ಕಲಬುರಗಿ, ಸೆ. 2: ಹುಮನಾಬಾದ-ಬೀದರ್‌ದಿಂದ ಬೆಂಗಳೂರಿಗೆ ಹೊಗುವ ಬಸ್‌ಗೆ ಆಕಸ್ಮಿಕವಾಗಿ ಬೆಂಕಿ ಹತ್ತಿದ ಪರಿಣಾಮ ಬಸ್ ಸಂಪೂರ್ಣವಾಗಿ ಸುಟ್ಟು ಹೋಗಿ ಕರಕಲಾದ ಘಟನೆ ಇಂದು ಸಂಜೆ ಸಂಭವಿಸಿದೆ.
ಈ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ, ಹುಮನಾಬಾದ ತಾಲೂಕಿನ ಧುಮ್ಮನಸುರ ಬಳಿ ಇಂದು ಸಂಜೆ ದುರಂತ ಸಂಭವಿಸಿದೆ. ಬಸ್‌ನಲ್ಲಿ ಹೆಚ್ಚು ಜನ ಪ್ರಯಾಣಿಕರಿದೆ ಇರದೆ ಇರುವುದೇ ಸಂಭವಿಸಬೇಕಾದ ಅನಾಹುತ ತಪ್ಪಿದಂತಾಗಿದೆ.
ಬಸ್‌ನಲ್ಲಿ 7 ಜನ ಪ್ರಯಾಣಿಕರಿದ್ದ ಬಗ್ಗೆ ಮಾಹಿತಿ ಲಭ್ಯವಾಗಿದ್ದು ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್‌ನಿಂದ ಕೆಳಗಿಸಲಾಯಿತು. ನಂತರ ಬಸ್ ಸಂಪೂರ್ಣ ಸುಟ್ಟು ಕರಕಾಲಾಗಿದೆ. ಸುದ್ದಿ ತಿಳಿಯುತಲೇ ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಪೋಲಿಸರು, ಬೆಂಕಿ ನಂದಿಸಲು ಅನುವುಮಾಡಿಕೊಡಲು ಸಾರ್ವಜನಿಕರನ್ನು ಸ್ಥಳದಿಂದ ದೂರ ಸರಿಸುತ್ತಿದ್ದರು.
ಈ ಬಗ್ಗೆ ಹುಮನಾಬಾದ ಪೋಲಿಸ್ ಠಾಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.