11 ಪ್ರಕರಣಗಳ ಕುಖ್ಯಾತ ನಾಲ್ವರು ಸರಗಳ್ಳರ ಬಂಧನ 13.80 ಲಕ್ಷ ಮೌಲ್ಯದ 271 ಗ್ರಾಂ. ಬಂಗಾರದ ಆಭರಣ ವಶಕ್ಕೆ

0
1152

ಕಲಬುರಗಿ, ಸೆ. 14: ಕಳೆದ ಹಲವಾರು ತಿಂಗಳಿAದ ಪೋಲಿಸರಿಗೆ ಚಳ್ಳೆಹಣ್ಣು ತಿನ್ನಸುತ್ತಿದ್ದ ಸರಗಳ್ಳರನ್ನು ಬಂಧಿಸುವ ಮೂಲಕ ಅವರಿಂದ 13.80 ಲಕ್ಷ ರೂ. ಮೌಲ್ಯದ 271 ಗ್ರಾಂ ಬಂಗಾರದ ಆಭರಣಗಳನ್ನು ವಶಕ್ಕೆ ಪಡೆದಿದ್ದಾರೆ.
ಇವುಗಳು ನಗರದ ಚೌಕ್ ಠಾಣಾ ವ್ಯಾಪ್ತಿಯಲ್ಲಿ ನಡೆದ 6 ಸರ ಕಳ್ಳತನ ಪ್ರಕರಣ ಸೇರಿದಂತೆ ಎಂ.ಬಿ. ನಗರ ಠಾಣಾ ವ್ಯಾಪ್ತಿಯಲ್ಲಿ 2, ಬ್ರಹ್ಮಪೂರ ವ್ಯಾಪ್ತಿಗೆ ಬರುವ 2 ಮತ್ತು ಸ್ಟೇಷನ್ ಬಜಾರ ಪೋಲಿಸ್ ಠಾಣಾವ್ಯಾಪ್ತಿಯ ಒಂದು ಪ್ರಕರಣವನ್ನು ಪೋಲಿಸರು ಬೇಧಿಸಿದ್ದಾರೆ.
ಚೌಕ್ ಪೋಲಿಸ್ ಠಾಣೆಯ ಸರ್ಕಲ್ ಇನ್ಸ್ಪೇಕ್ಟರ್ ಎಸ್. ಆರ್. ನಾಯಕ ಅವರ ನೇತೃತದಲ್ಲಿ ತಂಡವು ಯಶಸ್ವಿಯಾಗಿ ಬೇಧಿಸಿದೆ.
2020ರ ಆಗಸ್ಟ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಒಟ್ಟು 179 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 59 ಪ್ರಕರಣಗಳು ಬೇಧಿಸಿದ ಪೋಲಿಸರು 47 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣಗಳು ಸೇರಿದಂತೆ ನಗದು ವಶಕ್ಕೆ ಪಡೆದಿದ್ದಾರೆ.
ಇಂದು ಪೋಲಿಸ್ ಮೈದಾನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಗರ ಪೋಲಿಸ್ ಆಯುಕ್ತ ಎನ್. ಸತೀಶಕುಮಾರ, ಕಳೆದ 5 ತಿಂಗಳಿAದ ಕೋವಿಡ್ ಹಿನ್ನೆಲೆಯಲ್ಲಿ ಲಾಕ್‌ಡೌನ್‌ನಿಂದಾಗಿ ಸಮಾಜಿಕ ಅಂತರ ಕಾಯ್ದುಕೊಳ್ಳುವ ಹಿನ್ನೆಲೆಯಲ್ಲಿ ಪೋಲಿಸರು ಯಾವುದೇ ಕರ‍್ಯಾಚರಣೆಗಳಿದಿರಲಿಲ್ಲ. ಈಗ ಮತ್ತೇ ಪೋಲಿಸರು ಹೆಚ್ಚು ಸಕ್ರೀಯವಾಗಿ ಕಾರ್ಯಾಚರಣೆ ಮಾಡಿ ಈ ಪ್ರಕರಣ ಆರೋಪಿಗಳನ್ನು ಬಂಧಿಸಿದ್ದಾರೆ ಎಂದರು.
ಒಂಟಿಯಾಗಿ ರಸ್ತೆಯ ಮೇಲೆ ಹೋಗುತ್ತಿರುವ ಮಹಳೆಯರು ಮತ್ತು ವೃದ್ಧರೆ ಮುಖ್ಯವಾಗಿ ಟಾರ್‌ಗೇಟ್ ಮಾಡಿ ಬೈಕ್‌ನಲ್ಲಿ ಬಂದು ಚೈನ್‌ಗಳನ್ನು ಕಳ್ಳರು ಕದಿಯುತ್ತಿದ್ದರೆಂದ ಅವರು ಇದಕ್ಕಾಗಿ ಒಂದು ಗ್ಯಾಂಗ್‌ನ ಸದಸ್ಯರು ನಗರದ ಹಲವಡೆ ವಿವಿಧ ಬಡಾವಣೆಗಳಲ್ಲಿ ಬಂಗಾರದ ಚೈನ್, ಮಾಂಗಲ್ಯ ಕಳ್ಳತನ ಮಾಡುತ್ತಿದ್ದರು.
ಈ ಗ್ಯಾಂಗ್‌ನ ಮುಖ್ಯ ಆರೋಪಿ ಮಹಾರಾಷ್ಟçದ ಸೋಲಾಪುರದವನ್ನಾಗಿದ್ದು, ಈ ಪ್ರಕರಣದಲ್ಲಿ ಬಳಸುತ್ತಿದ್ದ ಬೈಕ್ ಕಳ್ಳತನಮಾಡಿದ್ದೇ ಆಗಿದ್ದು, ಪ್ರಮುಖ ಆರೋಪಿ ತಪ್ಪಿಸಿಕೊಂಡಿದ್ದು, ಉಳಿದ 4 ಜನ ಆರೋಪಿಗಳನ್ನು ಬಂಧಿಸಲಾಗಿದೆ ಎಂದರು.
ವಶಕ್ಕೆ ಪಡೆದ ಬಂಗಾರ ಆಭರಗಳನ್ನು ಆಯಾ ಸಂತಸ್ತರಿಗೆ ಮರಳಿಸಲಾಗಿದ್ದು, ಹೆಚ್ಚನ ಸಂಖ್ಯೆಯಲ್ಲಿ ಮಹಿಳೆಯರೇ ಸರಗಳ್ಳತನಕ್ಕೆ ಒಳಗಾಗಿದ್ದವರಾಗಿದ್ದರು. ಸರ ಕಳೆದುಕೊಂಡವರಿಗೆ ಅವರವರ ಬಂಗಾರದ ಆಭರಣಗಳನ್ನು ಪೋಲಿಸ್ ಆಯುಕ್ತರು ನೀಡಿದರು.
ಈ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಉಪ ಪೋಲಿಸ ಆಯುಕ್ತ ಕಿಶೋರ ಬಾಬು, ಚೌಕ್ ಠಾಣೆಯ ಸಿಪಿಐ ಎಸ್.ಆರ್. ನಾಯಕ ಸೇರಿದಂತೆ ಇನ್ನು ಹಲವಾರು ಪೋಲಿಸ ಅಧಿಕಾರಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here