ಕಲಬುರಗಿ, ಅ. 04:ನಗರದಲ್ಲಿ ವ್ಯಕ್ತಿಯೋರ್ವನನ್ನು ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಭೀಕರವಾಗಿ ಹತ್ಯೆ ಮಾಡಿದ ಘಟನೆ ಬುಧವಾರ ಸಂಜೆ 7 ಗಂಟೆಯ ಸುಮಾರಿಗೆ ಬ್ರಹ್ಮಪೂರ ಠಾಣಾ ವ್ಯಾಪ್ತಿಯ ಮಕ್ತಂಪೂರ ಬಡಾವಣೆ ಬಾಲಾಜಿ ಮಂದಿರ ಹತ್ತಿರ ನಡೆದಿದೆ.
ಕೊಲೆಗೆ ನಿಖರವಾಗಿ ಇನ್ನು ಕಾರಣ ತಿಳಿದುಬಂದಿಲ್ಲ.
54 ವರ್ಷ ವಯಸ್ಸಿನ ಮಕ್ತಂಪೂರದ ಬಡಾವಣೆಯ ಸುರೇಶ ತಂದೆ ಬಸವರಾಜ ಹಂಚೆ ಎಂದು ಗುರುತಿಸಲಾಗಿದೆ.
ಮೃತ ವ್ಯಕ್ತಿ ನಗರದ ಕಪಡಾ ಬಜಾರದಲ್ಲಿ ಬಿ.ಎಸ್. ಟೇಲರ್ ಎಂಬ ಅಂಗಡಿ ನಡೆಸುತ್ತಿದ್ದ, ಅಲ್ಲದೇ ಮಕ್ತಂಪೂರ ಬಡಾವಣೆಯ ಗದ್ಗುಗೆ ಮಠದ ಎದುರುಗಡೆ ಸ್ವಂತ ಮನೆಯಲ್ಲಿ ಕಿರಣಾ ಅಂಗಡಿ ಹೊಂದಿದ್ದನೆAದು ತಿಳಿದುಬಂದಿದೆ.
ಸ್ಥಳಕ್ಕೆ ಡಿಸಿಪಿ ಕನಿಕಾ ಸಿಕ್ರಿವಾಲ್, ಬ್ರಹ್ಮಪೂರ ಠಾಣೆಯ ಇನ್‌ಚಾರ್ಜ ಪಿಐ ಸೋಮಲಿಂಗ ಕರದಳ್ಳಿ, ಅವರುಗಳು ಸಿಬ್ಬಂದಿ ಯೊಂದಿಗೆ ಸ್ಥಳಕ್ಕೆ ಭೇಟಿ ಪರಿಶೀಲಿಸಿದರು.
ತೀವ್ರ ಗಾಯಗೊಂಡ ವ್ಯಕ್ತಿ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದು, ಮೃತ ವ್ಯಕ್ತಿಯ ದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ಪೋಸ್ಟಮಾರ್ಟಂಗಾಗಿ ಕಳುಹಿಸಲಾಗಿದೆ.