ಕಾಳಗಿ ಗಾಂಜಾ ಪ್ರಕರಣ: ಸಿಪಿಐ, ಪಿಎಸ್.ಐ. ಎ.ಎಸ್.ಐ. ಸೇರಿ ಇಬ್ಬರು ಪೇದೆಗಳ ಅಮಾನತ್ತು ಗೊಳಿಸಿ ಎಸ್.ಪಿ. ಆದೇಶ

0
3813

ಕಲಬುರಗಿ, ಸೆ. 12: 100 ಗ್ರಾಂ ಗಾಂಜಾ ಬೆನ್ನತ್ತಿದ್ದ ಸಿಸಿಬಿಗೆ ಸಿಕ್ಕಿದ್ದು ಬರೋಬ್ಬರಿ 1300 ಕೆಜಿ ಅಂದರೆ 13 ಕ್ವಿಂಟಾಲ್, ಸುಮಾರು 6 ಕೋಟಿ ರೂ. ಮೌಲ್ಯ. ಇದು ನಡೆದಿದ್ದು ಮೊನ್ನೆಯಾದರೂ ಕೂಡಾ ಬಹಳ ದಿನಗಳಿಂದ ನಡೆದು ಬರುತ್ತಿರುವ ಧಂಧೆಯಾಗಿದ್ದು, ಇದರ ವಾಸನೆ ನಮ್ಮ ಕಲಬುರಗಿ ಅದರಲ್ಲೂ ಕಾಳಗಿ ಪೋಲಿಸರಿಗೆ ಸೋಂಕಲಿಲ್ಲ ಅಂದರೆ ಒಂದು ವಿಪರ್ಯಾಸವೇ ಸರಿ. ಇದು ಪೋಲಿಸರ ನಿರ್ಲಕ್ಷಕ್ಕೆ ಹಿಡಿದ ಕನ್ನಡಿಯಾಗಿದೆ.
ಕಳೆದ ತಿಂಗಳಷ್ಟೆ ಬೆಂಗಳೂರಿನ ಡಿಜೆ ಕೆಜೆ ಹಳ್ಳಿ ಪ್ರಕರಣ ಗಾಂಜಾ ಮತ್ತಿನಲ್ಲಿ ನಡೆದಿದೆ ಎಂಬ ಊಹಾಪೋಗಳ ಮಧ್ಯೆಯೆ ಮತ್ತೊಂದು ಡ್ರಗ್ಸ್ ಮಾಫಿಯಾ ಗ್ಯಾಂಗ್ ಬೆಂಗಳೂರಿನಲ್ಲಿ ಬೆತ್ತಲೆ ಯಾಗಿದ್ದು ಈ ಎಲ್ಲ ಪ್ರಕರಣಗಳ ಸುತ್ತು ಒಂದು ನೋಟಿ ಹರಿಸಿದ ಸಿಸಿಬಿ ಪೋಲಿಸರು ಕಲಬುರಗಿ ಜಿಲ್ಲೆಯಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಕಾಳಗಿ ತಾಲೂಕಿನ ಕೋಡ್ಲಾ ರಸ್ತೆಯಲ್ಲಿರುವ ಲಕ್ಷö್ಮಣ ನಾಯಕ ತಾಂಡಾವೊAದರಲ್ಲಿ ನೆಲದಲ್ಲಿ ಇಷ್ಟೋಂದು ಪ್ರಮಾಣದ ಗಾಂಜಾ ಸಿಕ್ಕಿದ್ದು, ಕಾಳಗಿ ಪೋಲಿಸರಿಗೆ ಗೊತ್ತಾಗದೇ ಇರುವ ಹಾಗೂ ನಿಷ್ಕಾಳಜಿ ವಹಿಸಿದ ಹಿನ್ನೆಲೆಯಲ್ಲಿ ಕಲಬುರಗಿ ಎಸ್.ಪಿ. ಮರಿಯಮ್ ಜಾರ್ಜ್ ಅವರು ಕಾಳಗಿಯ 3 ಜನ ಪೋಲಿಸ್ ಅಧಿಕಾರಿಗಳು ಸೇರಿದಂತೆ ಇಬ್ಬರು ಪೋಲಿಸ್ ಪೇದೆಗಳನ್ನು ಅಮಾನತ್ತಿಲ್ಲಿಟ್ಟು ಆದೇಶ ಜಾರಿಮಾಡಿದ್ದಾರೆ.
ಸಿಪಿಐ ರಾಠೋಡ್, ಪಿಎಸ್.ಐ. ಬಸವರಾಜ ಚಿತ್ತಕೋಟಿ, ಎ.ಎಸ್.ಐ. ನೀಲಕಂಠ, ಮತ್ತು ಪೇದೆಗಳಾದ ಶರಣಪ್ಪಾ ಮತ್ತು ಅನೀಲ ಎಂಬುವವರೆ ಅಮಾನತ್ತುಗೊಂಡವರಾಗಿದ್ದಾರೆ.

LEAVE A REPLY

Please enter your comment!
Please enter your name here