ಶಶೀಲ್ ನಮೋಶಿ ಸಾರಥ್ಯಕ್ಕೆ ಹೆಚೆ.ಕೆ.ಇ.

0
987

ಕಲಬುರಗಿ, ಮಾ. 17:ಇಲ್ಲಿನ ಪ್ರತಿಷ್ಠಿತ ಹೈದ್ರಾಬಾದ ಕರ್ನಾಟಕ ಶಿಕ್ಷಣ ಸಂಸ್ಥೆಗೆ ನಡೆದ ಚುನಾವಣೆಯಲ್ಲಿ ಈಗಾಗಲೇ ನಡೆದ ಮತ ಏಣಿಕೆ ಕಾರ್ಯ ಬಹುತೇಕ ಮುಗಿದಂತೆ ಆಗಿದ್ದು, ಅಂತಿಮವಾಗಿ ಎಂಎಲ್ಸಿ ಶಶೀಲ್ ನಮೋಶಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅಲ್ಲದೇ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಮಾಜಿ ಹೈ.ಕ. ಅಧ್ಯಕ್ಷ ಬಸವರಾಜ ಭೀಮಳ್ಳಿ ಅವರ ಪುತ್ರ ರಾಜು ಭೀಮಳ್ಳಿ ಅವರು 847 ಮತಗಳನ್ನು ಪಡೆಯುವ ಮೂಲಕ ಅತೀ ಹೆಚ್ಚು ಮತಗಳ ದಾಖಲೆ ಗೆಲುವು ಪಡೆದಿದ್ದಾರೆ.
ನಮೋಶಿ ಪೇನಾಲ್‌ನಿಂದ ಕೈಲಾಸ್ ಪಾಟೀಲ್ (722), ಅರುಣಕುಮಾರ ಎಂ. ಪಾಟೀಲ್ (690), ಉದಯಕುಮಾರ ಎಸ್. ಚಿಂಚೋಳಿ (668), ರಜನೀಶ ವಾಲಿ (622), ಶರಣಬಸಪ್ಪಾ ಹರವಾಳ (538), ನಿಶಂತ ಎಲಿ (427) ಒಟ್ಟು ಆರು ಜನ ಕಾರ್ಯಕಾರಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.
ಸಂತೋಷ ಬಿಲಗುಂದಿ ಪೆನಾಲ್‌ದಿಂದ ಐದು ಜನ ಮತ್ತು ಡಾ. ಕಾಮರೆಡ್ಡಿ ಪೆನಾಲ್‌ನಿಂದ ಇಬ್ಬರು ಸದಸ್ಯರು ಆಯ್ಕೆಯಾಗಿದ್ದಾರೆ.
ಬಿಲಗುಂದಿ ಪೆನಾಲ್‌ನಿಂದ ಆಯ್ಕೆಯಾದ ಸದಸ್ಯರೆಂದರೆ ಡಾ. ಕಿರಣ ದೇಶಮುಖ 622, ಮಹಾದೇವಪ್ಪ ರಾಮಪುರೆ 614, ಡಾ. ನಾಗೇಂದ್ರ ಎಸ್. ಮಂಠಾಳೆ 567, ಸಾಯಿನಾಥ ಪಾಟೀಲ 530 ಮತ್ತು ಡಾ. ಅನೀಲಕುಮಾರ ಪಟ್ಟಣ 529 ಆಯ್ಕೆಯಾಗಿದ್ದಾರೆ.
ಡಾ. ಕಾಮರೆಡ್ಡಿ ಪೆನಾಲ್‌ದಿಂದ ನಾಗಣ್ಣ ಎಸ್. ಘಂಟಿ (508 ಮತ್ತು ಅನೀಲಕುಮಾರ ಎಸ್. ಮರಗೋಳ 494 ಮತಗಳನ್ನು ಪಡೆದು ಆಯ್ಕೆಯಾಗಿದ್ದಾರೆ.
ಕಾಮರೆಡ್ಡಿ ಪೆನಾಲ್‌ನಿಂದ ಕಾರ್ಯಕಾರಿ ಸಮತಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಅನೀಲಕುಮಾರ ಮರಗೋಳ ಅವರು ಕೇವಲ ಒಂದು ಮತದಿಂದ ಜಯಸಾಧಿಸಿದ್ದಾರೆ. ಅವರು ತಮ್ಮ ಸಮೀಪರ ಇಬ್ಬರು ಅಭ್ಯರ್ಥಿಗಳಾದ ಆನಂದ ದಂಡೋತಿ (493) ಮತ್ತು ವಿಜಯಕುಮಾರ ದೇಶಮುಖ (493) ಸಮಾನ ಮತಪಡೆದು ಪರಾಭವಗೊಂಡ ದುರದೈವಿಗಳಾಗಿದ್ದಾರೆ.
ರವಿವಾರ 16ರಂದು ಹೈ.ಕ. ಸಂಸ್ಥೆಗೆ ಚುನಾವಣೆ ನಡೆದಿತ್ತು,ಇಂದು ಮುಂಜನೆ 9 ಗಂಟೆಗೆ ಇಲ್ಲಿನ ಸಿಪಿಎಂ ಹಾಸ್ಟೇಲ್ ಕಟ್ಟಡದಲ್ಲಿ ಮತಏಣಿಕೆ ಪ್ರಾರಂಭವಾಗಿದ್ದು, ಸಂಜೆ 7 ಗಂಟೆಯವರೆಗೆ ಸದಸ್ಯರ ಹಾಗೂ ಉಪಾಧ್ಯಕ್ಷ ಹುದ್ದೆಗಳ ಮತ ಏಣಿಕೆ ನಡೆಯಿತು.
ಇನ್ನು ಅದ್ಯಕ್ಷ ಸ್ಥಾನದ ಮತಗಳ ಏಣಿಕೆ ಮುಂದುವರೆದಿದೆ.

LEAVE A REPLY

Please enter your comment!
Please enter your name here