ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ ಆರೋಪಿಯನ್ನು 12 ಗಂಟೆಗಳಲ್ಲಿ ಬಂಧಿಸಿದ ಬ್ರಹ್ಮಪೂರ ಪೋಲಿಸರು

0
1311

ಕಲಬುರಗಿ, ಅ. 05:ನಗರದಲ್ಲಿ ವ್ಯಕ್ತಿಯೋರ್ವನನ್ನು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಆರೋಪಿಯನ್ನು 12 ಗಂಟೆಯಲ್ಲಿ ಪೋಲಿಸರು ಬಂಧಿಸಿದ್ದಾರೆ.
ಮಕ್ತoಪೂರದ ಬಡಾವಣೆಯ ಸುರೇಶ ತಂದೆ ಬಸವರಾಜ ಹಂಚೆ ಎಂಬುವನನ್ನು ಗುರುವಾರ ಸಂಜೆ 7ರ ಸುಮಾರಿಗೆ ಕೊಲೆ ಮಾಡಿದ ಆರೋಪಿ ಅವಿನಾಶ ತಂದೆ ಶರಣಯ್ಯ ಹಿರೇಮಠ (20) ಎಂಬುವನನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ನಿನ್ನೆ ಆರೋಪಿ ಅವಿನಾಶ ಎಂಬುವನು ಸುರೇಶ ತಂದೆ ಬಸವರಾಜ ಹಂಚೆ ಎಂಬುವರನ್ನು ಕೊಲೆ ಮಾಡಿ ಅವರದೇ ಬೈಕಿನಲ್ಲಿ ತಲೆ ತಪ್ಪಿಸಿಕೊಂಡಿದ್ದ, ಇತನಿಗಾಗಿ ತೀವ್ರ ಶೋಧ ನಡೆಸಿದ ಪೋಲಿಸರು ಇಂದು ಗುರುವಾರ ಕಲಬುರಗಿ ನಗರದ ಹುಮನಾಬಾದ ಸಮೀಪದ ರಿಂಗ್ ರಸ್ತೆಯಲ್ಲಿ ಪತ್ತೆ ಮಾಡಿ ವಶಕ್ಕೆ ಪಡೆದಿದ್ದಾರೆ.
ಆರೋಪಿಯ ಪತ್ತೇಗಾಗಿ ನಗರ ಪೋಲಿಸ್ ಆಯುಕ್ತ ಚೇತನ್ ಆರ್, ಕಾನೂನು ಮತ್ತು ಸುವವ್ಯಸ್ಥೆಯ ಡಿಸಿಪಿ ಕನಿಕಾ ಸಿಕ್ರಿವಾಲ್, ಅಪರಾಧ ಮತ್ತು ಸಂಚಾರ ವಿಭಾಗದ ಉಪ ಆಯುಕ್ತರಾದ ಚಂದ್ರಪ್ಪ, ಕಲಬುರಗಿ ದಕ್ಷಿಣ ವಿಭಾಗದ ಎಸಿಪಿ ಭೂತೇಗೌಡ ವಿ. ಎಸ್. ಮತ್ತು ಭೂತೇಗೌಡ ವಿ.ಎಸ್., ಬ್ರಹ್ಮಪೂರ ಠಾಣೆಯ ಪಿಐ ಸೋಮಲಿಂಗ ಕಿರದಳ್ಳಿ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು.
ಈ ಕಾರ್ಯಾಚಾರಣೆಯಲ್ಲಿ ಬ್ರಹ್ಮಪೂರ ಠಾಣೆಯ ಪಿಐ ಸೋಮಲಿಂಗ ಕಿರದಳ್ಳಿ, ಬ್ರಹ್ಮಪೂರ ಠಾಣೆಯ ಸಿಬ್ಬಂದಿಗಳಾದ ಶಿವಪ್ರಕಾಶ, ರಾಮು ಪವಾರ ಶಿವಶರಣಪ್ಪ, ನವೀನಕುಮಾರ ಅವರುಗಳು ಕರ್ತವ್ಯ ನಿರ್ವಹಿಸಿದ್ದು, ನಗರ ಪೋಲಿಸ ಆಯುಕ್ತರು ಇವರ ಶೀಘ್ರ ಕಾರ್ಯಾ ಚರಣೆ ಮಾಡಿ ಆರೋಪಿಯನ್ನು ಬಂಧಿಸಿದ್ದಕ್ಕಾಗಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

Total Page Visits: 1317 - Today Page Visits: 1

LEAVE A REPLY

Please enter your comment!
Please enter your name here