ಹಿರಿಯ, ಧೀಮಂತ ಪತ್ರಕರ್ತ ಪಿ.ಎಂ. ಮಣ್ಣೂರ ಇನ್ನಿಲ್ಲ ನಾಳೆ ಶನಿವಾರ ಅಂತ್ಯಸoಸ್ಕಾರ

0
937

ಕಲಬುರಗಿ, ಅ. 13:ಹಿರಿಯ ಹಾಗೂ ಧೀಮಂತ ಪತ್ರಕರ್ತರಾಗಿದ್ದ ಪಿ.ಎಂ. ಮಣ್ಣೂರ ಅವರು ಇಂದು ಶುಕ್ರವಾರ ಬೆಳಗ್ಗೆ ವಿಧಿವಶರಾದರೆಂದು ತಿಳಿಸಲು ವಿಷಾಧವೇನಿಸುತ್ತದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಬೆಂಗಳೂರಿನ ಅಪಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಅವರ ಪ್ರಾರ್ಥಿವ ಶರೀರವನ್ನು ಇಂದು ಶುಕ್ರವಾರ ಸಂಜೆ 8 ಗಂಟೆ ಸುಮಾರುಗೆ ಬೆಂಗಳೂರಿನಿAದ ಅಂಬ್ಯುಲೆನ್ಸ್ ಮೂಲಕ ಕಲಬುರಗಿ ನಗರಕ್ಕೆ ತರಲಾಗುತ್ತಿದೆ.

ಕಳೆದ 6 ದಶಕಗಳಿಂದ ಪತ್ರಕರ್ತರಾಗಿ ಸೇವೆ ಸಲ್ಲಿಸಿದ್ದ ಅವರು ಕಲಬುರಗಿ ಹಾಗೂ ವಿಜಯಪುರ ಜಿಲ್ಲಯಿಂದ ಸತ್ಯಕಾಮ ಪ್ರಾದೇಶಿಕ ದಿನಪತ್ರಿಕೆಯ ಸಂಪಾದಕರಾಗಿದ್ದರು. ಪತ್ರಕರ್ತರಷ್ಷೇ ಅಲ್ಲ, ಸಾಹಿತ್ಯ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದ ಮಣ್ಣೂರ ಅವರು 1990ರ ದಶಕದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿ, ಕಸಾಪ ಆವರಣದಲ್ಲಿ ಬಾಪುಗೌಡ ದರ್ಶನಾಪೂರ ರಂಗಮAದಿರದ ಕಟ್ಟಡದ ರೂವಾರಿ ಕೂಡ ಆಗಿದ್ದರು. ಅಲ್ಲದೇ ರಾಜಕೀಯ ಕ್ಷೇತ್ರದಲ್ಲಿಯೂ ಅಪಾರ ಅನುಭವ ಹೊಂದಿದ್ದ ದಿವಂಗತರು ಜನತಾ ದಳದಿಂದ ಕಲಬುರಗಿ ಮಹಾನಗರ ಪಾಲಿಕೆಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೇ ನಿರಂತರವಾಗಿ 2008ರ ವರೆಗೆ ಅಂದರೆ 20 ವರ್ಷಗಳ ಕಾಲ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಅವರು ಕರ್ನಾಟಕ ಸರಕಾರ ಕೊಡ ಮಾಡುವ ರಾಜ್ಯೋತ್ಸವ ಪ್ರಶಸ್ತಿ, ಮಾಧ್ಯಮ ಆಕಾಡೆಮಿ ಪ್ರಶಸ್ತಿ, ಅಲ್ಲದೆ ಹಲವಾರು ಸಂಘ, ಸಂಸ್ಥೆ, ಮಠ, ಮಾನ್ಯಗಳಿಂದಲೂ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

1970ರ ದಶಕದಲ್ಲಿ ವಾರ ಪತ್ರಿಕೆಯನ್ನಾಗಿ ಆರಂಭಿಸಿದ ಸತ್ಯಕಾಮ ಪತ್ರಿಕೆಯನ್ನು ನಂತರ ದಿನಗಳಲ್ಲಿ ದಿನಪತ್ರಿಕೆಯಾಗಿ ನಿರಂತರವಾಗಿ 50 ವರ್ಷಗಳಿಂದಲೂ ನಡೆಸಿಕೊಂಡು ಬಂದ ಕೀರ್ತಿ ಅವರದ್ದಾಗಿತ್ತು. ಈವರ್ಷವಷ್ಟೇ ಸತ್ಯಕಾಮ ಪತ್ರಿಕೆಯ 50ನೇ ವರ್ಷದ ವರ್ಷಾಚರಣೆ ಆಚರಿಸಲಾಗಿತ್ತು. 1997ರಲ್ಲಿ ಮಧುರವಾಣಿ ಎಂಬ ಸಂಜೆ ಪತ್ರಿಕೆಯನ್ನು ಆರಂಭಿಸಿದ್ದ ಮಣ್ಣೂರ ಅವರು ಆಗನ ದಿನಗಳಲ್ಲಿಯೇ ಸ್ವಂತ ವೆಬ್ ಆಫ್‌ಸೆಟ್ ಮುದ್ರಣ ಯಂತ್ರವನ್ನು ಅಳವಡಿಸಿ ಕಲಬುರಗಿಯಲ್ಲಿ ದಿನಪತ್ರಿಕೆಯೊಂದು ಅದರಲ್ಲೂ ಸ್ಥಳೀಯ ಪತ್ರಿಕೆ ಇಂತಹ ಯಂತ್ರ ಸ್ಥಾಪಿಸಿದ್ದವರಲ್ಲಿ ಮೊದಲಿಗರಾಗಿದ್ದರು.

ಅವರ ಆರು ದಶಕಗಳ ಪತ್ರಿಕೋದ್ಯಮದ ಸಾರ್ಥಕ ಸೇವೆಯಲ್ಲಿ ಕಲಬುರಗಿಯಿಂದ ಹಿಡಿದು ಬೆಂಗಳೂರಿನ ವರೆಗೂ ನೂರಾರು ಪತ್ರಕರ್ತರು ಅವರ ಗರಡಿಯಲ್ಲಿ ಬೆಳೆದಿದ್ದು, ಪ್ರಸ್ತುತ ಹಲವಾರು ಜನರು ಪತ್ರಕರ್ತರಾಗಿ ರಾಜ್ಯ, ಜಿಲ್ಲಾ ಮಟ್ಟದಲ್ಲಿ ಕೆಲಸ ನಿರ್ವಹಿಸುತ್ತಿದ್ದರಲ್ಲದೇ ಇನ್ನು ಹಲವು ಜನರು ಸ್ವಂತ ದಿನಪತ್ರಿಕೆ ಆರಂಭಿಸಿದ್ದ ಶ್ರೇಯಸ್ಸು ಮಣ್ಣೂರ ಅವರಿಗೆ ಸಲ್ಲುತ್ತದೆ. 1990ರ ದಶಕದಲ್ಲಿ ಕಲಬುರಗಿ ನಗರದವೇ ಬೆಚ್ಚಿಬಿಳಿಸುವಂತಹ ಕಮಲಾಕರ್ ಲಾಕಪ್ ಡೆತ್ ಸುದ್ದಿಯನ್ನು ಹಂತ ಹಂತವಾಗಿ ಪ್ರಕಟಿಸುವ ಮೂಲಕ ಧೀಮಂತ ಪತ್ರಕರ್ತರೆಂದು ಸಾಬೀತುಪಡಿಸಿದಲ್ಲದೇ ಘಟನೆಗೆ ಕಾರಣಕರ್ತರಾದ ಪೋಲಿಸ್ ಅಧಿಕಾರಿಗಳನ್ನು ಶಿಕ್ಷೆ ಆಗುವಂತೆ ಹರಿತವಾದ ಲೇಖನಕ್ಕೆ ಎಷ್ಟು ಬೆಲೆಯಿದೆ ಎಂಬದು ಸಾಬೀತುಪಡಿಸಿದರು., ಅಲ್ಲದೆ ಚಿಂಚೋಳಿ ತಾಲೂಕಿನ ತಾಂಡಾಗಳಲ್ಲಿ ಹೆಣ್ಣು ಶಿಶುಗಳ ಮಾರಾಟದ ಸುದ್ದಿಯನ್ನು ಪ್ರಕಟಿಸಿ, ಸರಕಾರದ ಕಣ್ಣು ತೆರೆಸಿದರು.

ದಿವಂಗತ ಮಣ್ಣೂರ ಅವರ ಬಗ್ಗೆ ಬರೆಯುತ್ತ ಹೋದರೆ ಇಡೀ ಒಂದು ಗ್ರಂಥವೇ ಸಾಲದು. ದಿವಂಗತರು ಅಪಾರ ಬಂಧುಗಳು ಅದರಲ್ಲೂ ಅಪಾರ ಪತ್ರಕರ್ತರ ಬಳಗವನ್ನು ಬಿಟ್ಟು ಅಗಲಿದ ಅವರ ಆತ್ಮಕ್ಕೆ ಆದೇವರು ಚಿರಶಾಂತಿಯನ್ನು ದಯಪಾಲಿಸಲು ಎಂದು ಪ್ರಾರ್ಥಿಸೋಣ.

ದಿವಂಗತರ ಪ್ರಾರ್ಥಿವ ಶರೀರದ ದರ್ಶನ ಕಲಬುರಗಿ ನಗರದ ಆದರ್ಶ ನಗರದಲ್ಲಿರುವ ಅವರ ನಿವಾಸದಲ್ಲಿ ಇಂದು ಶುಕ್ರವಾರ ಸಂಜೆ ೮ ಗಂಟೆಯಿAದ ನಾಳೆ ಶನಿವಾರ ಬೆಳಿಗ್ಗೆ ೧೧ರ ವರೆಗೆ ಅವಕಾಶ ಕಲ್ಪಿಸಲಾಗಿದೆ.

ಶೋಕ :

ಹಿರಿಯ ಪತ್ರಕರ್ತ ಪಿ.ಎಂ. ಮಣ್ಣೂರ ಅವರ ನಿಧನಕ್ಕೆ ಹಿರಿಯ ಪತ್ರಕರ್ತರಾದ ಶಂಕರ ಕೋಡ್ಲಾ, ಶಿವಾನಂದ ಟಿವಿ, ವಾದಿರಾಜ ವ್ಯಾಸಮುದ್ರ, ಶ್ರೀನಿವಾಸ ಸಿಣ್ಣೂರಕರ್, ಕಾಂತಾಚಾರ್ಯ ಮಣ್ಣೂರ, ಶಿವಲಿಂಗಪ್ಪ ದೊಡ್ಡಮನಿ, ಶಿವರಾಯ ದೊಡ್ಮನಿ, ಕರ್ನಾಟಕ ಕಾರ್ಯನಿತರತ ಪತ್ರಕರ್ತರ ಸಂಘದ ರಾಜ್ಯ ಉಪಾಧ್ಯಕ್ಷ ಭವಾನಿಸಿಂಗ್ ಠಾಕೂರ, ಹಣಮಂತರಾವ ಭೈರಾಮಡಗಿ, ಮಹಿಪಾಲರೆಡ್ಡಿ ಮುನಣೂರ, ಪ್ರಭಾಕರ ಜೋಷಿ, ರಾಜಶೇಖರ ನಾಯ್ಡು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಸಂಪಾದಕ ಸಂಘದ ಅಧ್ಯಕ್ಷ ಶರಣು ಜಿಡಗಾ, ಪತ್ರಕರ್ತರಾದ ವಿವಿ ದೇಸಾಯಿ, ಸಿದ್ದಣ್ಣ ಮಾಲಗಾರ, ಬಿ.ವಿ. ಚಕ್ರವರ್ತಿ, ಶಾಮಕುಮಾರ ಶಿಂಧೆ, ಶೇಷಗಿರಿ, ಮಲ್ಲಿಕಾರ್ಜುನ ಭ್ರಂಗಿಮಠ, ಅಪ್ಪಾರಾವ ಬಿರಾದಾರ, ರಾಜು ಉದನೂರ, ಶಿವರಂಜನ್ ಸತ್ಯಂಪೇಟೆ, ರಾಜು ದೇಶಮುಖ, ಮಹಾದೇವಪ್ಪ ಗೋಳಾ ಸೇರಿದಂತೆ ಇನ್ನು ಹಲವಾರು ಪತ್ರಕರ್ತರ, ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here