ವಕೀಲರ ಸಂರಕ್ಷಣಾ ಕಾಯ್ದೆ ಅಂಗೀಕಾರ : ವಕೀಲರ ಹೋರಾಟಕ್ಕೆ ಸಿಕ್ಕ ಜಯ

0
673

ಬೆಳಗಾವಿ, ಸುವರ್ಣ ಸೌಧ: ಡಿ. 11: ವಕೀಲರ ಮೇಲೆ ಹಲ್ಲೆ ಅಥವಾ ಹಿಂಸಾಚಾರ ನಡೆಸುವವರಿಗೆ ಆರು ತಿಂಗಳಿನಿAದ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷದವರೆಗೆ ದಂಡ ವಿಧಿಸುವುದಕ್ಕೆ ಅವಕಾಶ ಕಲ್ಪಿಸುವ ಕರ್ನಾಟಕ ನ್ಯಾಯವಾದಿಗಳ ಮೇಲಿನ ಹಿಂಸಾಚಾರ ನಿಷೇಧ ಮಸೂದೆಯನ್ನು ಸೋಮವಾರ ಬೆಳಗಾವಿ ಚಳಿಗಾಲ ಅಧಿವೇಶನದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ ಮಸೂದೆಯನ್ನು ಮಂಡಿಸಿದರು.
ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗಾಗಿ ವಿಧಾನಸಭೆಯಲ್ಲಿ ಸಭಾಪತಿ ಯು.ಟಿ. ಖಾದರ ಅವರು ಮತಕ್ಕೆ ಹಾಕಿದಾಗ ಸಭೆಯಲ್ಲಿ ಎಲ್ಲರೂ ಧ್ವನಿಮತದಿಂದ ಒಕ್ಕೂರಿಲಿನಿಂದ ಬೆಂಬಲಿಸಿದ್ದರಿAದ ಈ ಮಸೂದೆ ಅಂಗೀಕಾರವಾಗಿದೆ.

ವಕೀಲರು ತಮ್ಮ ಕರ್ತವ್ಯ ನಿರ್ವಹಣೆ ವಿಷಯದಲ್ಲಿ ಬೆದರಿಕೆಗಳು ಬಂದಾಗ, ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದಾಗ, ಅವರ ಮೇಲೆ ಹಲ್ಲೆ ನಡೆಯುವಂತಹ ಸಂದರ್ಭಗಳಲ್ಲಿ ರಕ್ಷಿಸುವುದಕ್ಕಾಗಿ ಈ ಮಸೂದೆಯನ್ನು ರೂಪಿಸಲಾಗಿದೆ ಎಂದು ಮಸೂದೆ ಅಂಶಗಳ ಮೇಲೆ ಬೆಳಕು ಚಲ್ಲಿದ್ದರು.
ವಿಧಾನಸಭೆಯಲ್ಲಿ ಇಂದು ಅಂಗೀಕಾರವಾದ ವಕೀಲರ ಸಂರಕ್ಷಣಾ ಕಾಯ್ದೆ ಜಾರಿಗಾಗಿ ಇಂದು ಕಲಬುರಗಿ, ವಿಜಯಪುರ ಸೇರಿದಂತೆ ರಾಜ್ಯದ ಹಲವಾರು ಜಿಲ್ಲೆಗಳಲ್ಲಿ ವಕೀಲರು ನಡೆಸಿದ ಹೋರಾಟಕ್ಕೆ ಜಯಸಿಕ್ಕಂತಾಗಿದೆ.

ಹಿರಿಯ ವಕೀಲ ಭೃಂಗಿಮಠ ಸ್ವಾಗತ
ಕರ್ನಾಟಕ ರಾಜ್ಯದಲ್ಲಿ ವಕೀಲರ ಸಂರಕ್ಷಣಾ ಜಾರಿಯಾಗಿದ್ದು, ವಕೀಲ ಬಾಂಧವರಿಗೆ ಭವಿಷ್ಯ ಸಂರಕ್ಷಣೆ ಸಿಗುತ್ತದೆ ಮತ್ತು ವಕೀಲರು ನಿರ್ಭಯದಿಂದ ವಕಾಲತು ಮಾಡುವ ವಾತಾವರಣ ಸೃಷ್ಟಿಯಾಗುತ್ತಿದೆ ಎಂಬ ಭರವಸೆ ಮೂಡಿದೆ. ಸರಕಾರ ವಕೀಲರ ಸಂಘಟನೆಗಳ ಹೋರಾಟಕ್ಕೆ ಮಣಿದು ತಡವಾದರೂ ಚಿಂತೆಯಿಲ್ಲ, ಈಗಲಾದರೂ ಬೆಳಗಾವಿಯ ಸುವರ್ಣ ಸೌಧದದ ಚಳಿಗಾಲದ ಅಧಿವೇಶನದಲ್ಲಿ ಸೋಮವಾರ ಮಸೂದೆ ಜಾರಿಗೆ ಅಂಗೀಕಾರವಾಗಿದ್ದು ವಕೀಲ ಸಂಘಟನೆಗಳ ಹೋರಾಟಕ್ಕೆ ಸಿಕ್ಕ ಜಯವಾಗಿದೆ ಎಂದು ಹಿರಿಯ ನ್ಯಾಯವಾದಿ ಹಾಗು ಕರ್ನಾಟಕ ರಾಜ್ಯ ವಕೀಲರ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಲ್ಲಿಕಾರ್ಜುನ ಭೃಂಗಿಮಠ ಅವರು ಹರ್ಷ ವ್ಯಕ್ತಪಡಿಸಿ, ಸರಕಾರ ಈ ನಿರ್ಧಾರವನ್ನು ಸ್ವಾಗತಿಸಿ, ಕೃತಜ್ಞತೆ ಸಲ್ಲಿಸಿದ್ದಾರೆ.

ಕಳೆದ ಹಲವಾರು ವರುಷಗಳಿಂದ ಈ ಕಾಯ್ದೆ ಜಾರಿಮಾಡಬೇಕೆಂದು ವಕೀಲಕರ ಸಂಘ ಪದಾಧಿಕಾರಿಗಳು ಹಲವಾರು ಬಾರಿ ಹೋರಾಟ ಮಾಡಿದ್ದು ಅಲ್ಲದೇ ಇಂದು ಸೋಮವಾರ ರಾಜ್ಯದ ಕಲಬುರಗಿ, ವಿಜಯಪುರ ಸೇರಿದಂತೆ ಹಲವಾರು ಜಿಲ್ಲಾ ಕೇಂದ್ರಗಳಲ್ಲಿ ನ್ಯಾಯಾಲಯದ ಕಾರ್ಯಕಲಾಪಗಳಿಗೆ ದೂರ ಉಳಿದು ಹೋರಾಟ ನq
ೆಸಿದ ಫಲವಾಗಿ ರಾಜ್ಯ ವಿಧಾನಸಭೆಯಲ್ಲಿ ಇಂದು ಪಾಸ್ ಮಾಡಲಾದ ಮಸೂದೆಯಿಂದ ನಾಳೆಯಿಂದ ಎಂದಿನAತೆ ವಕೀಲರು ನ್ಯಾಯಾಲಯದ ಕಾರ್ಯಕಲಾಪಗಳಿಗೆ ಹಾಜರಾಗಲಿದ್ದಾರೆ.

ಕಲಬುರಗಿಯಲ್ಲಿ ಕಳೆದ ಶುಕ್ರವಾರ ವಕೀಲರೊಬ್ಬರ ಬರ್ಬರ ಹತ್ಯೆಯಾಗಿದ್ದು, ಅಲ್ಲದೇ ಬೀದರ ಜಿಲ್ಲೆಯಲ್ಲಿ ಮಹಿಳಾ ವಕೀಲೊಬ್ಬರ ಮೇಲೆ ಹಲ್ಲೆ ಸೇರಿದಂತೆ ಚಿಕ್ಕಮಂಗಳೂರಿನಲ್ಲಿಮ ವಕೀಲರ ಮೇಲೆ ಪೋಲಿಸರಿಂದ ದೌರ್ಜನ್ಯದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಜಿಲ್ಲಾ ಹಾಗೂ ಹೈಕೋರ್ಟ ವಕೀಲರಿಂದ ತೀವ್ರ ಪ್ರತಿಭಟನೆಯಿಂದ ಸರಕಾರಕ್ಕೆ ತೀವ್ರ ಮುಜುಗರ ಉಂಟಾಗಿತ್ತು.
ಇAದು ರಾಜ್ಯ ವಿಧಾನಸಭೆಯಲ್ಲಿ ಕೈಗೊಂಡ ವಕೀಲರ ಹಿತಸಂರಕ್ಷಣಾ ನಿರ್ಣಯ ಮಸೂದೆ ಪಾಸ್ ಮಾಡಿದ್ದಕ್ಕಾಗಿ ಎಲ್ಲ ನ್ಯಾಯವಾದಿಗಳು ಸರಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

LEAVE A REPLY

Please enter your comment!
Please enter your name here