ಮಾಲೀಕಯ್ಯ ಗುತ್ತೇದಾರರಾಜಕೀಯ ನಿರ್ಧಾರ 19ಕ್ಕೆ

0
1421

ಕಲಬುರಗಿ, ಏ. 16:ಹಿಂದುಳಿದ ನಾಯಕ ಅದರಲ್ಲೂ ಕಳೆದ ಬಾರಿ ಕಲಬುರಗಿ ಲೋಕಸಭಾ ಕ್ಷೇತ್ರ ಕಾಂಗೈನಿAದ ಬಿಜೆಪಿಗೆ ವಾಲುವಂತೆ ಮಾಡಿದವರಲ್ಲಿ ಪ್ರಮುಖರೊಬ್ಬರಾಗಿರುವ ಬಿಜೆಪಿ ಮಾಜಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ಅವರು ಬಿಜೆಪಿಯಲ್ಲಿಯೇ ಮುಂದುವರೆಯಬೇಕಾ ಅಥವಾ ಕಾಂಗ್ರೆಸ್ ಪಕ್ಷಕ್ಕೆ ಮತ್ತೇ ಮರಳಬೇಕಾ ಎಂಬ ಬಗ್ಗೆ ಅಂತಿಮ ತೀರ್ಮಾನ ಏಪ್ರಿಲ್ 19ರಂದು ಕೈಗೊಳ್ಳಲಿದ್ದಾರೆ.
ಇತ್ತೀಚೆಗಷ್ಟೇ ತಮ್ಮ ಸಹೋದರ ಹಾಗೂ ಕಳೆದ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಸೋಲಿಗೆ ಕಾರಣೀಭೂತರಾದ ನಿತೀನ ಗುತ್ತೇದಾರ ಅವರ ಬಿಜೆಪಿಗೆ ಸೇರ್ಪಡೆಮಾಡಿಕೊಂಡಿದ್ದರಿAದ ಅಸಮಧಾನಗೊಂಡ ಮಾಲೀಕಯ್ಯ ಅವರು ಪಕ್ಷ ಬಿಡುವ ಇಂಗೀತವನ್ನು ಡಿಕೆಶಿಗೆ ಭೇಟಿ ಮಾಡುವ ಮೂಲಕ ಹೊರಹಾಕಿದ್ದರು.
ಇಂದು ಮಂಗಳವಾರ ಇಲ್ಲಿನ ಸಭಾಂಗಣವೊAದರಲ್ಲಿ ಮಾಲೀಕಯ್ಯ ಗುತ್ತೇದಾರ ಹಿತೈಷಿಗಳ ಹಾಗೂ ಅಭಿಮಾನಿಗಳ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪಡೆದು, ತಮ್ಮ ಅಂತಿಮ ತೀರ್ಮಾನವನ್ನು ಏಪ್ರಿಲ್ 19ಕ್ಕೆ ಪ್ರಕಟಿಸಲಿದ್ದಾರೆ.
ಇಂದು ನಡೆದ ಸಭೆಯಲ್ಲಿ ಅಫಜಲಪೂರ ಬಿಜೆಪಿ ಎಲ್ಲ ಹಿರಿಯ-ಕಿರಿಯ ನಾಯಕರುಗಳು, ಕಾರ್ಯಕರ್ತರು, ಮಾಲೀಕಯ್ಯ ಪುತ್ರ ರಿತೇಶ ಗುತ್ತೇದಾರ, ಬಿಜೆಪಿ ಮುಖಂಡ ಶಿವಕಾಂತ ಮಹಾಜನ್, ಅರುಣಕುಮಾರ ಪಾಟೀಲ್ ಕೊಡ್ಲಹಂಗರಗಾ, ಕಲ್ಯಾಣರಾವ ಪಾಟೀಲ್, ಪರ್ವತರೆಡ್ಡಿ ಸೇಡಂ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

LEAVE A REPLY

Please enter your comment!
Please enter your name here