ಲಾಡ ಚಿಂಚೋಳಿ ಗ್ರಾಮದಲ್ಲಿಅಕ್ರಮ ಮದ್ಯ ಮಾರಾಟ ಇಬ್ಬರು ಆರೋಪಿಗಳು ಸೆರೆ

0
643

ಕಲಬುರಗಿ, ಅ. 03: ಜಿಲ್ಲೆಯ ಆಳಂದ ತಾಲೂಕಿನ ಲಾಡ ಚಿಂಚೋಳಿ ಗ್ರಾಮದಲ್ಲಿ ಇಂದು ಹಠಾತ್ ದಾಳಿ ನಡೆಸಿದ ಪೋಲಿಸರು ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿ, ಅವರಿಂದ ಮಾರಾಟ ಮಾಡುತ್ತಿದ್ದ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಘಟನೆ ಇಂದು ಮಂಗಳವಾರ ಮಧ್ಯಾಹ್ನ ನಡೆದಿದೆ.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಡ್ಡೂರು ಶ್ರೀನಿವಾಸಲು ಆದೇಶದ ಮೇರೆಗೆ ಆಳಂದ ತಾಲೂಕಿನ ನರೋಣಾ ಪೋಲಿಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಗಂಗಮ್ಮ ನೇತೃತ್ವದ ತಂಡ ಗ್ರಾಮಕ್ಕೆ ಭೇಟಿ ನೀಡಿ, ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಕಿರಾಣಿ ಅಂಗಡಿಗಳ ಮೇಲೆ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಮಾಲು ಸಮೇತ ವಶಕ್ಕೆ ಪಡೆದು ಎಫ್‌ಐಆರ್ ದಾಖಲಿಸಿದ್ದಾರೆ.
ಲಾಡಚಿಂಚೋಳಿ ಗ್ರಾಮದಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಈಶ್ವರ ತಂದೆ ಅಮೃತ ಬಿರಾದಾರ, ಈರಣ್ಣಾ ತಂದೆ ಶಾಂತಪ್ಪ ಬಿರೆದಾರ ಇವರುಗಳನ್ನು ವಶಕ್ಕೆ ಪಡೆದು ಇವರ ವಿರುದ್ಧ ಕಲಂ 32, 34 ಕೆಇ ಕಾಯ್ದೆ ಅಡಿ ಪ್ರಕರಣವನ್ನು ನರೋಣ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆ.
ಲಾಡಚಿಂಚೋಳಿ ಗ್ರಾಮದಲ್ಲಿ ಸುಮಾರು ದಿನಗಳಿಂದ ಈ ಅಕ್ರಮ ಮದ್ಯ ಮಾರಾಟ ಗ್ರಾಮದ ಪ್ರತಿ ಕಿರಾಣಿ ಅಂಗಡಿಗಳಲ್ಲಿ ಹಾಗೂ ಗ್ರಾಮಕ್ಕೆ ಹೋಗುವ ಆಳಂದ ಮುಖ್ಯರಸ್ತೆಯ ಅಂದರೆ ಪಾಟಿಯಲ್ಲಿ ನಿರಂತರವಾಗಿ ನಡೆಯುತ್ತಿರುವ ಬಗ್ಗೆ ಕಲೆ ಹಾಕಿದ ನರೋಣ ಪಿಎಸ್‌ಐ ಗಂಗಮ್ಮ ಅವರು ಇಂದು ಹಠಾತ್ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಇನ್ನು ಮುಂದೆ ಗ್ರಾಮದಲ್ಲಿ ಯಾರೂ ಕೂಡ ಮದ್ಯ ಮಾರಾಟ ಮಾಡಿದರೆ ಅಂಥವರ ವಿರುದ್ಧ ಕಾನೂನು ಕ್ರಮ ಕೈಗೊಂಡು ಅವರನ್ನು ಸದೆ ಬಡೆಯಲು ಉತ್ಸಾಹಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು ಸೂಚನೆ ನೀಡಿದದ್ದು ಗ್ರಾಮದ ಮಹಿಳೆಯರಲ್ಲಿ ಸಂತಸ ತಂದಿದೆ.
ಹಳ್ಳಿಗಳಲ್ಲಿ ಬೆಳಿಗ್ಗೆಯಿಂದಲೇ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವ ಕೃಷಿ ಕಾರ್ಮಿಕರು, ಈ ಅಕ್ರಮವಾಗಿ ಮದ್ಯ ಮಾರಾಟದಿಂದಾಗಿ ದುಶ್ಚಟಗಳಿಗೆ ಬಲಿಯಾಗಿ, ದಿನನಿತ್ಯ ಗಳಿಸುವ 200-300 ರೂ.ಗಳಲ್ಲಿ 100-200 ರೂ. ಮದ್ಯ ಸೇವನೆಗೆ ಮುಡುಪಾಗಿಟ್ಟು, ಅವರ ಹೆಂಡತಿ, ಮಕ್ಕಳಿಗೆ ಉಪವಾಸ ಬೀಳುವ ಕೆಲಸ ನಡೆಯುತ್ತಿದ್ದು, ಇದು ರಾಜಕಾರಣಿಗಳ ಗಮನಕ್ಕೆ ತಂದರೂ ಏನು ಉಪಯೋಗವಿಲ್ಲ, ಅವರು ಮಾಡುವದು ಎಲ್ಲ ಓಟಿಗಾಗಿ ಎಂದು ಅರಿತ ಮಹಿಳೆಯರು ಯಾರ ಮೋರೆ ಹೋಗಬೇಕು?
ಇದಕ್ಕೆಲ್ಲಮ ಪೋಲಿಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡು ಈ ಒಂದೇ ಗ್ರಾಮ ಅಲ್ಲ, ತಾಲೂಕಿನ ಎಲ್ಲ ಗ್ರಾಮಗಳಲ್ಲಿಯೂ ಕೂಡ ಮದ್ಯ ಮರಾಟಾದ ಪರಿಸ್ಥಿತಿ ಇದೆ. ಇದೆಲ್ಲವನ್ನು ಹತೋಟಿಗೆ ತರಬೇಕೆಂದು ಪ್ರತಿ ಗ್ರಾಮದ ಮಹಿಳೆಯರು ಪೋಲಿಸ್ ಇಲಾಖೆಯ ವರಷ್ಠರಿಗೆ ಮನವಿ ಮಾಡಿಕೊಂಡಿದ್ದಾರೆ.

LEAVE A REPLY

Please enter your comment!
Please enter your name here