ಕಲಬುರಗಿ, ಸೆ. 28: ಅಖಿಲ ಭಾರತ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಕಾನ್‌ಫಡರೇಷನ್‌ನ ಕರೆಯ ಮೇರೆಗೆ ದೇಶದಲ್ಲಿನ ವಿವಿಧÀ ರಾಜ್ಯಗಳ ವಿಶ್ವವಿದ್ಯಾಲಯಗಳ ಶಿಕ್ಷಕೇತರ ನೌಕರರ ಜನವಿರೋಧಿ ರಾಷ್ಟ್ರೀಯ ಶಿಕ್ಷಣ ನೀತಿ-2020 ವಿರುದ್ಧ ಒಂದು ದಿನದ ಪತ್ರಿಭಟನೆಯನ್ನು ಬರುವ ಬುಧುವಾರ 30.9.2020ರಂದು ಆಯೋಜಿಸಲಾದೆ ಎಂದು ಕಾನ್ ಫೆಡರೇಶನ್‌ನ ಮಹಾ ಕಾರ್ಯದರ್ಶಿ ಎಂ. ಬಿ. ಸಜ್ಜನ ಹೇಳಿದ್ದಾರೆ.
ಅವರಿಂದಲ್ಲಿ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ವಿಶ್ವವಿದ್ಯಾಲಯದ ಶಿಕ್ಷಕೇತರ ನೌಕರರುಗಳು 2 ತಾಸಿನ ಮುಷ್ಕರ ನಡೆಸಿ ಆ ಜನ ವಿರೋಧಿ ಶಿಕ್ಷಣ ನೀತಿಯನ್ನು ತಡೆಹಿಡಿಯುವಂತೆ ಕೋರಿ ಆಯಾ ವಿಶ್ವವಿದ್ಯಾಲಯಗಳ ಕುಲಪತಿಗಳ ಮುಖಾಂತರ ಘನತೆವೆತ್ತ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ತಿಳಿಸಿದರು.
ನೀತಿಯಿಂದಾಗಿ ಶಿಕ್ಷಣದ ಗುಣ್ಣಮಟ್ಟ ತೀವ್ರವಾಗಿ ಕುಸಿಯುವದು. ಶಿಕ್ಷಣದ ಸೌಲಭ್ಯಗಳಲ್ಲಿ, ಅವಕಾಶಗಳಲಿ ಮತ್ತು ಪ್ರವೇಶಗಳಲ್ಲಿ ತೀವ್ರವಾದ ತಾರತಮ್ಯಗಳು ಹೆಚ್ಚಾಗಲಿವೆ. ಹಳ್ಳಿಗಾಡಿನ ಹಾಗೂ ಪರಿಶಿಷ್ಟಜಾತಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕೂಡ ಪ್ರವೇಶಾತಿಯಲ್ಲಿ ಕಡಿಮೆ ಪ್ರಮಾಣದ ಅವಕಾಶಗಳು ಸಿಗಲಿವೆ ಎಂದು ವಿವರಿಸಿದರು.