ಕಲಬುರ್ಗಿಯಲ್ಲಿ ಶುಕ್ರವಾರ ವಿಕಾಸ್ ಬ್ಯಾಂಕ್ ಹೊಸ 9ನೇ ಕಚೇರಿ ಆರಂಭ

0
360

ಕಲಬುರ್ಗಿ, ಜು.24- ಕಳೆದ 27 ವರ್ಷಗಳಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಹೊಸಪೇಟೆಯ ವಿಕಾಸ್ ಸೌಹಾರ್ಧ ಕೋ- ಆಪರೇಟಿವ್ ಬ್ಯಾಂಕ್ ನಗರದಲ್ಲಿ ಸುಸಜ್ಜಿತ ಕಚೇರಿಯನ್ನು ಹೊಂದಲಿದೆ. ಈ ಸಂಬAಧ ಜುಲೈ 26ರಂದು ನಗರದ ತಿರಂದಾಜ್ ವೃತ್ತದ ಬಳಿ ನೂತನ ಕಚೇರಿ ಪೂಜಾ ಕಾರ್ಯಕ್ರಮ ಹಾಗೂ ಉದ್ಘಾಟನೆ ಹಮ್ಮಿಕೊಳ್ಳಲಾಗಿದೆ ಎಂದು ಬ್ಯಾಂಕಿನ ಅಧ್ಯಕ್ಷ ವಿಶ್ವನಾಥ್ ಚ. ಹಿರೇಮಠ್ ಅವರು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕ್ತಂಪೂರದ ಗದ್ದುಗೆಮಠದ ಚರಲಿಂಗ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು ಎಂದು ತಿಳಿಸಿದರು.
ಹೊಸ ಶಾಖೆ ಹೇಗೆ ಕಾರ್ಯನಿರ್ವಹಿಸಬೇಕು?, ಗ್ರಾಹಕರ ಅಪೇಕ್ಷೆಗಳೇನು? ನಗರದ ಆರ್ಥಿಕ ಅಗತ್ಯಗಳನ್ನು ಅರಿಯುವ ದೃಷ್ಟಿಯಿಂದ ಬ್ಯಾಂಕ್ ನಗರದಲ್ಲಿನ ಮನೆ, ಮನೆ ಭೇಟಿ ಅಭಿಯಾನವನ್ನು ಕಳೆದ 20ರಿಂದ ಆರಂಭಿಸಿದೆ. ಬ್ಯಾಂಕ್‌ನ 24 ಸಿಬ್ಬಂದಿಗಳು ಕಳೆದ ಆರು ದಿನಗಳಿಂದ ಬಹುತೇಕ ಪ್ರದೇಶಗಳಲ್ಲಿ ಅಂಗಡಿ ಮತ್ತು ಮನೆಗಳನ್ನು ಸಂಪರ್ಕಿಸಿ ಸರಿ ಸುಮಾರು 9000 ಅಂಗಡಿ ಮತ್ತು ಮನೆಗಳಿಗೆ ಭೇಟಿ ನೀಡಿ ವಿವಿಧ ಪ್ರಯೋಜನ ಪಡೆಯುವಂತೆ ಮಾಹಿತಿ ನೀಡಿದ್ದಾರೆ ಎಂದು ಅವರು ಹೇಳಿದರು.
ಬ್ಯಾಂಕ್ ಒಟ್ಟು 811 ಕೋಟಿ ರೂ.ಗಳ ಠೇವಣಿ ಹೊಂದಿದೆ. 544 ಕೋಟಿ ರೂ.ಗಳ ಸಾಲವನ್ನು ನೀಡಿದೆ. ಒಟ್ಟು 1355 ಕೋಟಿ ರೂ.ಗಳ ವ್ಯವಹಾರವನ್ನು ಮಾಡಲಾಗಿದೆ. ಶೇಕಡಾ 4.17ರಷ್ಟು ಅನುತ್ಪಾದಕ ಆಸ್ತಿಯಿದ್ದು, ನಿವ್ವಳ ಲಾಭ ಶೇಕಡಾ 0.75ರಷ್ಟು ಹೊಂದಿದೆ. ಸ್ವಂತ ಬಂಡವಾಳವನ್ನು 76 ಕೋಟಿ ರೂ.ಗಳನ್ನು ಹೊಂದಿದೆ ಎಂದು ಅವರು ವಿವರಿಸಿದರು.
ಮಾರುಕಟ್ಟೆಯ ಅವಶ್ಯಕತೆಗೆ ತಕ್ಕಂತೆ ಬ್ಯಾಂಕ್ ಬೆಳಿಗ್ಗೆ 8ರಿಂದ ರಾತ್ರಿ 8 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತಿದೆ. ವರ್ಷದ ಎಲ್ಲ ದಿನಗಳಲ್ಲಿಯೂ ರಜೆ ರಹಿತ ಬ್ಯಾಂಕಿAಗ್ ಸೇವೆ ನೀಡುವ ದೇಶದ ಏಕೈಕ ಬ್ಯಾಂಕ್ ಎನ್ನಬಹುದಾಗಿದೆ. ರಜಾ ದಿನಗಳಲ್ಲಿಯೂ ಲಾಕರ್ ಸೌಲಭ್ಯ, ಸಾಲ ಸೌಲಭ್ಯ ಸೇರಿದಂತೆ ಎಲ್ಲ ಬ್ಯಾಂಕಿAಗ್ ಸೇವೆಗಳು ಕೂಡ ಲಭ್ಯವಿರಲಿವೆ ಎಂದು ಅವರು ವಿವರಿಸಿದರು.
ತಂತ್ರಜ್ಞಾನದ ಬಳಕೆಯಲ್ಲಿ ಕೂಡ ಸದಾ ಮುಂಚೂಣಿಯಲ್ಲಿರುವ ವಿಕಾಸ್ ಬ್ಯಾಂಕ್ ಇತರೇ ಮುಖ್ಯ ವಾಹಿನಿ ಬ್ಯಾಂಕುಗಳಿಗೆ ಕಡಿಮೆ ಇಲ್ಲದಂತೆ ನವ ಪೀಳಿಗೆಯ ಬ್ಯಾಂಕಿAಗ್ ಸೌಲಭ್ಯಗಳಾದ ಎಟಿಎಂ, ಮೊಬೈಲ್ ಬ್ಯಾಂಕಿAಗ್ ಆಪ್, ಯುಪಿಎ, (ಪೇಮೆಂಟ್ ಆಪ್‌ಗಳು, ಗೂಗಲ್ ಪೇ, ಫೋನ್ ಪೇ, ಪೇಟಿಎಂ ಇತ್ಯಾದಿ) ಡಿಜಿಟಲ್ ಬ್ಯಾಂಕಿAಗ್ ಸೇವೆಗಳು ಹಾಗೂ ಸೌಲಭ್ಯ ಸೇರಿದಂತೆ ಎಲ್ಲ ರೀತಿಯ ತಂತ್ರಜ್ಞಾನ ಸೇವೆಗಳನ್ನು ನೀಡುತ್ತ ಗ್ರಾಹಕ ಸೇವೆಗೆ ಆದ್ಯತೆ ನೀಡುತ್ತ ಬಂದಿದೆ ಎಂದು ಅವರು ಹೇಳಿದರು.
ಸಹಕಾರ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ 2008ರಲ್ಲಿ ನಷ್ಟದಲ್ಲಿದ್ದ ಹುಬ್ಬಳ್ಳಿಯ ಅಭಿನಂದನ ಸಹಕಾರಿ ಬ್ಯಾಂಕ್‌ನ್ನು ತನ್ನಲ್ಲಿ ವಿಲೀನಗೊಳಿಸಿಕೊಳ್ಳುವ ಮೂಲಕ ಸಹಕಾರ ಕ್ಷೇತ್ರದ ಮೇಲೆ ಜನರ ವಿಶ್ವಾಸವನ್ನು ಗಟ್ಟಿಗೊಳಿಸಿತಲ್ಲದೇ ನಷ್ಟದಲ್ಲಿದ್ದ ಬ್ಯಾಂಕಿನ ಗ್ರಾಹಕರ ಆರ್ಥಿಕ ಹಿತಾಸಕ್ತಿಯನ್ನು ಕಾಪಾಡಿದೆ. ಅದರ ಅನುಭವದ ಮೇಲೆ ಮತ್ತೆ 2022ರಲ್ಲಿ ಬೀದರ್ ಮಹಿಳಾ ಸಹಕಾರಿ ಬ್ಯಾಂಕ್‌ನ್ನು ಕೂಡ ವಿಕಾಸ್ ಬ್ಯಾಂಕ್‌ನಲ್ಲಿ ವಿಲೀನಗೊಳಿಸಲಾಯಿತು. ಸದೃಢತೆ ಹಾಗೂ ಉತ್ತಮ ಆಡಳಿತಕ್ಕೆ ಮನ್ನಣೆ ಎನ್ನುವಂತೆ ಹೊಸದಾಗಿ ಇನ್ನೂ ಇನ್ನೂ ಎರಡು ವಿಲೀನ ಪ್ರಸ್ತಾಪಗಳು ಸದ್ಯ ನಮ್ಮ ಮುಂದಿವೆ ಎಂದು ಅವರು ತಿಳಿಸಿದರು.
ಭಾರತೀಯ ರಿಜರ್ವ್ ಬ್ಯಾಂಕಿನ ಹೊಸ ಮಾನದಂಡಗಳ ಪ್ರಕಾರ, ಆಡಳಿತ ಮಂಡಳಿ ಅಲ್ಲದೇ ವ್ಯವಸ್ಥಾಪನಾ ಮಂಡಳಿಯನ್ನು ರಚಿಸಿದ ರಾಜ್ಯದ ಮೊದಲ ಸಹಕಾರ ಬ್ಯಾಂಕ್ ನಮ್ಮದಾಗಿದ. ಆರ್‌ಬಿಐನ ಎಲ್ಲ ಮಾನದಂಡಗಳನ್ನು ಪಾಲಿಸಿದ ಪರಿಣಾಮವಾಗಿ ವಿಕಾಸ್ ಬ್ಯಾಂಕಿಗೆ ಒಟ್ಟು ಹತ್ತು ಹತ್ತು ನೂತನ ಶಾಖೆಗಳನ್ನು ತೆರೆಯಲು ಭಾರತೀಯ ರಿಜರ್ವ್ ಬ್ಯಾಂಕ್ ಅನುಮತಿ ನೀಡಿದೆ. ನಗರದಲ್ಲಿನ ಶಾಖೆ ಸರಣಿ 9ನೇ ಶಾಖೆಯಾಗಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಯಾಂಕ್ ನಿರ್ದೇಶಕರಾದ ಎಂ. ವೆಂಕಪ್ಪ, ಪ್ರಸನ್ನ ಹಿರೇಮಠ್, ರಮೇಶ್ ಪುರೋಹಿತ್, ಜಿಲ್ಲಾ ಒಕ್ಕೂಟ ಸೌಹಾರ್ದ ಸಹಕಾರಿ ಅಧ್ಯಕ್ಷ ಎಸ್.ಎಸ್. ಪಾಟೀಲ್, ಶಾಖೆಯ ಅಧಿಕಾರಿ ಗೌತಮ್ ಅಂಗಡಿ ಮುಂತಾದವರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here