ಕಮಲಾಪುರದಲ್ಲಿ ಸೆ. 10ಕ್ಕೆಪತ್ರಕರ್ತರ ಸಂಘದ ನೂನತ ಪದಾಧಿಕಾರಿಗಳ ಪದಗ್ರಹಣ

0
208

ಪತ್ರಕರ್ತರ ಸಂಘದ ನೂನತ ಪದಾಧಿಕಾರಿಗಳ ಪದಗ್ರಹಣ
ಕಲಬುರಗಿ, ಸೆ.9- ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕಮಲಾಪೂರ ತಾಲ್ಲೂಕು ಘಟಕದ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಾಳೆ ಸೆಪ್ಟೆಂಬರ್ 10ರಂದು ಬೆಳಿಗ್ಗೆ 11 ಗಂಟೆಗೆ ಪಟ್ಟಣದ ಆಕೃತಿ (ಬಿರಾದರ್) ಕಲ್ಯಾಣ ಮಂಟಪದಲ್ಲಿ ಜರುಗಲಿದೆ.
ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರದ ಪ್ರಮುಖರಿಗೆ ವಿಶೇಷ ಸತ್ಕಾರ, ಮಾಜಿ ಸೈನಿಕರು, ಸ್ನಾತಕೋತ್ತರ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿಗಳು ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದ ಸಾಧಕ ವಿದ್ಯಾರ್ಥಿಗಳಿಗೆ ಸತ್ಕಾರ ಸಮಾರಂಭವು ಜರುಗಲಿದೆ ಎಂದು ಪತ್ರಕರ್ತರ ಸಂಘದ ನೂತನ ಅಧ್ಯಕ್ಷ ಸುರೇಶ್ ಲೇಂಗಟಿ ಹಾಗೂ ನೂತನ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಮೂಲಗೆ ಅವರು ತಿಳಿಸಿದ್ದಾರೆ.

ಸೊಂತ್ -ಕಲಮೂಡ್ ಮುಲ್ಲಾಮಾರಿ ತೀರ್ಥ ಕ್ಷೇತ್ರದ ಶ್ರೀ ಅಭಿನವ ಶರಣ ಶಂಕರಲಿAಗ ಮಹಾರಾಜರು ದಿವ್ಯ ಸಾನಿಧ್ಯ ವಹಿಸಲಿದ್ದು, ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಬಾಬುರಾವ್ ಯಡ್ರಾಮಿ ಅವರು ಗೌರವ ಉಪಸ್ಥಿತಿ ವಹಿಸುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಸಚಿವ ರೇವು ನಾಯಕ್ ಬೆಳಮಗಿ, ಕೆಯುಡ್ಲೆöÊಜೆ ರಾಜ್ಯ ಸಮಿತಿ ಸದಸ್ಯ ಶಿವರಂಜನ್ ಸತ್ಯಂಪೇಟ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ್ ತಡಕಲ್, ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಶಿವಪ್ರಭು ಪಾಟೀಲ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಶರಣಬಸಪ್ಪ ಪೊಲೀಸ್ ಪಾಟೀಲ್, ಶಿವಶೆಟ್ಟಿ ಪಾಟೀಲ್, ವೀರಶೈವ ಲಿಂಗಾAiಲ್ತ ಮುಖಂಡ ರವಿ ಬಿರಾದಾರ್, ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸಂಗಮನಾಥ್ ರೇವತಗಾಂವ್, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿನಾಥ್ ಪಾಟೀಲ್ ಸೊಂತ್, ಮಾಜಿ ಮಹಾನಗರ ಪಾಲಿಕೆ ಸದಸ್ಯ ರಾಜಕುಮಾರ್ ಕಪನೂರ್, ಬಿಜೆಪಿ ಮುಖಂಡ ಶಿವಕುಮಾರ್ ಪಸಾರ್, ಕಾಂಗ್ರೆಸ್ ಮುಖಂಡ ಗುರು ಮಾಟೂರ್, ತಹಸಿಲ್ದಾರ್ ಮಹಮ್ಮದ್ ಮೊಹಸಿನ್, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶಾಂತಪ್ಪ ಹಾದಿಮನಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಿ ನಿಲಾಂಬಿಕಾ ಬಬಲಾದ್, ಕ್ಷೇತ್ರ ಶಿಕ್ಷಣಾಧಿಕಾರಿ ಸೋಮಶೇಖರ್ ಹಂಚಿನಾಳ್, ಶಿವಕುಮಾರ್ ದೊಶೆಟ್ಟಿ, ಅಮೃತ್ ಗೌರೆ, ಮಲ್ಲಿಕಾರ್ಜುನ್ ಮರತೂರಕರ್, ಅಮರನಾಥ್ ಚಿಕ್ಕೆಗೌಡ, ಶಿವಾ ಅಷ್ಟಗಿ, ಸಂತೋಷ್ ರಾಂಪೂರ್, ನಿಂಗಪ್ಪ ಪ್ರಬುದ್ದಕರ್, ನರೇಶ್ ಹರಸೂರಕರ್, ಶಶಿಧರ್ ಮಾಕಾ, ಅಂಬಾರಾಯ್ ಜವಳಗಾ, ಶರಣು ಗೌರೆ, ತಾಜುದ್ದೀನ್ ಪಟೇಲ್, ಸುರೇಶ್ ರಾಠೋಡ್, ಆನಂದ್ ವಾರಿಕ್, ಮಹಾದೇವ್ ದಸ್ತಾಪುರ, ಹಣಮಂತ್ ಹೊಸಮನಿ ಇತರರು ಭಾಗವಹಿಸಲಿದ್ದಾರೆ ಎಂದು ಅವರು ಹೇಳಿಕೆಯಲ್ಲಿ ವಿವರಿಸಿದ್ದಾರೆ.

LEAVE A REPLY

Please enter your comment!
Please enter your name here