ಕಲಬುರಗಿ, ಜೂ. 06:ಈಶಾನ್ಯ ಪದವಿಧರರ ಮತಕ್ಷೇತ್ರದ ಮತ ಏಣಿಕೆ ಕಾರ್ಯ ಮುಂದುವರೆದಿದ್ದು, ಎರಡನೇ ಸುತ್ತಿನಲ್ಲಿಯೂ ಬಿಜೆಪಿಯ ಅಮರನಾಥ ಪಾಟೀಲ್ ಅವರೇ ಮುನ್ನಡೆ ಸಾಧಿಸಿದ್ದಾರೆ.
ಎರಡನೇ ಸುತ್ತಿನಲ್ಲಿ 27,981 ಮತಗಳ ಏಣಿಕೆ ಪೂರ್ಣಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಅಮರನಾಥ ಪಾಟೀಲ್ ಅವರಿಗೆ 8,732, ಕಾಂಗೈ ಅಭ್ಯರ್ಥಿ ಚಂದ್ರಶೇಖರ ಪಾಟೀಲ್ ಅವರಿಗೆ 8,423 ಮತ್ತು ಪಕ್ಷೇತರ ಅಭ್ಯರ್ಥಿ ನಾರಾ ಪ್ರತಾಪರೆಡ್ಡಿ ಅವರಿಗೆ 6,163 ಪ್ರಥಮ ಪ್ರಾಶಸ್ತö್ಯದ ಮತಗಳು ಬಂದಿವೆ.
ಒಟ್ಟು 1 ಲಕ್ಷ 9 ಸಾವಿರಕ್ಕೂ ಅಧಿಕ ಮತದಾನವಾದ ಈ ಈಶಾನ್ಯ ಪದವಿಧರರ ಮತಕ್ಷೇತ್ರದಲ್ಲಿ ಇನ್ನು 13 ಸುತ್ತಿನ ಮತ ಏಣಿಕೆ ಮಾಡಬೇಕಿದೆ.
24552 ಮಾನ್ಯ ಮತಗಳಾಗಿದ್ದು, 3,429 ಅಸಿಂಧು ಮತಗಳು ಚಲಾವಣೆಗೊಂಡಿವೆ. ಒಟ್ಟು 27,981 ಮತಗಳ ಏಣಿಕೆ ಮುಕ್ತಾಯಗೊಂಡಿದೆ.