ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವಿನ ಕವೀಸ್‌ಗೆ ವಿಶ್ವಕಪ್ ಸೆಮಿಫೈನಲ್‌ಗೆ ಪ್ರವೇಶ ಬಹುತೇಕ ಖಚಿತ

0
318

ಬೆಂಗಳೂರು, ನ.9ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಗುರುವಾರ ನಡೆದ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಶ್ರೀಲಂಕಾವನ್ನು 5 ವಿಕೆಟ್‌ಗಳಿಂದ ಸೋಲಿಸಿದ ನ್ಯೂಜಿಲೆಂಡ್ ಐಸಿಸಿ ಪುರುಷರ ವಿಶ್ವಕಪ್ ಕ್ರಿಕೆಟ್‌ನ ಸೆಮಿಫೈನಲ್‌ಗೆ ಬಹುತೇಕ ಖಚಿತವಾಗಿದೆ.
ಅಫ್ಘಾನಿಸ್ತಾನವು ವಾಸ್ತವಿಕವಾಗಿ ಸ್ಪರ್ಧೆಯಿಂದ ಹೊರಗುಳಿದಿದೆ ಮತ್ತು ಇಂಗ್ಲೆAಡ್ ವಿರುದ್ಧದ ನವೆಂಬರ್ 11ರಂದು ನಡೆಯುವ ಪಂದ್ಯದಲ್ಲಿ ಪಾಕಿಸ್ತಾನವು ಗೆಲುವಿನೊಂದಿಗೆ ರನ್ ಸರಾಸರಿಯು ಹೊಂದಿಸಬೇಕಿದೆ.
ಮೊದಲು ಬ್ಯಾಟ್ ಮಾಡಿದ ಶ್ರೀಲಂಕಾ 46.4 ಓವರ್‌ಗಳಲ್ಲಿ ತನ್ನೆಲ್ಲ ವಿಕೆಟ್‌ಗಳನ್ನು ಕಳೆದುಕೊಂಡು ಕಡಿಮೆ 171 ರನ್‌ಗಳನ್ನು ಮಾಡಿತ್ತು. ಇದಕ್ಕೆ ಉತ್ತರವಾಗಿ ಆಡಿದ ನ್ಯೂಜಿಲೆಂಡ್ ತಂಡವು 23.2 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗೆಲುವಿಗೆ ಬೇಕಾದ 172 ರನ್ ಮಾಡಿತು.
ನ್ಯೂಜಿಲೆಂಡ ತಂಡದ ಆರಂಭಿಕ ಆಟಗರಾರಾದ ರಚಿನ್ ರವೀಂದ್ರ (45) ಮತ್ತು ಕಾನ್ವೆ (42) ಅವರು 12.2 ಓವರ್‌ಗಳಲ್ಲಿ 56 ರನ್ ಸೇರಿಸಿದ್ದು, ಕಿವೀಸ್‌ಗೆ ಸುಲಭವಾಗಿ ಗೆಲುವಿಗೆ ಅಡಿಪಾಯವಾಯಿತು.
ಬ್ಯಾಟಿಂಗ್ ಡೆತ್‌ನಲ್ಲಿ 172 ರನ್‌ಗಳನ್ನು ಬೆನ್ನಟ್ಟುವುದು ಎಂದಿಗೂ ಕಷ್ಟಕರವಾದ ಕೆಲಸವಾಗಿರಲಿಲ್ಲ ಮತ್ತು ಟ್ರೆಂಟ್ ಬೌಲ್ಟ್ ಅವರ ಉತ್ತಮ ಬೌಲಿಂಗ್ ಪ್ರದರ್ಶನದೊಂದಿಗೆ ನ್ಯೂಜಿಲೆಂಡ್ ತಂಡ ಈ ಗೆಲುವು ಸಾಧಿಸಿತು.
ಟ್ರೆಂಟ್ ಬೌಲ್ಟ್ ಅವರ ಕರಾರುವಾಕ್ಯ ಬೌಲಿಂಗ್‌ಗೆ ಶ್ರೀಲಂಕಾದ ಆರಂಭಿಕ ಬ್ಯಾಟ್ಸ್ಮನಗಳು ಸೇರಿದಂತೆ ಮೂರು ಜನ ಆಟಗಾರರು ತಂಡದ 32 ರನ್ ಆಗುವಷ್ಟರಲ್ಲಿ ಪೆವಿಲಿಯನ್ ಮರಳುವುದರೊಂದಿಗೆ ಕಡಿಮೆ ಮೊತ್ತದ ಸ್ಕೋರ್‌ಗೆ ಕಾರಣವಾಯಿತು.
ಈ ಪಂದ್ಯದಿAದಾಗಿ ನ್ಯೂಜಿಲಿಂಡ್ ಆಡಿದ 9 ಪಂದ್ಯಗಳಿAದ 10 ಅಂಕಗಳಿಗೆ ತಲುಪಿದ ಕಿವೀಸ್ ಬಹುತೇಕ ವಿಶ್ವಕಪ್‌ನ ಸೇಮಿಫೈನಲ್‌ನ ಪ್ರವೇಶ ಕನಸು ನನಸಾಗಿಸುವಂತೆ ಕಾಣುತ್ತಿದೆ.
11ರಂದು ನಡೆಯಲಿರುವ ಇಂಗ್ಲೇoಡ ವಿರುದ್ಧ ಪಂದ್ಯದಲ್ಲಿ ಲೀಗ್‌ನ ಅಂತಿಮ ಮತ್ತು 9ನೆ ಪಂದ್ಯ ಆಡಲಿರುವ ಪಾಕಿಸ್ತಾನ ತಂಡ ಸೆಮಿಫೈನಲ್ ಪ್ರವೇಶಿಸಬೇಕಾದರೆ ಅತ್ಯಂತ ಹೆಚ್ಚಿನ ರನ್ ಸರಾಸರಿಯಲ್ಲಿ ಗೆಲುವು ದಾಖಲಿಸಿದರೆ ಮಾತ್ರ ಸಾಧ್ಯವಾಗುತ್ತದೆ.
ಅಲ್ಲದೇ ಆಡಿದ 8 ಪಂದ್ಯಗಳಲ್ಲಿ ಈಗಾಗಲೇ 6 ಪಂದ್ಯಗಳನ್ನು ಸೋತಿರುವ ಇಂಗ್ಲೇAಡ ತಂಡ ಮುಂದಿನ ವರ್ಷ ನಡೆಯುವ ಐಸಿಸಿ ಅರ್ಹತೆ ಪಡೆಯಬೇಕಾದರೆ ಇಂಗ್ಲೇAಡ್‌ಗೂ ಈ ಗೆಲುವು ಅನಿವಾರ್ಯವಾಗಿದೆ.
ಈಗಾಗಲೇ ಆಡಿದ 8 ಪಂದ್ಯಗಳಿAದ 16 ಅಂಕಗಳಿಸಿದ ಭಾರತ ಅಗ್ರ ಸ್ಥಾನದಲ್ಲಿದ್ದರೆ, 12 ಅಂಕಗಳಿAದ ದಕ್ಷಿಣ ಆಪ್ರಿಕಾ ಎರಡನೇ ಸ್ಥಾನದಲ್ಲಿ ಮತ್ತು ಆಸ್ಟೆçಲಿಯಾ ಕೂಡ 12 ಅಂಕ ಗಳಿಸಿ ಮೂರನೇ ಸ್ಥಾನದಲ್ಲಿದ್ದು, ನಾಲ್ಕನೇ ಸ್ಥಾನಕ್ಕೆ ಒಂದು ವೇಳೆ ನ್ಯೂಜಿಲೆಂಡ ಅಥವಾ ಪಾಕಿಸ್ಥಾನ ಬಂದರೆ, ಭಾರತ ತಂಡದೊoದಿಗೆ ಸೆಮಿಫೈನಲ್ಲಿ ಸೆಣಸಬೇಕಾಗುತ್ತದೆ.

LEAVE A REPLY

Please enter your comment!
Please enter your name here