ಕಲಬುರ್ಗಿ ಪತ್ರಿಕಾ ಭವನದ ಬಳಿ ಮಣಿಕಂಠ್ ರಾಠೊಡ್ ಕಾರಿಗೆ ಕಾಂಗ್ರೆಸ್ ಕಾರ್ಯಕರ್ತರಿಂದ ಮುತ್ತಿಗೆ

0
918

ಕಲಬುರ್ಗಿ, ಡಿ.09- ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಮತ್ತು ರಾಜ್ಯದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿರಾಜ್, ಐಟಿಬಿಟಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಕುರಿತು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಆರೋಪಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಕುಪಿತರಾಗಿ ಬಿಜೆಪಿ ಮುಖಂಡ ಮಣಿಕಂಠ್ ರಾಠೋಡ್ ಅವರ ಕಾರಿಗೆ ಶನಿವಾರ ಬೆಳಿಗ್ಗೆ 11-20ರ ಸುಮಾರಿಗೆ ಮುತ್ತಿಗೆ ಹಾಕಿದ ಘಟನೆ ನಗರದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಆವರಣದಲ್ಲಿ ವರದಿಯಾಗಿದೆ.

ಕಳೆದ ಗುರುವಾರದಂದು ಸುದ್ದಿಗೋಷ್ಠಿಗೆ ಮುನ್ನ ಪೋಲಿಸರು ಬಂಧಿಸಿಕೊAಡು ಹೋಗಿದ್ದು, ಶನಿವಾರ ಮತ್ತೆ ಸುದ್ದಿಗೋಷ್ಠಿ ಮಾಡಲು ಮಣಿಕಂಠ್ ರಾಠೋಡ್ ಅವರು ಪತ್ರಿಕಾ ಭವನಕ್ಕೆ ಕಾರಿನಲ್ಲಿ ಬರುತ್ತಿದ್ದರು. ಮಣಿಕಂಠ್ ರಾಠೋಡ್ ಅವರ ಸುದ್ದಿಗೋಷ್ಠಿ ಸಂಗತಿಯನ್ನು ತಿಳಿದುಕೊಂಡ ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಆವರಣದಲ್ಲಿ ಸೇರಿ ಅವರ ಆಗಮನದ ಸಂದರ್ಭದಲ್ಲಿ ಅವರ ಕಾರನ್ನು ತಡೆದು ಮುತ್ತಿಗೆ ಹಾಕಿ, ಅವರ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಹಾಕಿದರು.
ಪರಿಸ್ಥಿತಿಯನ್ನು ಮೊದಲೇ ಅರಿತಿದ್ದ ಪೋಲಿಸರು ಪೋಲಿಸ್ ಬಸ್‌ನೊಂದಿಗೆ ಮೊದಲೇ ವ್ಯಾಪಕ ಬಂದೋಬಸ್ತ್ ಮಾಡಿದರು. ಕುಪಿತ ಕಾಂಗ್ರೆಸ್ ಕಾರ್ಯಕರ್ತರು ಮಣಿಕಂಠ್ ರಾಠೋಡ್ ಅವರ ಕಾರಿನತ್ತ ನುಗ್ಗುವುದನ್ನು ತಡೆದರು ಹಾಗೂ ಮಣಿಕಂಠ್ ರಾಠೋಡ್ ಅವರು ಸುಗಮವಾಗಿ ಪತ್ರಿಕಾ ಭವನಕ್ಕೆ ಹೋಗಲು ಸೂಕ್ತ ಕ್ರಮವನ್ನು ಕೈಗೊಂಡರು.

ಕಾರಿನಲ್ಲಿದ್ದ ಮಣಿಕಂಠ್ ರಾಠೋಡ್ ಅವರು ಯುವ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶಕ್ಕೆ ಹಾಗೂ ಪ್ರತಿಭಟನೆಗೆ ಯಾವುದೇ ರೀತಿಯಲ್ಲಿ ಜಗ್ಗಲಿಲ್ಲ. ಅವರ ಪ್ರತಿಭಟನೆ ತಮಗೇನೂ ಸಂಬoಧವಿಲ್ಲ ಎನ್ನುವ ರೀತಿಯಲ್ಲಿ ಕಾರಿನಲ್ಲಿ ಕುಳಿತುಕೊಂಡು ಹೊರಟುಹೋದರು.
ಸುದ್ದಿಗೋಷ್ಠಿ ಮುಗಿದ ನಂತರವೂ ಸಹ ಕೆಲ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಆವರಣದಲ್ಲಿ ಅಲ್ಲಲ್ಲಿ ಗುಂಪು, ಗುಂಪಾಗಿ ಸೇರಿದ್ದರು. ಆದಾಗ್ಯೂ, ಯಾವುದೇ ರೀತಿಯಲ್ಲಿ ಅಹಿತಕರ ಘಟನೆ ಸಂಭವಿಸದoತೆ ಪೋಲಿಸರು ವ್ಯಾಪಕ ಬಂದೋಬಸ್ತ್ ಮಾಡಿದ್ದರು.

LEAVE A REPLY

Please enter your comment!
Please enter your name here