ಹೋಟೆಲ್ ಪಾರ್ಸಲ್‌ದಿಂದ ಪೋಲಿಸರಿಗೆ ಕಿರಿಕಿರಿ

0
1184

ಕಲಬುರಗಿ, ಜುಲೈ 16: ಕೊರೊನಾ ಸೋಂಕು ಹರಡುವಿಕೆ ಹಿನ್ನೆಲೆಯಲ್ಲಿ ರೋಗ ನಿಯಂತ್ರಣಕ್ಕೆ ಕಲಬುರಗಿ ಲಾಕ್‌ಡೌನ್ ಆಗಿದ್ದರೂ ಕೂಡಾ ಹೋಟೆಲ್‌ಗಳಲ್ಲಿ ಪಾರ್ಸಲ್ ಸೌಲಭ್ಯ ನೀಡಲಾಗಿದ್ದು, ಇದರಿಂದಾಗಿ ಪೋಲಿಸರಿಗೆ ಕಿರಿಕಿರಿ ಉಂಟಾಗುತ್ತಿದೆ.
ಜಿಲ್ಲೆಯಾದ್ಯಂತ 144ಕಲಂ ಜಾರಿ ಮಾಡಿ ಸಂಪೂರ್ಣ ಲಾಕ್‌ಡೌನ್ ಆದೇಶವಿದ್ಯಾಗಲೂ ಕೂಡಾ ದ್ವೀಚಕ್ರ, ನಾಲ್ಕು ಚಕ್ರಗಳಲ್ಲಿ ಸಾರ್ವಜನಿಕರು ಓಡಾಟ ನಿಯಂತ್ರಿಸಲಾಗದೆ ಪೋಲಿಸರಿಗೆ ತಲೆ ನೋವಾಗಿದೆ.
ದ್ವಿಚಕ್ರ ಸವಾರರಿಗೆ ನಿಲ್ಲಿಸಿ ಕೇಳಲಾಗಿ ಎಲ್ಲಿಗೆ ಹೊಂಟಿ ಅಪ್ಪಾ ಅಂದಾಗ ಸರ್ ಹೊಟೆಲ್‌ಗೆ ಪಾರ್ಸಲ್ ತರಾಕಾ ಎಂಬ ಉತ್ತರ, ಇದರಿಂದಾಗಿ ಬೆಳಿಗ್ಗೆ 8 ರಿಂದ ಮಧ್ಯಾಹ್ನ 12ರ ವರೆಗಂತೂ ಇಲ್ಲಿ ಲಾಕ್‌ಡೌನ್ ಇದೆಯಾ? ಎಂಬುAತಾಗಿತ್ತು. ಯಾರನ್ನು ತಡೆದು ಕೇಳಿದರೂ ಮೆಡಿಕಲ್‌ಗೆ, ಹೋಟೆಲ್‌ಗೆ, ದವಾಖಾನೆಗೆ, ಕಚೇರಿಗೆ ಹೀಗೆ ಹತ್ತಾರು ಉತ್ತರ ನೀಡುತ್ತಿದ್ದು ಎಲ್ಲ ಕಡೆ ಕಂಡುಬAದವು.
ಪೇಟ್ರೋಲ್ ಬಂಕ್ ಬೆಳಿಗ್ಗೆ 8 ರಿಂದ 2ರ ವರೆಗೆ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದರೂ ಕೂಡಾ ಜನರ ಬೇಕಾಬಿಟ್ಟಿ ಓಡಾಟಕ್ಕೆ ಬ್ರೇಕ್ ಬಿದ್ದಿಲ್ಲ.
ಆಟೋಗಳ ಓಡಾಟ :
ಖರ್ಗೆ ಪೆಟ್ರೋಲ್ ಬಂಕ್‌ದಿAದ ಹಿಡಿದು ಹಾಗರಗಾ ಕ್ರಾಸ್, ಹಾಗರಗಾ ಕ್ರಾಸ್‌ದಿಂದ ಹುಮನಾಬಾದ ರಿಂಗ್ ರಸ್ತೆ ಸರ್ಕಲ್, ಸರ್ಕಲ್‌ದಿಂದ ಆಳಂಚ ಚೆಕ್ ಪೋಸ್ಟ ವರೆಗೆ ಆಟೋಗಳು ಅದರಲ್ಲೂ 6 ಜನ ಪ್ರಯಾಣಿಕರಿಗೆ ಹಾಕಿ ಓಡಿಸುತ್ತಿರುವುದು ಕಂಡುಬAದಿದೆ. ಪೋಲಿಸರು ಹಲವಾರು ಆಟೋಗಳು ಜಪ್ತಿ ಮಾಡಿ ಕೇಸ್ ದಾಖಲಿಸಿಕೊಂಡರೂ ಕೂಡಾ ಅವುಗಳ ಓಡಾಟ ಮಾತ್ರ ನಿಂತಿಲ್ಲ.
ಎಲ್ಲ ಸರ್ಕಲ್‌ಗಳಲ್ಲಿ ಪೋಲಿಸ್‌ರು ಉತ್ತಮವಾಗಿ ಕಾರ್ಯನಿರ್ವ ಹಿಸುತ್ತಿದ್ದು ಕೆಲವು ಕಡೆ ಸಂಚಾರಿ ಪೋಲಿಸ್ ಠಾಣೆಗಳಲ್ಲಿ ವಾಲೆಂಟರ್ಸ್ ಎಂದು ಕಾರ್ಯನಿರ್ವಹಿಸುತ್ತಿರುವುದು ಅಷ್ಟೇನು ಪರಿಣಾಮಕಾರಿ ಕೆಲಸ ಮಾಡುತ್ತಿಲ್ಲ.

LEAVE A REPLY

Please enter your comment!
Please enter your name here