ಕಲಬುರಗಿ, ಡಿ. 07:ರಾಜಾ ಸೇಠ್ ಎಂದೆ ಕರೆಯಲ್ಪಡುತ್ತಿದ್ದ ಚಪ್ಪಲ ಬಜಾರ ಪಂಜಾಬ್ ಬೂಟ್ ಹೌಸ್‌ನ ಮಾಲೀಕರಾದ ಸುರೀಂದ್ರವೀರಸಿoಗ್ ಛಾಬ್ರಾ ಇಂದು ಬೆಳಗಿನ ಜಾವ ನಿಧನರಾಗಿದ್ದಾರೆ.
48 ವರ್ಷ ವಯಸ್ಸಿನ ಅವರು ರಾತ್ರಿ ಸುಮಾರು 2-3 ಗಂಟೆ ಸುಮಾರಿಗೆ ಹೃದಯಾಘಾತದಿಂದ ನಿಧನರಾಗಿದ್ದಾರೆಂದು ತಿಳಿದುಬಂದಿದೆ.
ಲೋಬಿಪಿಯಿoದ ಬಳಲಿದ್ದ ಅವರನ್ನು ನಗರದ ಆಸ್ರತೆಗೆ ಕರೆದುಕೊಂಡು ಹೋಗಲಾಗಿದ್ದು, ಆದರೂ ಅವರು ಬದಕುಳಿಯಲಿಲ್ಲ ಎಂದು ಅವರ ಕುಟುಂಬದ ಮೂಲಗಳು ತಿಳಿಸಿವೆ. ದಿವಂಗತರಿಗೆ ಓರ್ವ ಪುತ್ರ ಮತ್ತು ಓರ್ವ ಪುತ್ರಿ, ಮಡದಿ ಸೇರಿದಂತೆ ಓರ್ವ ಅಣ್ಣ ಮತ್ತು ತಂದೆ ತಾಯಿ ಹಾಗೂ ಅಪಾರ ಬಂದು-ಬಳಗವನ್ನು ಬಿಟ್ಟು ಅಗಲಿದ್ದಾರೆ. ದಿವಂಗರ ಅಂತ್ಯಕ್ರಿಯೆ ಇಂದೋ ಅಥವಾ ನಾಳೆ ನಡೆಸಬೇಕೆಂಬ ಬಗ್ಗೆ ಇನ್ನು ನಿರ್ಧರವಾಗಿಲ್ಲ.