ಬೆAಗಳೂರು , ಸೆ 24 : ಸ್ಯಾಂಡಲ್‌ವುಡ್‌ನ ಡ್ರಗ್ಸ್ ಪ್ರಕರಣಕ್ಕೆ ಸಂಬAಧಿಸಿದAತೆ ನಟಿ, ನಿರೂಪಕಿ ಅನುಶ್ರೀಗೆ ಸಂಕಷ್ಟ ಎದುರಾಗುವ ಭೀತಿಯಿದೆ.
ಡ್ರಗ್ಸ್ ಜಾಲದಲ್ಲಿ ಬಂಧಿತರಾಗಿರುವ ಆರೋಪಿ ಕಿಶೋರ್ ಶೆಟ್ಟಿ ಹಾಗೂ ತರುಣ್ ನೀಡಿರುವ ಮಾಹಿತಿಯ ಆಧಾರದಲ್ಲಿ ಸಿಸಿಬಿ ಪೊಲೀಸರು ಆಕೆಯನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ.
ಡ್ರಗ್ಸ್ ಮಾರಾಟದ ಆರೋಪದಲ್ಲಿ ಮಾಲುಸಹಿತ ಸಿಕ್ಕಿಬಿ ದ್ದಿರುವ ಕಿಶೋರ್ ಶೆಟ್ಟಿಗೆ ಮಾತ್ರವಲ್ಲದೆ, ಆತನ ಸಹವರ್ತಿ, ಗೆಳೆಯ ತರುಣ್ ಜತೆಗೂ ಆಕೆಯ ನಂಟಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಅನುಶ್ರೀ, “ಹತ್ತು ವರ್ಷಗಳ ಹಿಂದಿನ ಡಾನ್ಸ್ ರಿಯಾಲಿಟಿ ಶೋ ನಲ್ಲಿ ತರುಣ್ ಅವರು ನನಗೆ ಕೊರಿಯಾಗ್ರಾಫರ್ ಆಗಿದ್ದರು. ಕಿಶೋರ್ ಶೆಟ್ಟಿ ಸ್ಪರ್ಧಿಯಾಗಿದ್ದರು. ಆಗ ಪರಿಚಯವಾಗಿತ್ತು. ಮೂರು ವರ್ಷಗಳ ಹಿಂದೆ ತರುಣ್ ಅವರ ಡಾನ್ಸ್ ಕ್ಲಾಸ್ ಉದ್ಘಾಟಿಸಲು ಹೋಗಿದ್ದೆ. ಆನಂತರ ಅವರೊಂದಿಗೆ ಸಂಪರ್ಕವಿರಲಿಲ್ಲ” ಎಂದು ಸ್ಪಷ್ಟಪಡಿಸಿ ದ್ದಾರೆ.
“ತರುಣ್ ಮತ್ತು ಕಿಶೋರ್ ಶೆಟ್ಟಿಯ ಜತೆ ಡಾನ್ಸ್ ರಿಯಾಲಿಟಿ ಶೋಗಳು ಹಾಗೂ ನನ್ನಂತೆ ಅವರೂ ಸಹ ಮಂಗಳೂರು ಮೂಲದವರು ಎಂಬ ಕಾರಣಕ್ಕೂ ಚೆನ್ನಾಗಿ ಮಾತನಾಡುತ್ತಿದ್ದೆವು. ಡಾನ್ಸ್ ಅಭ್ಯಾಸ ಮಾಡುತ್ತಿದ್ದೆವು. ಆದರೆ ಆನಂತರ ಅವರ ಬಗ್ಗೆ ತಿಳಿದುಬಂದಿಲ್ಲ ಹಾಗೂ ವ್ಯವಹಾರಗಳ ಅರಿವೂ ಇಲ್ಲ” ಎಂದಿದ್ದಾರೆ.
“ಒAದು ವೇಳೆ ನನಗೆ ನೋಟಿಸ್ ಬಂದಲ್ಲಿ ವಿಚಾರಣೆಗೆ ಹಾಜರಾಗುತ್ತೇನೆ. ತಪ್ಪೆ ಮಾಡಿಲ್ಲ ಎಂದ ಮೇಲೆ ಭಯ ವೇಕೆ ಎಂದು ಅನುಶ್ರೀ ಹೇಳಿದ್ದಾರೆ.
ನಾನು ಬೆಂಗಳೂರಿನಲ್ಲಿ ಇಲ್ಲ, ನನ್ನ ಮೋಬೈಲ್ ಫೋನ್ ಸಿಗುತ್ತಿಲ್ಲ ಎಂಬ ಎದ್ದಿರುವ ಊಹಾಪೋಹಗಳಿಗೆ ಉತ್ತರಿಸಿದ ಅನುಶ್ರೀ ನಾನು ನನ್ನ ಬೆಂಗಳೂರಿನ ಮನೆಯಲ್ಲಿಯೇ ಇದ್ದೇನೆ, ಮತ್ತು ನನ್ನ ಮೋಬೈಲ್ ಫೋನ್ ಕೂಡ ಚಾಲ್ತಿಯಲ್ಲಿದೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.