ತುಳಜಾಪುರಕ್ಕೆ ಶ್ರೀ ಮಾತಾ ಅಂಭಾಭವಾನಿ ಜಾತ್ರಾ ವಿಶೇಷ ಬಸಗಳ ಸೌಲಭ್ಯ

0
54

ಕಲಬುರಗಿ: ಅ.11:ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಕಲಬುರಗಿ ವಿಭಾಗ-1 ರ ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಕೂಡ ತುಳಜಾಪುರದ ಶ್ರೀ ಮಾತಾ ಅಂಭಾಭವಾನಿ ಜಾತ್ರಾ ಪ್ರಯುಕ್ತ ದಿನಾಂಕ: 12-10-2023 ರಿಂದ 31-10-2023 ರವರಗೆ ಜರುಗಲಿರುವ ಜಾತ್ರಾಗೆ ವಿಶೇಷ (ಹೆಚ್ಚಿನ) ಬಸ್‌ಗಳ ಅನುಕೂಲಕ್ಕಾಗಿ ವಿಭಾಗದ ವ್ಯಾಪ್ತಿಗೆ ಬರುವ ಕಲಬುರಗಿ ಘಟಕ-1 ಮತ್ತು 4 ಚಿಂಚೋಳಿ, ಚಿತ್ತಾಪೂರ, ಕಾಳಗಿ ಮತ್ತು ಸೇಡಂ ಘಟಕ/ಬಸ್ ನಿಲ್ದಾಣದಿಂದ ಮತ್ತು ಇನ್ನಿತರ ಸ್ಥಳಗಳಿಂದ ತುಳಜಾಪುರಕ್ಕೆ ವಿಶೇಷ ಬಸ್ಮ್ಸಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕಲಬುರಗಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.
ವಿಶೇಷ ವಾಹನ ಸೌಲಭ್ಯಕ್ಕಾಗಿ ಸಂಪರ್ಕಿಸಬೇಕಾದ ಘಟಕ ವ್ಯವಸ್ಥಾಪಕರ ದೂರವಾಣಿ ಸಂಖ್ಯೆ ವಿವರ ಈ ಕೆಳಗಿನಂತಿದೆ. ಕಲಬುರಗಿ ಘಟಕ-1 ಘಟಕ ವ್ಯವಸ್ಥಾಪಕರ ದೂರವಾಣಿ ಸಂಖ್ಯೆ. 7760992113. ಕಲಬುರಗಿ ಘಟಕ-4, ದೂರವಾಣಿ ಸಂಖ್ಯೆ 7022012103, ಚಿಂಚೋಳಿ ದೂರವಾಣಿ ಸಂಖ್ಯೆ: 7760992117, ಚಿತ್ತಾಪೂರ ದೂರವಾಣಿ ಸಂಖ್ಯೆ: 7760992119, ಕಾಳಗಿ ದೂರವಾಣಿ ಸಂಖ್ಯೆ 7760992120, ಸೇಡಂ ದೂರವಾಣಿ ಸಂಖ್ಯೆ 7760992466 ಅದರಂತೆ ಮೇಲ್ಕಾಣಿಸಿ ಘಟಕಗಳ ವ್ಯಾಪ್ತಿಗೆ ಬರುವ ಬಸ್‌ನಿಲ್ದಾಣ/ಗ್ರಾಮಗಳಿಂದ 40 ರಿಂದ 45 ಪ್ರಯಾಣಿಕರಿದ್ದಲ್ಲಿ ನೇರವಾಗಿ ಬಸ್ ನಿಲ್ದಾಣ/ಗ್ರಾಮಗಳಿಂದಲೇ ಶ್ರೀ ಮಾತಾ ಅಂಭಾಭವಾನಿ, ತುಳಜಾಪುರಕ್ಕೆ ಸಾರಿಗೆ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಸಾರಿಗೆಗಳ ಸದುಪಯೋಗವನ್ನು ಪಡೆದುಕೊಳ್ಳಲು ವಿಭಾಗೀಯ ನಿಯಂತ್ರಣಾಧಿಕಾರಿ ಕಲಬುರಗಿ ವಿಭಾಗ-1 ಕಲಬುರಗಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Total Page Visits: 145 - Today Page Visits: 1

LEAVE A REPLY

Please enter your comment!
Please enter your name here