ಕಲಬುರಗಿ, ಜ. 09:ಸ್ವರ್ಣ ನಗರಿಯಾಗುತ್ತಿರುವ ಅಯೋಧ್ಯೆಯಲ್ಲಿ ಜನೆವರಿ 22ರಂದು ಪ್ರತಿಷ್ಠಾಪಿಸಲ್ಪಡುತಿರುವ ಶ್ರೀ ಬಾಲರಾಮನ ವಿಗ್ರಹ.
ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ಅವರು ಕಪ್ಪು ಕಲ್ಲಿನಲ್ಲಿ ಕೆತ್ತಿದ ರಾಮ ಲಲ್ಲಾ ಅಥವಾ ಶಿಶು ರಾಮನ ವಿಗ್ರಹ ಗುರುವಾರಷ್ಟೇ ಗರ್ಭಗುಡಿ ಪ್ರವೇಶಿಸಿದೆ.
ಜನೆವರಿ 22ರಂದು ನಡೆಯಲಿರುವ ಶ್ರೀಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗಾಗಿ ಈಗಾಗಲೇ ಎಲ್ಲ ಧಾರ್ಮಿಕ ವಿಧಿ-ವಿಧಾನಗಳನ್ನು ಕೈಗೊಳ್ಳಲಾಗುತ್ತಿದ್ದು, ಸುಮಾರು 500 ವರ್ಷಗಳ ಕನಸು ಈಡೇರಿದಂತಾಗಿದೆ.