ಅಂಧ ಬಾಲಕರ ವಸತಿ ಶಾಲೆಯ ಅಧೀಕ್ಷಕ ಸೇರಿದಂತೆ ಶಿಕ್ಷಕರ ಅಮಾನತ್ತಿಗೆ ಮೇಟಿ ಆಗ್ರಹ

0
494

ಕಲಬುರಗಿ, ಡಿ. 29:ಜಿಲ್ಲಾ ಅಂಗÀ ವಿಕಲರ ಪ್ರಭಾರಿ ಕಲ್ಯಾಣಧಿಕಾರಿ ಮತ್ತು ಸರಕಾರಿ ಅಂಧ ಬಾಲಕರ ವಸತಿ ಶಾಲೆಯ ಅಧೀಕ್ಷಕರಾದ ಸಾಧೀಕ ಹುಸೇನ ಖಾನ್ ಹಾಗೂ ವಸತಿ ನಿಲಯದ ಪ್ರಭಾರಿ ಮೇಲ್ವಿಚಾರಕರಾದ ಜಗದೀಶ ನಾಯಕ, ಸಹಾಯಕ ಮೆಲ್ವಿಚಾರಕ ಪ್ರಕಾಶ ಭಜಂತ್ರಿ ಅವರುಗಳನ್ನು ಸೇವೆಯಿಂದ ಅಮಾನತ್ತುಗೊಳಿಸಿ, ಇಲಾಖೆ ಮಟ್ಟದಲ್ಲಿ ತನಿಖೆ ನಡೆಸಬೇ ಕೆಂದು ನವಕರ್ನಾಟಕ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷರಾದ ಅಂಬಾಜಿ ಪಿ. ಮೇಟಿ ಹಾಗೂ ರಾಜ್ಯಗೌರವಾಧ್ಯಕ್ಷ ರಾದ ದತ್ತಾತ್ರೇಯ ಆರ್. ಕುಡಕಿ ಅವ ರುಗಳು ಆಗ್ರಹಿಸಿದ್ದಾರೆ.

ಅವರುಗಳು ಇಂದು ಪತ್ರಿಕಾ ಭವ ನದಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತ, ಈ ಪ್ರಕರಣದ ಸಮಗ್ರ ತನಿಖೆ ನಡೆದರೆ, ಯಾರು ತಪ್ಪಿತಸ್ಥರು ಎಂಬುದು ಸಾಬೀತಾಗುತ್ತದೆ, ತಪ್ಪಿತ ಸ್ಥ ಅಧಿಕಾರಿಗಳ ವಿರುದ್ಧ ಸರಕಾರ ಕ್ರಮತೆಗೆದುಕೊಳ್ಳಬೇಕು ಇಲ್ಲದಿದ್ದರೆ ರಾಜ್ಯಮಟ್ಟದಲ್ಲಿ ಬೀದಿಗಳಿದು ಹೋ ರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಕರಣ ಸಾರಾಂಶ:
ಈ ವಸತಿ ನಿಲಯದಲ್ಲಿ ಅಂಧ ನಾಲ್ಕು ಜನ ಹತ್ತನೇ ತರಗತಿಯಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು ಇದೇ ತಿಂಗಳು 22ರಂದು ವಸತಿ ನಿಲಯದಲ್ಲಿ ಕುಡಿದ ಆಮೀಲಿನಲ್ಲಿ ಸಹ ವಿದ್ಯಾರ್ಥಿಯಾದ ವಿರೇಶ ಎಂಬುವನಿಗೆ ಲೈಂಗಿಕ ಕಿರುಕುಳ ನೀಡಿದ್ದಲ್ಲದೇ ವಸತಿಗೃಹದಲ್ಲಿ ಗಲಾಟೆ ಮಾಡಿದ್ದಾರೆಂದು ಸುಳ್ಳು ಆರೋಪ ಹೋರಿಸಿ, ಶಾಲೆಯಿಂದ ಹೊರಹಾಕಿದ್ದನ್ನು ಸಂಘವು ಬಲವಾಗಿ ಖಂಡಿ ಸುತ್ತದೆ ಎಂದು ಹೇಳಿದ್ದಾರೆ.
ಆದರೆ ಇವರುಗಳು ಈ ಅಂಧ ವಿದ್ಯಾರ್ಥಿಗಳ ವಿರುದ್ಧ ಮಾಡಿರುವ ಆರೋಪ ಸಂಪೂರ್ಣ ಸತ್ಯಕ್ಕೆ ದೂರ ವಾಗಿದ್ದು, ಶಾಲೆಯ ಶಿಕ್ಷಕರು, ಘಾಳೆಪ್ಪ ಬಡದಾಳ ನಿಷೇಧಿತ ಗುಟ್ಕಾ ಬಳಸುತ್ತಿರುವು ಆಕ್ಷಮ್ಯ ಅಪರಾಧವಲ್ಲದೇ, ಪ್ರಸ್ತುತ ವಸತಿ ಶಾಲೆಯಲ್ಲಿ ಸಾರಾಯಿ, ಗುಟ್ಕಾ, ಲೈಂಗೀಕ ಶೋಷಣೆಗಳಂತಹ ಈ ಪರಿಸ್ಥಿತಿ ನಿರ್ಮಾಣಕ್ಕೆ ಅಲ್ಲಿನ ಅಧಿಕಾರಿಗಳು ಮತ್ತು ಶಿಕ್ಷಕರ ಬೇಜವ್ದಾರಿ ಮತ್ತು ನಿರ್ಲಕ್ಷತನವೇ ಕಾರಣವೆಂದು ಮೇಟಿ ಅವರು ಆರೋಪಿಸಿ, ಈ ಕೂಡಲೇ ಇವರುಗಳು ಅಮಾನತುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.
ವಸತಿ ಶಾಲೆಯ ಅವ್ಯವಸ್ಥೆ ವಿರುದ್ಧ ಮಕ್ಕಳು ಸಪ್ಟಂಬರ್ 4ರಂದು ವಸತಿ ನಿಲಯದಲ್ಲಿ ಧರಣಿ ನಡೆಸುವ ಮೂಲಕ ಪ್ರತಿಭಟನೆ ಮಾಡಿದ್ದು, ಕಳ ಪೆಗುಣಮಟ್ಟದ ಆಹಾರ ನೀಡುತ್ತಿರುವ ಮತ್ತು ಶಿಕ್ಷಕರು ಪಾಠ ಮಾಡದಿರುವು ಕುರಿತು ಮೇಲಾಧಿಕಾರಿಗಳಿಗೆ ದೂರು ನೀಡಿರುವುದನ್ನೇ ಅಸ್ತçವನ್ನಾಗಿಸಿಕೊಂಡು ಪಾಪ ಈ ಅಂಧ ಬಾಲಕರ ಮೇಲೆ ಸೇಡು ತೀರಿಸಿಕೊಳ್ಳಲು ಡಿಸೆಂ ಬರ್ 22ರಿಂದ ಮಕ್ಕಳನ್ನು ಶಾಲೆ ಯಿಂದ ಹೊರ ಹಾಕಿದ್ದಾರೆಂದು ಹೇಳಿ ದರು.
ಪತ್ರಿಕಾಗೋಷ್ಠಿಯಲ್ಲಿ ವಸತಿ ಶಾಲೆ ಯಿಂದ ಹೊರಹಾಕಲ್ಪಟ್ಟ ಅಂಧ ವಿದ್ಯಾ ರ್ಥಿಗಳಾದ ಆನಂದ ಮಲಗಾರ ಮತ್ತು ಪ್ರಶಾಂತ ಬಸವರಾಜ ಉಪಸ್ಥಿತ ರಿದ್ದರು

LEAVE A REPLY

Please enter your comment!
Please enter your name here