡಗಿ, ನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್, ಅರುಣ್ ಕುಲಕರ್ಣಿ, ಅಶ್ವತ್ಥ ನಾರಾಯಣ್, ಅಶೋಕ್ ಅಲ್ಲಾಪೂರ್ ಮುಂತಾದವರು ಉಪಸ್ಥಿತ ರಿದ್ದರು.