ಕಲಬುರಗಿ ಬಾರ್ ಅಸೋಸಿಯೇನ್‌ಗೆ ಪಸಾರ ಅಧ್ಯಕ್ಷರಾಗಿ ಆಯ್ಕೆ

0
854

ಕಲಬುರಗಿ, ಏ. 25: ಕಲಬುರಗಿ ಬಾರ್ ಅಸೊಸಿಯೇಷನ್‌ಗೆ 2025-2027ನೇ ಸಾಲಿಗಾಗಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ನ್ಯಾಯವಾದಿ ಎಸ್. ವಿ. ಪಸಾರ ಅವರು ಅತ್ಯಂತ ಅಧಿಕ ಮತಗಳನ್ನು ಪಡೆಯುವ ಮೂಲಕ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

as a elected for vice president

ಅಧ್ಯಕ್ಷ ಸ್ಥಾನಕ್ಕೆ ಒಟ್ಟು ಐದು ಜನರು ಕಣದಲ್ಲಿದ್ದರು. ಅದರಂತೆ ಅರುಣ ಧತ್ತಿ ವಾಯ್. 72, ಅಶೋಕ ಬಿ. ಮೂಲಗೆ 396, ರಾಜಶೇಖರ ಬಿ.ಆರ್. ಡೋಂಗರಗಾAವ 303, ಎಸ್. ವಿ. ಪಸಾರ 734, ಸೈಯದ್ ಮಸ್ತಾನ 325 ಅವರುಗಳು ಮತ ಪಡೆದರು.
ಗುರುವಾರ ತಡರಾತ್ರಿ ನಡೆದ ಮತ ಏಣಿಕೆಯಲ್ಲಿ ಅಧ್ಯಕ್ಷರಾಗಿ ಎಸ್. ವಿ. ಪಸಾರ ಸೇರಿದಂತೆ ಭೀಮಾಶಂಕರ ಎಲ್ ಪೂಜಾರಿ ಮತ್ತು ಆರತಿ ಎಸ್. ರಾಠೋಡ (ಮಹಿಳಾ 453) ಅವರುಗಳು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

General Secretary

ಅಲ್ಲದೇ ಪ್ರಧಾನ ಕಾರ್ಯದರ್ಶಿಯಾಗಿ ಸಿದ್ದರಾಮ ಬಸವರಾಜ ಮಾಡಗಿ (443), ಜಂಟಿ ಕಾರ್ಯದರ್ಶಿಯಾಗಿ ಸುಧೀರ ಸಿ. ಗಡಗೆ (776) ಮತ್ತು ಖಜಾಂಚಿಯಾಗಿ ಮಂಜುನಾಥ ಗುರುಪಾದಪ್ಪ ಪಾಟೀಲ್ (680) ಆಯ್ಕೆಯಾಗಿದ್ದಾರೆ.
ಒಟ್ಟು 3500 ಮತದಾರರಿದ್ದು, ಅದರಲ್ಲಿ 1860 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.

Elected as a Joint Secretary

ಅಧ್ಯಕ್ಷ ಸ್ಥಾನಕ್ಕೆ ನಿಂತಿದ್ದ ಸೈಯದ್ ಮಸ್ತಾನ ಅವರಿಗೆ ಹ್ಯಾಟ್ರಿಕ್ ಸೋಲಾಗಿದೆ. ಕಳೆದ ಬಾರಿ ನಡೆದ ಅಧ್ಯಕ್ಷ ಚುನಾವಣೆಯಲ್ಲಿ ಗೆಲುವಿನ ಹತ್ತಿರದಿಂದ ಅವರು ಪರಾಭವಗೊಂಡಿದ್ದರು.
ಚುನಾವಣೆಯಲ್ಲಿ ವಿಜಯಶಾಲಿಯಾದ ಎಲ್ಲ ಅಭ್ಯರ್ಥಿಗಳಿಗೆ ಯುವ ನ್ಯಾಯವಾದಿ ಸುಧೀಂದ್ರ ಯಕ್ಕಂಚಿ ಅವರು ಅಭಿನಂದಿಸಿದ್ದಾರೆ.

LEAVE A REPLY

Please enter your comment!
Please enter your name here