
ಕಲಬುರ್ಗಿ, ಜ.26- ಭಿನ್ನತೆಯಲ್ಲಿ ಏಕತೆ ಇರುವ ದೇಶದಲ್ಲಿ ಡಾ ಅಂಬೇಡ್ಕರ್ ಅವರು ಸಂವಿಧಾನದ ರಚಿಸಿದ್ದರಿಂದ ದೇಶ ಮುನ್ನೆಡೆಗೆ ಸಾಧ್ಯವಾಗಿದೆ. ಭಾರತದ ಸಂವಿಧಾನ ಬೃಹತ್ ಸಂವಿಧಾನವಾಗಿದ್ದು 1,17,369 ಪದಗಳಿವೆ. ಇಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ನರೇಗಾ ರದ್ದುಪಡಿಸಿ ಚೆಲ್ಲಾಟವಾಡುತ್ತಿದೆ ಎಂದು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಹೇಳಿದರು.
ನಗರದ ಪೋಲಿಸ್ ಪರೇಡ್ ಮೈದಾನದಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವದ ರಾಷ್ಟçಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, 26 ಜನೇವರಿ 1950 ರಂದು ಸಂವಿಧಾನ ಜಾರಿಗೆ ಬಂದ. ಸಾಮಾಜಿಕ ರಾಜಕೀಯ ಸಮುದಾಯಗಳಿಗೆ ಧ್ವನಿ ಬಂದ ದಿನ. ಎಸ್ ಸಿ ಎಸ್ ಟಿ ಆದಿವಾಸಿಗಳಿಗಳು ಮುಖ್ಯವಾಹಿನಿಗೆ ಬಂದ ಐತಿಹಾಸಿಕ ದಿನ. ಮಹಿಳೆಯರಿಗೆ ಸಮಾನವಾದ ಅವಕಾಶ ಕೊಟ್ಟ ದಿನ. 130 ಶತಕೋಟಿ ಜನಸಂಖ್ಯೆಯ ದೇಶದಲ್ಲಿ ವಿವಿಧ ಭಾಷೆ, ಆಚಾರ ವಿಚಾರ, ವಿಭಿನ್ನ ಆಚರಣೆಗಳು ಇರುವ ದೇಶದಲ್ಲಿ ಸಂವಿಧಾನ ಇರದೆ ಇದ್ದಿದ್ದರೆ ಇವುಗಳನ್ನು ಕಾಪಾಡಿಕೊಂಡು ಬರಲು ಆಗುತ್ತಿರಲಿಲ್ಲ ಎಂದರು.





