ಕಳೆದ ಮಾರ್ಚ ತಿಂಗಳಿನಿAದ ವಿಶ್ವದಾದ್ಯಂತ ಕಾಡ್ಗಿಚ್ಚಿನಂತೆ ಹರಡುತ್ತಿರುವ ಕರೊನಾ ಸೋಂಕಿಗೆವ್ಯಾಪಾರಸ್ಥರು ತುಂಬಾನೆ ಸಂಕಷ್ಟಕ್ಕಿಡಾಗಿ ಹಾನಿಗೊಳಗಾಗಿದ್ದು, ಈ ದಿಶೆಯಲ್ಲಿ ಬಾಡಿಗೆ ಪಡೆದು ವ್ಯಾಪಾರ ವಹಿವಾಟು, ಅಲ್ಲದೇ ತರಬೇತಿ ಕೇಂದ್ರಗಳನ್ನು ನಡೆಸುತ್ತಿರುವವರ ಸ್ಥಿತಿಯಂತೂ ಕೆಳತೀರದಾಗಿದೆ. ಈ ಹಿನ್ನೆಲೆಯಲ್ಲಿ ನಗರ ಸೂಪರ್ ಮಾರ್ಕೆಟ್ ಪ್ರದೇಶದಲ್ಲಿರುವ ಡಾ. ಸುಧಾ ಹಾಲಕಾಯಿ ಅವರಿಗೆ ಸೇರಿದ ಕಾಂಪ್ಲೆಕ್ಸ್ನಲ್ಲಿರುವ ಅಂಗಡಿಗಳ ಬಾಡಿಗೆಯನ್ನು ಸಂಪೂರ್ಣವಾಗಿ ಮನ್ನಾ ಮಾಡಿ ಮಾನವತೆ ಮೆರೆದ ಡಾ. ಸುಧಾ ಹಾಲಕಾಯಿ ಅವರನ್ನು ಇಂದು ಹೂಗುಚ್ಚ ನೀಡಿ ಸನ್ಮಾನಿಸಲಾಯಿತು.
ಚಿತ್ರದಲ್ಲಿ ಶಾಂತರೆಡ್ಡಿ, ನಂದಿಶ ರೆಡ್ಡಿ ಮಂಜು ಅಂಕಲಗಿ, ಶಿವರಾಜ ಪಾಟೀಲ್, ವಿಜಯಕುಮಾರ ಹುಲಿ ಅವರು ಉಪಸ್ಥಿತರಿದ್ದರು.