ಜೈಲು ಪಂಜರ ಸೇರಿದ (ರಾ) ಗಿಣಿ ಸಿಸಿಬಿ ಕಸ್ಟಡಿಗೆ (ಗಲ) ರಾಣಿ ಶಿಫ್ಟ್

0
994

ಬೆಂಗಳೂರು, ಸೆ. 14: ಡ್ರಗ್ ಪ್ರಕರಣಕ್ಕೆ ಸಂಬAಧಿಸಿದ ಕನ್ನಡ ಚಿತ್ರತಾರೆ ಪಂಜಾಬಿ ಕನ್ನಡ ಹುಡುಗಿ ರಾಗಿಣಿ ಸೇರಿ 5 ಜನರಿಗೆ 14 ದಿನಗಳ ಕಾಲ ನ್ಯಾಯಾಂಗ್ ಬಂಧನ ವಿಧಿಸಿದ್ದರಿಂದ ಪರಪ್ಪನ ಅಗ್ರಹಾರ ಸೇರಬೇಕಾಗಿದೆ.
ಇನ್ನೋರ್ವ ಕನ್ನಡದ ಗಂಡ ಹೆಂಡತಿ ಹಾಗೂ ದಂಡುಪಾಳ್ಯ ಚಿತ್ರತಾರೆ ಸಂಜನಾ ಗಲ್ರಾಣಿಗೆ ಹೆಚ್ಚಿನ ವಿಚಾರಣೆಗೆ ಸಿಸಿಬಿ ಕಸ್ಟಡಿಗೆ ನೀಡಿದೆ.
ಡ್ರಗ್ ಪೆಡ್ಲರಗಳಾದ ಲೂಮ್ ಪೆಪ್ಪರ್, ಪ್ರಶಾಂತ್ ರಂಕಾ, ರಾಹುಲ್, ವಿರೇನ್ ಖನ್ನಾ, ರವಿಶಂಕರ್ ಅವರುಗಳು ಜೈಲು ಸೇರಿದ ಇನ್ನಿತರ 5 ಜನರಾಗಿದ್ದಾರೆ.
ಕಳೆದ 15 ದಿನಗಳಿಂದ ಸ್ಯಾಂಡಲ್‌ವುಡ್‌ನ್ನೇ ಬೆರಗಾಗಿಸಿದ ಡ್ರಗ್ ಮಾಫಿಯಾದ ಜಾಡ ಹಿಡಿದು ಹೊರಟ ಸಿಸಿಬಿ ಪೋಲಿಸರು ದಿನಕ್ಕೊಂದು ಟ್ವಿಸ್ಟರ ನಂತೆ ಈ ಪ್ರಕರಣದಲ್ಲಿ ಒಟ್ಟು 12 ಜನರ ವಿರುದ್ಧ ಮೊದಲ ತನಿಖಾ ವರದಿ ಸಿದ್ದಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಿದೆ.
ನಿನ್ನೆಯಷ್ಟ ನಟಿ ರಾಗೀಣಿ ಹಾಗೂ ಸಂಜನಾ ಅವರ ಡ್ರಗ್ ಮ್ಯಾಪಿಂಗ್‌ಗಾಗಿ ರಕ್ತ ಹಾಗೂ ಮೂತ್ರದ ಮಾದರಿಗಳನ್ನು ಸಂಗ್ರಹಿಸಿ ಪರೀಕ್ಷೆಗೊಳಪಡಿಸಿದ ಬೆನ್ನಹಿಂದೆಯೆ ನ್ಯಾಯಾಲಯ ಇಂದು ಡ್ರಗ್ ಪೆಡ್ಲರ್‌ಗಳಿಗೆ 14 ದಿನಗಳ ನ್ಯಾಯಾಂಗ ಬಂಧನ ನೀಡಿ ಆದೇಶ ಹೊರಡಿಸಿದೆ.
ಡ್ರಗ್ಸ್ ಜಾಲ ಪ್ರಕರಣದಲ್ಲಿ ಸಿಲುಕಿ ಸಿಸಿಬಿ ವಶದಲ್ಲಿರುವ ರಾಗಿಣಿ ಅವರ 12 ದಿನದ ಹಾಗೂ ಸಂಜನಾ ಅವರ ಒಂದು ವಾರದ ಪೊಲೀಸ್ ಕಸ್ಟಡಿ ಅವಧಿ ಮುಗಿದಿದ್ದು, ಈ ಇಬ್ಬರನ್ನು ಕೆಸಿಜನರಲ್ ಆಸ್ಪತ್ರೆಯಲ್ಲಿ ವೈದ್ಯಕೀಯ ತಪಾಸಣೆಗೊಳಪಡಿಸಿ ನ್ಯಾಯಾಲಯಕ್ಕೆ ಹಾಜರಿ ಪಡಿಸಲಾಯಿತು.
ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ರಾಗಿಣಿ ಸೇರಿ 6 ಆರೋಪಿಗಳಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿದೆ.
ನಂತರ ಅವರನ್ನು ಅಲ್ಲಿಂದ ಮಹಿಳಾ ಸಾಂತ್ವಾನ ಕೇಂದ್ರಕ್ಕೆ ಕರೆತರಲಾಯಿತು. ಇಂದು ಮಧ್ಯಾಹ್ನ ಅವರ ಅರ್ಜಿ ವಿಚಾರಣೆ ನಡೆಯಿತು. ಸಂಜೆ ಅವರನ್ನು ಪೋಲಿಸ ವ್ಯಾನಿನಲ್ಲಿ ಪರಪ್ಪನ ಅಗ್ರಹಾರಕ್ಕೆ ಕರೆದೊಯ್ಯಲಾಯಿತು.
ರಾಗಿಣಿಗೆ ಮಹಿಳಾ ಸೆಲ್ ಪಕ್ಕದ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದ್ದು, ಇನ್ನಿತರ 5 ಜನ ಆರೋಪಿಗಳಿಗೆ ಒಂದೇ ಸೆಲ್‌ನಲ್ಲಿ ಇಡಲಾಗಿದೆ.
ಈ ಮಧ್ಯೆ ರಾಗಿಣಿ ಅವರು ಎಸ್‌ಡಿಪಿಎಸ್ ವಿಶೇಷ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಸೆ.16ಕ್ಕೆ ಮುಂದೂಡಿಕೆಯಾಗಿದೆ.
ಈ ಅರ್ಜಿಗೆ ಸಂಬAಧಿಸಿದAತೆ ಆಕ್ಷೇಪ ಸಲ್ಲಿಸಲು ಪೊಲೀಸರು ಒಂದು ವಾರ ಕಾಲಾವಕಾಶ ಕೇಳಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.

LEAVE A REPLY

Please enter your comment!
Please enter your name here