ಪಿತ್ತಜನಾಂಕಗ ಕಸಿಗಾಗಿ ಆಸ್ಪತ್ರೆ ಸೇರಿದ ಜೀವನ ಪ್ರಕಾಶ ನಿಧನ

0
1153

ಕಲಬುರಗಿ, ಸೆ. ೨೯: ನಗರದ ರೋಜಾ ಬಡಾವಣೆಯ ಬಡಕುಟುಂಬದ ೧೮ ವರ್ಷದÀ ಜೀವನ್ ಪ್ರಕಾಶ ತಂದೆ ನಿರಂಜನತ್ ಎಂಬವನಿಗೆ ಕ್ರಿಪ್ಟೋಜೆನಿಕ್ ಡಿಕೊಂಪೆನ್ಸೇಟೆಡ್ ಲಿವರ್ ಡಿಸೀಸ್ ಬಳಲುತ್ತಿದ್ದ ಯುವಕ ನಿನ್ನೆ ಸಾವನ್ನಪ್ಪಿದ್ದಾನೆಂದು ತಿಳಿಸಲು ವಿಷಾಧವೆನಿಸುತ್ತದೆ.
ಕಳೆದ ಒಂದು ತಿಂಗಳಿನಿAದ ಪಿತ್ತಜನಕಾಂಗ (ಲೀವರ್) ಕಸಿಗಾಗಿ ಬೆಂಗಳೂರಿನ ಬೆಂಗಳೂರಿನ ಆಸ್ಟರ್ ಸಿಎಂಐ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು.
ಇನ್ನೆನ್ನು ಪಿತ್ತಜನಕಾಂಗ ಕಸಿ ಮಾಡುವ ಸಲುವಾಗಿ ಆಫರೆಷನ್ ಥೇಟರ್‌ಗೆ ಕರೆದೊಯ್ಯುವ ಒಂದು ಗಂಟೆ ಮುಂಚೆ ಒಮ್ಮೊದೊಮ್ಮೆಲೆ ರಕ್ತ ವಾಂತಿ ಮಾಡಿ ಯುವಕ ಮೃತಪಟ್ಟನೆಂದು ತಿಳಿದುಬಂದಿದೆ.
ಬೆAಗಳೂರಿನ ಮಿಲಾಪ್ ಸಂಸ್ಥೆ ಇಂತಹವರ ನೆರವಿಗೆ ಬಂದು ಪಿತ್ತಜನಕಾಂಗದ ಕಸಿಗೆ ದಾನಿಗಳಿಂದ ಸುಮಾರು ೧೦.೮೭ ಲಕ್ಷ ರೂ. ಸಂಗ್ರಹಿಸಿ ಆಸ್ಪತ್ರೆಗೆ ನೀಡಿತ್ತು.
ಆದರೆ ದುರದೈವಶಾತ ಯುವಕ ಬದುಕುಳಿಯದೇ ಕೊನೆಗೆ ಕೊನೆಯುಸೆರೆಳೆದನು. ಯುವಕನ ಅಂತ್ಯಕ್ರಿಯೇ ಇಂದು ಕಲಬುರಗಿ ನಗರದ ರೋಜಾ ಬಡಾವಣೆಯ ರುದ್ರಭೂಮಿಯಲ್ಲಿ ನೆರವೇರಿಸಲಾಯಿತು.
ಈ ಜೀವನ ಪ್ರಕಾಶ ನೆರವಿಗಾಗಿ ಸೆ. ೯ರಂದು ನಮ್ಮ ಪತ್ರಿಕೆಯು ಸುದ್ದಿ ಪ್ರಕಟಿಸಿದ್ದು, ದಾನಿಗಳ ನೆರವು ಈ ಯುವಕನಿಗೆ ದೊರೆತರೂ ಕೂಡ ವಿಧಿ ಮಾತ್ರ ಕರುಣೆ ತೋರಲಿಲ್ಲ ಎಂಬುದೇ ದುರ್ದೈವದ ಸಂಗತಿ.

LEAVE A REPLY

Please enter your comment!
Please enter your name here