ಕಚೇರಿಯಲ್ಲಿ ಜಗಮಗಿಸುವ ವಿದ್ಯುತ ದೀಪದ ಕೆಳಗೆ ಸಿಬ್ಬಂದಿಗಾಗಿ ಕಾಯುತ್ತಿರುವ ಖಾಲಿ ಕುರ್ಚಿಗಳು
ಅಫಜಲಪೂರ : ಜಿಲ್ಲೆಯಲ್ಲಿ ವ್ಯಾಪಕ ಬಿಸಿಲಿರುವ ಕಾರಣ ಸರ್ಕಾರಿ ನೌಕರರ ಅನುಕೂಲಕ್ಕಾಗಿ ದೈನಂದಿನ ಕೆಲಸದ ಸಮಯದಲ್ಲಿ ಬದಲಾವಣೆ ಮಾಡಿ ಎಂದು ಸರ್ಕಾರ ಆದೇಶ ಹೊರಡಿಸಿದೆ ಆದರೆ ತಾಲ್ಲೂಕು ಕೇಂದ್ರದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಬಹಳಷ್ಟು ನೌಕರರು ಸಮಯ ಬದಲಾಗಿ ಒಂಬತ್ತು ದಿನ ಗತಿಸಿದರು ಸರಿಯಾದ ಸಮಯಕ್ಕೆ ಬರದೇ ಇಲಾಖೆಯ ನಿಯಮಗಳನ್ನು ಗಾಳಿಗೆ ತುರುತ್ತಿದ್ದಾರೆ.
ಈ ಮೊದಲು ಬೆಳಿಗ್ಗೆ 10.30 ರಿಂದ ಸಂಜೆ 5.30 ರ ವರೆಗೆ ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು. ಬೇಸಿಗೆ ಪ್ರಯುಕ್ತ ಸಮಯ ಬದಲಾವಣೆ ಪ್ರಕಾರ ಏಪ್ರಿಲ್ ಹಾಗೂ ಮೇ ತಿಂಗಳವರೆಗೆ ಬೆಳಿಗ್ಗೆ 8 ಗಂಟೆಯಿAದ ಮದ್ಯಾಹ್ನ 1.30 ರ ತನಕ ಮಾತ್ರ ಕಚೇರಿ ವೇಳಾ ಪಟ್ಟಿ ನಿಗದಿ ಮಾಡಲಾಗಿದೆ. ಈ ಕುರಿತು ಸಮಯದ ಬದಲಾವಣೆಗೆ ತಾಲ್ಲೂಕಿನ ಸರ್ಕಾರಿ ನೌಕರರು ಯಾವ ರೀತಿಯಾಗಿ ಸ್ಪಂದನೆ ಮಾಡುತ್ತಿದ್ದಾರೆ ಎಂಬುದನ್ನು ವಿವಿಧ ಇಲಾಖೆಗೆ ನಮ್ಮ ಮನೀಷ ಪತ್ರಿಕೆಯ ತಂಡ ಬುಧವಾರ ಏಪ್ರಿಲ್ 9ರಂದು ಭೇಟಿ ನೀಡಿ ಪರಿಶೀಲಿಸಿದಾಗ ಬಹುತೇಕ ಕಡೆ ಸಿಬ್ಬಂದಿಗಳು ಬೆರಳೆಣಿಕೆಯಷ್ಟು ಇದ್ದು ಪೂರ್ಣ ಪ್ರಮಾಣದಲ್ಲಿ ಇರಲಿಲ್ಲ.


ಪಟ್ಟಣದ ತಹಸೀಲ್ದಾರ ಕಚೇರಿಗೆ ಬೆಳಿಗ್ಗೆ 8.10 ನಿಮಿಷಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದಾಗ ಹಲವು ಸಿಬ್ಬಂದಿಗಳ ಕೇವಲ ಬೆರಳೆಣಿಕೆಯ ಸಿಬ್ಬಂದಿಗಳು ಹಾಜರಾಗಿದ್ದರು. ಇನ್ನು ತಾಲ್ಲೂಕು ಪಂಚಾಯತ ಕಾರ್ಯಾಲಯವಂತೂ ಸಮಯ 8.15 ಗಂಟೆಯಾದರು ಬಾಗಿಲು ತೆರೆಯದೆ ಹಾಗೆ ಇತ್ತು ಜೊತೆಗೆ ಪಕ್ಕದಲ್ಲಿಇರುವ ಪುರಸಭೆ ಕಾರ್ಯಾಲಯದಲ್ಲಿ 8.20 ಕ್ಕೆ ಕಚೇರಿ ತೆರೆದಿದ್ದರು ಕೂಡ ಯಾವೊಬ್ಬ ಸಿಬ್ಬಂದಿಯು ಇರದೇ ಕೇವಲ ವಿದ್ಯುತ್ ದೀಪಗಳು ಜಗಮಗಿಸುತಿದ್ದವು.


ಇನ್ನು ಪಟ್ಟಣದ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬೆಳಿಗ್ಗೆ 8.20 ಆದರೂ ವೈದ್ಯಧಿಕಾರಿ ಸೇರಿ ಯಾವ ಸಿಬ್ಬಂದಿಗಳು ಕೂಡ ಕಛೇರಿಯಲ್ಲಿರಲಿಲ್ಲ. ಇನ್ನು ಸಮಾಜ ಕಲ್ಯಾಣ ಇಲಾಖೆಯಲ್ಲಿ ಬೆಳಿಗ್ಗೆ 8.27 ಗಂಟೆಗೆ ಆರು ಜನ ಸಿಬ್ಬಂದಿಗಳಲ್ಲಿ ಕೇವಲ ಇಬ್ಬರು ಸಿಬ್ಬಂದಿಗಳು ಹಾಜರಿದ್ದರು, ಉಳಿದ ಎಲ್ಲರು ಸಮಯ ಪಾಲನೆ ಮಾಡುತ್ತಿಲ್ಲ ಎಂಬ ಗಂಭೀರ ಆರೋಪ ಕೇಳಿ ಬಂತು


ನAತರ ವಿದ್ಯುತ ಇಲಾಖೆಯ ಜೇಸ್ಕಾಂ ಕಚೇರಿಯಲ್ಲಿ ಕೇವಲ ಒಬ್ಬ ಬಿಲ್ ಕಲೆಕ್ಟ್ ರ ಮಾತ್ರ ಇದ್ದಿದು ಉಳಿದ ಸಿಬ್ಬಂದಿಗಳ ಕೋಣೆಗೆ ಬೀಗ ಹಾಕಲಾಗಿತ್ತು ಮತ್ತು ಮಳೇ ಗಾಳಿಯಿಂದ ವಿದ್ಯುತ್ ಅವಘಡ ಸಂಭವಿಸಿ ದೂರು ನೀಡಲು ಬಂದ ಸಾರ್ವಜನಿಕರು ಪರದಾಡಿ ಸಮಯ 9 ಗಂಟೆಯಾಗುತ್ತಿದೆ ಯಾವ ಸಿಬ್ಬಂದಿಗಳು ಬಂದಿಲ್ಲ ಬಾಗಿಲು ಮುಚ್ಚಿದ್ದು ಲಕ್ಷ ರೂಪಾಯಿ ಸಂಬಳ ಪಡೆದು ಮನಸೋ ಇಚ್ಛೆ ಕೆಲಸಕ್ಕೆ ಹಾಜರಾದರೆ ಹೇಗೆ ಎಂದು ಸಿಬ್ಬಂದಿಗಳ ವಿರುದ್ಧ ಹಿಡಿಶಾಪ ಹಾಕಿದರು


ಅದೇ ರೀತಿಯಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ ಮೂವರು ಸಿಬ್ಬಂದಿಗಳು ಇದ್ದರು ಕೂಡ ಬೆಳಿಗ್ಗೆ 8.50 ಗಂಟೆಯಾದರೂ ಯಾರು ಕೂಡ ಕರ್ತವ್ಯಕ್ಕೆ ಹಾಜರಾಗಿರಲಿಲ್ಲ ಇನ್ನು ತೋಟಗಾರಿಕೆ ಇಲಾಖೆಯಲ್ಲಿ ಸಮಯ 9 ಗಂಟೆ ಯಾದರು 10 ಜನ ಸಿಬ್ಬಂದಿಗಳಲ್ಲಿ ಕೇವಲ ಒಬ್ಬನೇ ಒಬ್ಬ ಸಿಬ್ಬಂದಿ ಹಾಜರಿದ್ದರು. ಅಷ್ಟೇ ಅಲ್ಲದೆ ಉಳಿದ ಸಿಬ್ಬಂದಿಗಳು ಎಲ್ಲಿ ಅಂತಾ ವಿಚಾರಿಸಿದರೆ ಅವರೆಲ್ಲ 9 ಗಂಟೆಗೆ ಬರುತ್ತಾರೆ ಅವಾಗೆ ಬನ್ನಿ ಎಂದು ಖಡಾ ಖಂಡಿತವಾಗಿ ಕಡ್ಡಿ ಮುರಿದಂತೆ ಅಲ್ಲಿನ ಸಿಬ್ಬಂದಿ ಹೇಳಿದರು,


ಇನ್ನು ಮಕ್ಕಳಿಗೆ ಶಿಸ್ತಿನ ಪಾಠ ಹೇಳಿಕೊಡುವ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸಮಯ ಬೆಳಿಗ್ಗೆ 9 ಗಂಟೆಯಾದರೂ ಕಛೇರಿಗೆ ಬಂದಿರಲಿಲ್ಲ, ಕ್ಷೇತ್ರ ಶಿಕ್ಷಣಾಧಿಕಾರಿ ಕಛೇರಿಯಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳಲ್ಲಿ ಕೇವಲ ಒಬ್ಬರು ಹಾಜರಿದ್ದರು. ಪಂಚಾಯತ್ ರಾಜ ಇಂಜನಿಯರಿAಗ ಇಲಾಖೆಯಲ್ಲಿ ಕಚೇರಿ ತೆರೆದರು ಅಧಿಕಾರಿಗಳು 9 ಗಂಟೆ ಯಾದರು ಹಾಜರಾಗಿಲ್ಲ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಲ್ಲಿ 9 ಗಂಟೆಯಾಗುತ್ತಿದ್ದರು ಯಾರು ಕೂಡ ಹಾಜರಿರದೆ ನಿಯಮ ಉಲ್ಲಂಘನೆ ಮಾಡಿದರು .ಹೀಗೆ ಇನ್ನು ಅನೇಕ ಕಡೆಗಳಲ್ಲಿ ಸರಕಾರಿ ಕಚೇರಿಗಳ ಬಾಗಿಲುಗಳೇ ತೆರೆದಿರಲಿಲ್ಲ ಕೆಲವು ಕಡೆ ಬಾಗಿಲು ತೆರೆದು ವಿದ್ಯುತ್ ದೀಪಗಳಿಂದ ಕಂಗೊಳಿಸಿ ಸಿಬ್ಬಂದಿಗಳ ಬರುವೀಕೆಗಾಗಿ ಖಾಲಿ ಖುರ್ಚಿಗಳು ಹಾಗೂ ಸಾರ್ವಜನಿಕರು ಕಾದು ಕುಳಿತಿದ್ದರು. ಸಿಬ್ಬಂದಿಗಳ ಈ ನಡೆ ಕುರಿತು ಸಾರ್ವಜನಿಕ ವಲಯದಲ್ಲಿ ಸರಿಯಾಗಿ ಕರ್ತವ್ಯ ನಿರ್ವಸದೆ ಇಲಾಖೆ ನಿಯಮಗಳು ಲೆಕ್ಕಕ್ಕೆ ಇಲ್ಲ ಎಂಬAತೆ ಕರ್ತವ್ಯ ನಿರ್ವಹಿಸುತ್ತಿರುವ ಸರಕಾರಿ ನೌಕರರ ಸಮಯ ನಿರ್ಲಕ್ಷದ ವಿರುದ್ಧ ಎಲ್ಲಡೆ ಆಕ್ರೋಶ ವ್ಯಕ್ತ ವಾಗುತ್ತಿದೆ,ಹಾಗೂ ಸಮಯ ಬದಲಾದರು ನಮ್ಮ ಸರಕಾರಿ ನೌಕರರು ಬದಲಾಗುತ್ತಿಲ್ಲ ಎಂದು ವ್ಯಾಪಕ ಟೀಕೆ ಕೂಡ ವ್ಯಕ್ತವಾಗುತ್ತಿದೆ….!