ಕಲಬುರಗಿಯಲ್ಲಿ ದ್ವಿಶತಕ ಬಾರಿಸಿದ ಕೊರೊನಾ ಸಾವಿನ ಸಂಖ್ಯೆ

0
932

ಕಲಬುರಗಿ, ಆಗಸ್ಟ. 28: ದೇಶದಲ್ಲಿಯೇ ಪ್ರಥಮ ಬಲಿ ಕೊರೊನಾಗೆ ಕಲಬುರಗಿ ಜಿಲ್ಲೆಯಾಗಿದ್ದು, ಮಾರ್ಚ 11 ರಿಂದ ಈವರೆಗೆ ಕೊರೊನಾ ಸೋಂಕಿತರ ಸಂಖ್ಯೆ 200 ತಲುಪುವ ಮುಖಾಂತರ ಜಿಲ್ಲೆಯಲ್ಲಿ ಈ ರೋಗಕ್ಕೆ ಬಲಿಯಾದವರ ಸಂಖ್ಯೆ ದ್ವಿಶತಕಕ್ಕೆ ತಲುಪಿದೆ.
ದಿನನಿತ್ಯ ಕೊರೊನಾಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರುತ್ತಲೇ ನಡೆದಿದ್ದು, ಅಷ್ಟೇ ವೇಗದಲ್ಲಿ ಗುಣಮುಖರಾಗುತ್ತಿರುವ ಸಂಖ್ಯೆಯು ಹೆಚ್ಚಾಗಿದ್ದು, ಸದ್ಯ ಜಿಲ್ಲೆಯಲ್ಲಿ 1975 ಸಕ್ರೀಯ ಪ್ರಕರಣಗಳು ಇವೆ.
ಇಂದು ಕೊರೊನಾ ಸೋಂಕು 222 ಜನರಿಗೆ ವಕ್ಕರಿಸಿದ್ದು, ಈವರೆಗೆ 11179 ಜನರು ಈ ರೋಗದ ಬಲೆಯಲ್ಲಿ ಸಿಕ್ಕಿದ್ದು, ಇಂದು 87 ಜನರು ಸೇರಿದಂತೆ 9004 ಜನರು ಈವರೆಗೆ ಆಸ್ಪತ್ರೆಯಿಂದ ಈ ಸೋಂಕಿನಿAದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ.

LEAVE A REPLY

Please enter your comment!
Please enter your name here