ಕಾಂಗ್ರೆಸ್ ಧುರೀಣ ಜಗದೀಶಕುಮಾರ ವಳಕೇರಿ ಇನ್ನಿಲ್ಲ

0
906

ಕಲಬುರಗಿ, ಅ. 14:ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಹಾಗೂ ಮಾಜಿ ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ, ಹಾಲಿ ಪಿಎಲ್‌ಡಿ ಬ್ಯಾಂಕ್ ಉಪಾಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕರಾಗಿದ್ದ ಜಗದೀಶಕುಮಾರ ಬಸವಂತರಾವ ವಳಕೇರಿ ಅವರು ಇಂದು ನಿಧನ ಹೊಂದಿದ್ದಾರೆ.
ದಿವoಗತರಿಗೆ 63 ವರ್ಷ ವಯಸ್ಸಾಗಿತ್ತು, ಅವರು ಕಳೆದ ಒಂದು ತಿಂಗಳಿAದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಸೋಲಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಚಿಕಿತ್ಸೆ ಫಲಿಸದೆ ಇಂದು ರಾತ್ರಿ 8 ಗಂಟೆಗೆ ಅಂತಿಮವಾಗಿ ಕೊನೆಯುಸಿರೆಳೆದರು.
ವಳಕೇರಿ ಕುಟುಂಬದ ಹಿರಿಯ ಚೇತನರಾಗಿದ್ದ ಜಗದೀಶಕುಮಾರ ವಳಕೇರಿ ಅವರ ನಿಧನದಿಂದಾಗಿ ಅವರ ಕುಟುಂಬಕ್ಕೆ ಅಷ್ಟೇ ಅಲ್ಲದೇ ಸಮಾಜಕ್ಕೆ ಅದರಲ್ಲೂ ಅಪಾರ ಪ್ರಮಾಣದ ಗೆಳೆಯರ ಬಳಗಕ್ಕೆ ತುಂಬಲಾರದ ನಷ್ಟವಾಗಿದೆ.
ಕಳೆದ 4 ದಶಕಗಳಿಂದ ರಾಜಕೀಯದಲ್ಲಿದ್ದ ಅವರು 40 ವರ್ಷಗಳ ಅವಧಿಯಲ್ಲಿ ನಾಲ್ಕು ಬಾರಿ ಪಂಚಾಯತ್‌ಗೆ ಸದಸ್ಯರಾಗಿ ಆಯ್ಕೆಯಾಗಿದ್ದ ಅವರು ಒಂದು ಬಾರಿ ಕುಸನೂರ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಒಂದು ಬಾರಿ ಪಿಎಲ್‌ಡಿ ಬ್ಯಾಂಕ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.
ಅಲ್ಲದೇ 1986ರಲ್ಲಿ ಕಲಬುರಗಿ ನಗರಪಾಲಿಕೆ ಚುನಾವಣೆಯಲ್ಲೂ ಸ್ಪರ್ಧಿಸಿದ್ದರು.
ದಿವಂಗತರಿಗೆ ಓರ್ವ ಗಂಡು, ಓರ್ವ ಹೆಣ್ಣು ಮಗಳು, ಪತ್ನಿ, ಇಬ್ಬರು ಸಹೋದರರು, ಅಪಾರ ಬಂಧು-ಬಳಗವನ್ನು ಬಿಟ್ಟು ಅಗಲಿದ್ದಾರೆ.
ದಿವಂಗತರ ಅಂತ್ಯಕ್ರಿಯೆ ನಾಳೆ ರವಿವಾರ ಚಂದ್ರಶೇಖರ ಪಾಟೀಲ್ ಕ್ರೀಡಾಂಗಣದ ಹಿಂದುಗಡೆಯಿರುವ ರಾಜಾಪೂರ ರಸ್ತೆಯ ರುದ್ರಭೂಮಿಯಲ್ಲಿ ನಡೆಯಲಿದ್ದು, ಅವರ ಪಾರ್ಥಿವ ಶರೀರವನ್ನು ದರ್ಶನಕ್ಕಾಗಿ ಅವರ ಸ್ವಗ್ರಹ ಎಂ.ಆರ್.ಎA.ಸಿ. ಎದುರುಗಡೆಯಿರುವ ಸುಂದರ ನಗರದಲ್ಲಿ ಇಡಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಜಗದೀಶಕುಮಾರ ವಳಕೇರಿ ಅವರ ನಿಧನಕ್ಕೆ ರಾಜಕೀಯ ನಾಯಕರು, ಪಾಲಿಕೆ ಮೇಯರ್, ಗ್ರಾಮ ಪಂಚಾಯತ್, ಸದಸ್ಯರು, ಮಹಾನಗರಪಾಲಿಕೆ ಸದಸ್ಯರು, ಅಲ್ಲದೇ ಅಪಾರ ಗೆಳೆಯರು ತಮ್ಮ ಶೋಕವನ್ನು ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here