ಕೇಂದ್ರ ಬಸ್ ನಿಲ್ದಾಣ:ಬಸ್‌ಗಳಿಗಿಂತ ಆಟೋಗಳೇ ಜಾಸ್ತಿ

0
522

ಕಲಬುರಗಿ, ಡಿ. 09:ಬಸ್‌ಗಳು ಒಂದೇಡೆ ನಿಲ್ಲುವ ಸ್ಥಾನಕ್ಕೆ ಬಸ್ ನಿಲ್ದಾ ಣವೆನ್ನುತ್ತಾರೆ, ಅಂದರೆೆ ಬಸ್ ನಿಲ್ದಾಣ ದಲ್ಲಿ ಬಸ್‌ಗಳೆ ಇರಬೇಕು, ಆದರೆ ಕಲ ಬುರಗಿ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್‌ಗಳಿಗಿಂತ ಆಟೋಗಳೇ ರಾಜಾ ರೋಷವಾಗಿ ಓಡಾಡುತ್ತ, ಪ್ರಯಾಣಿಕ ರಿಗೆ ತೊಂದರೆಯುAಟುಮಾಡುವುದನ್ನು ನೋಡಿದರೆ ಸಂಚಾರಿ ಪೋಲಿಸರು ಮಾ ಡುವುದಾದರೂ ಏನು? ಎಂಬ ಪ್ರಶ್ನೆ ಸಾರ್ವಜನಿಕರದ್ದಾಗಿದೆ.

ಸಂಜೆ ಹೊತ್ತಿನಲ್ಲಿ ಬಸ್ ನಿಲ್ದಾಣ ದಲ್ಲಿ ಕಂಡು ಬಂದ ದೃಶ್ಯಗಳು ನೋಡಿ ದರೆ ಎಂತವರು ಕೂಡ ದಂಗಾಗುತ್ತಾರೆ.
ಬೇರೆ ಬೇರೆ ಊರುಗಳಿಂದ ನಿಲ್ದಾ ಣಕ್ಕೆ ಬರುವ ಬಸ್‌ಗಳ ಸಂಖ್ಯೆಗಿAತ ಡಬ್ಬಲ್ ಸಂಖ್ಯೆಯಲ್ಲಿ ಆಟೋಗಳು, ಬಸ್ ಬಂದ ಕೂಡಲೆ ಅವುಗಳ ಹಿಂದೆ ಸಕ್ಕರೆಗೆ ಕಂಟಿರುವೆ ಮುತ್ತಿಕೊಂಡAತೆ ಬಸ್‌ಗಳಿಗೆ ಆಟೋಗಳು ಅಂಟಿಕೊಳ್ಳುತ್ತಿ ರುವುದು ಸರ್ವೇ ಸಮಾನ್ಯವಾಗಿದೆ.

ಕೇಂದ್ರ ಬಸ್ ನಿಲ್ದಾಣದಲ್ಲಿ ಸಂಚಾ ರ ವ್ಯವಸ್ಥೆ ಸುಗಮ ನಿರ್ವಹಣೆಗಾಗಿ ಬಸ್ ನಿಲ್ದಾಣದ ಎದುರುಗಡೆ ಆಟೋ ಗಳಿಗೆ ತಡೆ ನೀಡಿ ಬಸ್ ನಿಲ್ದಾಣದ ಹಿಂದುಗಡೆ ಪಿಕ್‌ಪ್ ಮತ್ತು ಡ್ರಾಪ್ ವ್ಯವಸ್ಥೆ ಪೋಲಿಸ್ ಇಲಾಖೆಯ ಅಧಿ ಕಾರಿಗಳು ಮಾಡಿದ್ದು ನೀರಿನಲ್ಲಿ ಹೋಮ ಮಾಡಿದಂತಾಗಿದೆ.
ಬಸ್ ನಿಲ್ದಾಣಕ್ಕೆ ಸಂಚಾರ ಸುಗಮ ಕ್ಕೆ ಸಂಚಾರಿ ಪೋಲಿಸರು ಇದ್ದರೂ ಕೂಡ ಇಲ್ಲದಂತಾಗಿದೆ. ಏಕೆಂದರೆ ಅವರುಗಳು ಹೋಟೆಲ್ ಮುಂದುಗಡೆ ಯೇ ಅವರ ಡ್ಯೂಟಿ ಆಗಿದೆ.
ಈಗಲಾದರೂ ಹಿರಿಯ ಅಧಿಕಾರಿ ಗಳು ಎಚ್ಚೆತ್ತು, ನಿಲ್ದಾಣ ಒಳಗಡೆ ಆಟೋ ಅಷ್ಟೇ ಅಲ್ಲ, ಯಾವುದೇ ಖಾಸಗಿ ವಾಹನಗಳು ಓಡಾಡದಂತೆ ಕ್ರಮ ವಹಿಸುವರೇ ಕಾದು ನೋಡ ಬೇಕಾಗಿದೆ.

LEAVE A REPLY

Please enter your comment!
Please enter your name here