ಕಲಬುರಗಿ-ಬೀದರ ಲೋಕಸಭಾ ಚುನಾವಣೆಯ ಕ್ಲಸ್ಟರ್ ಪ್ರಮುಖರಾಗಿ ತೇಲ್ಕೂರ್ ನೇಮಕ

0
978

ನವದೆಹಲಿ, ಜ. 17: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕ ರಾಜ್ಯದಲ್ಲಿ ಒಟ್ಟು 10 ಕ್ಲಸ್ಟರ್‌ಗಳಿಗೆ ಪ್ರಮುಖರನ್ನು ನೇಮಿಸಲಾಗಿದ್ದು, ಅದರಲ್ಲೂ ಕಲ್ಯಾಣ ಕರ್ನಾಟಕದ ಕಲಬುರಗಿ ಹಾಗೂ ಬೀದರ ಲೋಕಸಭಾ ಸ್ಥಾನಗಳಿಗೆ ಮಾಜಿ ಶಾಸಕ, ಮಾಜಿ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ರಾಜಕುಮಾರ ಪಾಟೀಲ ತೇಲ್ಕೂರ್ ಅವರನ್ನು ನೇಮಿಸಲಾಗಿದೆ.
ಕಲಬುರಗಿ ಹಾಗೂ ಬೀದರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಗೆಲುವಿನ ಗುರಿ ತೇಲ್ಕೂರ್ ಅವರ ಹೇಗಲ ಮೇಲಿದ್ದು, ಕಲಬುರಗಿ ಮತ್ತು ಬೀದರ ಜಿಲ್ಲಾ ಹಾಗೂ ನಗರ ಸಮಿತಿ ಪದಾಧಿಕಾರಿಗಳು ಈ ಎರಡು ಕ್ಷೇತ್ರಗಳಲ್ಲಿ ಪಕ್ಷದ ಬಲವರ್ಧನೆ ಜೊತೆಗೆ ಅಭ್ಯರ್ಥಿಗಳ ಗೆಲುವಿಗಾಗಿ ರೂಪರೇಷೆಗಳನ್ನು ಸಿದ್ದಪಡಿಸಿ, ಪ್ರಧಾನಿ ನರೇಂದ್ರ ಮೋದಿಯವರು ಮತ್ತೇ ಹ್ಯಾಟ್ರಿಕ್ ಗೆಲುವು ಸಾಧನೆಗೆ ಟಾರ್ಗಟ್ ನೀಡಲಾಗಿದೆ.
ಪ್ರಸ್ತುತ ದೇಶದಾದ್ಯಂತ ಮೋದಿ ಹವಾ ಇದ್ದು, ಇಲ್ಲಿ ಕಲ್ಯಾಣ ಕರ್ನಾಟಕದ ಭಾಗದ ಹೆಬ್ಬಾಗಿಲು ಕಲಬುರಗಿ ಮತ್ತು ಬೀದರ ಲೋಕಸಭಾ ಕ್ಷೇತ್ರದಲ್ಲಿ ಮತ್ತೇ ಬಿಜೆಪಿ ಜಯಭೇರಿಗೆ ರಾಜಕುಮಾರ ಪಾಟೀಲ್ ತೇಲ್ಕೂರ್ ಹೆಗಲಿಗೆ ಈ ಜವಾಬ್ದಾರಿ ನೀಡಲಾಗಿದೆ.
ಇಂದು ಬುಧವಾರ ಈ ಕುರಿತಂತೆ ನವದೆಹಲಿಯಲ್ಲಿ ಬಿಜೆಪಿ ಪಕ್ಷದ ಸಭೆ ನಡೆಸಲಾಗಿದ್ದು, ಇದರಲ್ಲಿ ರಾಜಕುಮಾರ ಪಾಟೀಲ್ ತೇಲ್ಕೂರ್ ಭಾಗಿಯಾಗಿ, ಈ ಜವಾಬ್ದಾರಿ ನೀಡಲಾಗಿದೆ ಎಂದು ತಿಳಿದುಬಂದಿದೆ.
ಈ ಕುರಿತಂತೆ ನಮ್ಮ ಪತ್ರಿಕೆಯೊಂದಿಗೆ ಮಾತನಾಡಿದ ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ್ ಅವರು, ನನಗೆ ಕೊಟ್ಟಿರುವ ಈ ಜವಾಬ್ದಾರಿ ಪ್ರಮಾಣಿಕವಾಗಿ ನಿರ್ವಹಿಸುವ ಜೊತೆಗೆ ಪಕ್ಷದ ಅಭ್ಯರ್ಥಿಗಳ ಗೆಲುವುನೊಂದಿಗೆ ಮತ್ತೋಮ್ಮೆ ಕೇಂದ್ರದಲ್ಲಿ ಮೋದಿ ಸರಕಾರ ಸ್ಥಾಪನೆ ಶತಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿರುವ ರಾಜಕುಮಾರ ಪಾಟೀಲ್ ತೇಲ್ಕೂರ್ ಅವರು ನಾಳೆ ಅಂದರೆ ಜನೆವರಿ 19ರಂದು ಕಲಬುರಗಿ ವಿಮಾನ ನಿಲ್ದಾಣಕ್ಕೆ ಆಗಮಿಸುವ ಪ್ರಧಾನಿ ಮೋದಿ ಅವರನ್ನು ಸ್ವಾಗತಿಸಲು ಆಗಮಿಸುವುದಾಗಿ ಹೇಳಿದ್ದಾರೆ.
ಅಯೋಧ್ಯೆಯಲ್ಲಿ ಜರುಗುವ ಶ್ರೀರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಹೋಗುವೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ತೇಲ್ಕೂರ್ ಅವರು ಇದು ನಮ್ಮ ಕಾರ್ಯಕ್ರಮ, ಇಲ್ಲಿ (ಅಯೋಧ್ಯೆಯಲ್ಲಿ) ಈಗಾಗಲೇ ಲಕ್ಷಾಂತರ ಭಕ್ತರು ಆಗಮಿಸುತ್ತಿದ್ದು, ಅವರಿಗೆ ಮೊದಲು ಶ್ರೀರಾಮನ ದರ್ಶನವಾಗಲೀ, ನಂತರ ದಿನಗಳಲ್ಲಿ ನಾವು ನಮ್ಮ ಪಕ್ಷದ ಕಾರ್ಯಕರ್ತರು ದೇಗುಲಕ್ಕೆ ಭೇಟಿ ನೀಡಲಿದ್ದೇವೆ. ಶ್ರೀರಾಮನ ದರ್ಶನ ದೇಶದ ಈಡೀ 140 ಕೋಟಿ ಜನರ ಅಭಿಲಾಷೆಯಾಗಿದೆ. ಅದರಲ್ಲೂ ನಾನೂ ಒಬ್ಬ ಎಂದು ಹೇಳಿದರು

Total Page Visits: 681 - Today Page Visits: 1

LEAVE A REPLY

Please enter your comment!
Please enter your name here