ಬಾಬ್ರಿ ಮಸೀದಿ ಧ್ವಂಸ ನ್ಯಾಯಾಲಯದ ತೀರ್ಪು ನ್ಯಾಯದ ಅಪಹಾಸ್ಯ : ಸಿಪಿಐ (ಎಂ) ಆರೋಪ

0
941

ಕಲಬುರಗಿ, ಅ. 1: ಬಾಬಿ ಮಸೀದಿ ದೃಂಸ ಪ್ರಕರಣ ಪೂರ್ವನಿಯೋಜಿತವಲ್ಲ ಆಕಸ್ಮಿಕ ಅಂತ ಹೇಳಿ ಲಖ್ನೋ ವಿಶೇಷ ನ್ಯಾಯಾಲಯ ಅಭಿಪ್ರಾಯ ಪಟ್ಟು 32 ಆರೋಪಿಗಳಿಗೂ ಕ್ಲೀನ ಚಿಟ್ ನೀಡಿ. ಕೇಸನ್ನು ಖುಲಾಸೆಗೊಳಿಸಿ ನ್ಯಾಯಾಲಯ ನೀಡಿದ ತೀರ್ಪು ನ್ಯಾಯದ ಅಪಹಾಸ್ಯವಾಗಿದೆ ಎಂದು ಸಿಪಿಐ (ಎಂ.) ಆರೋಪಿಸಿದೆ.
ಈ ತೀರ್ಪನ್ನು ಪ್ರಶ್ನಿಸಿ ಮುಸ್ಲಿಂ ಮಂಡಳಿ ಹೈಕೋರ್ಟ ಮೇಟ್ಟಿಲರಲು ಚಿಂತನೆ ನಡೆಸಿದೆ.
1992 ರಲ್ಲಿ ಮಸೀದಿ ಕೆಡವಲು ಸಂಚು ರೂಪಿಸಿದ್ದು ಗೊತ್ತಾಗಿ ಅಂದಿನ ಅಧಿಕಾರಿಗಳು ಮುನ್ನೆಚ್ಚರಿಕೆ ಭಾಗವಾಗಿ ಸಂವಿಧಾನದ 356 ನೇ ವಿಧಿಯನ್ನು ಬಳಕೆ ಮಾಡಿ ಬಾಬ್ರಿ ಮಸೀದಿ.
ಕಟ್ಟಡ ಕೇಂದ್ರ ಸರಕಾರ ತನ್ನ ಸುಪರ್ದಿಗೆ ತಗೆದುಕೊಳ್ಳಬೇಕೆಂದು 2 ದಿನಗಳ ಮುಂಚೆಯೇ ಗೃಹ ಸಚಿವಾಲಯವು ಅಂದಿನ ಪ್ರಧಾನ ಮಂತ್ರಿಗಳಾದ ಪಿ.ವಿ.ನರಸಿಂಹರಾವ ಅವರಿಗೆ ಕೇಳಿತ್ತು ಆದರೆ. ಪ್ರಧಾನ ಮಂತ್ರಿಗಳು ತಮ್ಮದೇ ಕಾರಣ ನೀಡಿ ಬಾಬರೀ ಮಸೀದಿ ಕಟ್ಟಡ ಕೇಂದ್ರ ಸರಕಾರದ ವಶಕ್ಕೆ. ತೆಗೆದುಕೊಳ್ಳಲು ನಿರಾಕರಿಸಿತು.
ಅಂದಿನ, ಕಾಂಗ್ರೆಸ್ ಆಡಳಿತ ಸರಕಾರ, ಬಾಬರೀ ಮಸೀದಿಯ ಕಟ್ಟಡ. ತನ್ನ ಸುಪರ್ಧಿಗೆ ತೆಗೆದುಕೊಳ್ಳುವ ಏಕೈಕÀ ಮಾರ್ಗ ಕೈಚೆಲ್ಲಿತು. ಸಿಬಿಐ ಕೇಂದ್ರ ಸರಕಾರದ ಒತ್ತಡಕ್ಕೆ ಮಣಿದು ಆರೋಪಿಗಳು ಖುಲಾಸೆಯಾಗುವಂತೆ ಬಲಾಡ್ಯ ಆರೋಪಿಗಳಿಗೆ ಅನುಕೂಲವಾಗುವಂತೆ ಚಾರ್ಜಶೀಟ ಸಲ್ಲಿಸಿದೆ ಎಂದು ಅವರುಗಳು ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ತೀರ್ಪು ನ್ಯಾಯಾಂಗದ ಮೇಲಿರುವ ಜನತೆಯ ವಿಶ್ವಾಸಕ್ಕೆ ಧಕ್ಕೆ ತಂದಿದ್ದು, ಅಧಿಕಾರಕ್ಕೆ ಬಂದಾಗಿನಿAದ ನ್ಯಾಯಾಂಗದ ಪರಂಪರೆ ಉಲ್ಲಂಘಿಸಿ ಸಂವಿಧಾನದ ಕಲಂಗಳು ಹಾಗೂ ಹಲವಾರು ಕಾನೂನುಗಳನ್ನು ಗಾಳಿಗೆ ತೂರಿ ಕೇಂದ್ರ ಸರಕಾರ ಹೇಳಿದ್ದನ್ನು ಮಾತ್ರ ಮಾಡುತ್ತಿದೆ. ದೇಶದ ಸಂವಿಧಾನದ 3ನೇ ಅಂಗ ಎಂಬುದನ್ನು ಮರೆಮಾಚುವಂತ ಸ್ಥಿತಿ ಬಂದೊದಗಿದೆ ಎಂದು ಸಿಪಿಐ ಎಂ. ನ ರಾಜ್ಯ ಸಮಿತಿ ಸದಸ್ಯರಾದ ಮಾರುತಿ ಮಾನಪಡೆ ಹಾಗೂ ಶರಣಬಸಪ್ಪ ಮಮಶೆಟ್ಟಿ ಅವರು ಹೇಳಿದ್ದಾರೆ.

LEAVE A REPLY

Please enter your comment!
Please enter your name here