ಕಾರಿಡಾರ್ ಸುತ್ತಾಡಿ ಕಸಗೂಡಿಸಿದ ಡಿ.ಸಿ ಬಿ.ಫೌಜಿಯಾ ತರನ್ನುಮ್

0
703

ಕಲಬುರಗಿ,ಅ.1: ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಕೈಯಲ್ಲಿ ಪೊರಕೆ ಹಿಡಿದು ಕಾರಿಡಾರ್ ಸುತ್ತಾಡಿ ಕಸಗೂಡಿಸಿದ್ದಲ್ಲದ್ದೇ ಅದನ್ನು ಸ್ವತಃ ಜಿಲ್ಲಾಧಿಕಾರಿಗಳೇ ಬುಟ್ಟಿಯಲ್ಲಿ ಕೈಯಿಂದಲೇ ತುಂಬಿ ಸ್ವಚ್ಛತೆಗೊಳಿಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 154ನೇ ಜಯಂತಿ ಹಿನ್ನೆಲೆಯಲ್ಲಿ ರವಿವಾರ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಶ್ರಮದಾನ ನಡೆಯಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿಗಳಿಗೆ ಕಚೇರಿಯ ಅಧಿಕಾರಿಗಳು, ಸಿಬ್ಬಂದಿಗಳು ಸಾಥ್ ನೀಡುವ ಮೂಲಕ ಅವರುಗಳು ಕೂಡ ಕಸ ಗೂಡಿಸಿ ಶ್ರಮದಾನ ಮಾಡಿದರು. ಸುಮಾರು ಎರಡು ಗಂಟೆಗಳ ಕಾಲ ಶ್ರಮದಾನ ನಡೆಯಿತು.
ಕಚೇರಿ ಹೊರಾಂಗಣ, ಒಳಾಂಗಣ, ನೆಲ ಮಹಡಿ, ಮೊದಲನೇ ಮಹಡಿ, ತಮ್ಮ ಕೊಠಡಿ ಸಭಾಂಗಣ ಹೀಗೆ ಎಲ್ಲಡೆ ಡಿ.ಸಿ.ಅವರು ಅಧಿಕಾರಿ, ಸಿಬ್ಬಂದಿ ಜೊತೆಗೂಡಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಆಯಾ ಇಲಾಖೆಯವರು ತಮ್ಮ ಕಚೇರಿ ಆವರಣ ಸ್ವಚ್ಚತೆ ಕಾಪಾಡಿ ಕೊಳ್ಳುವಂತೆ ಇದೇ ಸಂದರ್ಭದಲ್ಲಿ ಅವರು ಕರೆ ನೀಡಿದರು. ಮೇಲಿನ ಮಹಡಿಯವರು ಕೆಳಗಡೆ ಕಸ ಬಿಸಾಕಿದಲ್ಲಿ ಅಂತವರಿಗೆ ದಂಡ ವಿಧಿಸಿ, ಸಾಧ್ಯವಾದರೆ ಸಿ.ಸಿ.ಟಿ.ವಿ ಅಳವಡಿಸಿ ಎಂದರು.

ಮಿನಿ ವಿಧಾನಸೌಧ ಆವರಣದಲ್ಲಿನ ಆಹಾರ ಇಲಾಖೆ, ವಾರ್ತಾ ಇಲಾಖೆ, ಖಜಾನೆ, ಡಿ.ಯು.ಡಿ.ಸಿ ವಯಸ್ಕರ ಶಿಕ್ಷಣ ಸೇರಿದಂತೆ ಅನೇಕ ಇಲಾಖೆ ಅಧಿಕಾರಿಗಳು ತಮ್ಮ ಕಚೇರಿ ಸ್ವಚ್ಚಗೊಳಿಸಿಕೊಂಡರು.
ನೆಲ ಹಾಸು ತೊಳೆದರು:-ಮಿನಿ ವಿಧಾನಸೌಧ ಆವರಣದಲ್ಲಿ ರುವ ಆಹಾರ ಇಲಾಖೆಯ ಅಧಿಕಾರಿ-ಸಿಬ್ಬಂದಿ ವರ್ಗದವರು ಸಹ ತಮ್ಮ ಕಚೇರಿ ಸ್ವಚ್ಛತಾ ಕಾರ್ಯದಲ್ಲಿ ಭಾಗಿಯಾದರು. ಕಚೇರಿಯ ಮ್ಯಾನೇಜರ್ ಅಲ್ಲಾ ಭಕ್ಷ, ಗೋಪಾಲ ಅವರು ನೀರು ಹಾಕಿ ನೆಲ ಹಾಸು ತೊಳೆದರು. ಗುಟಕಾ, ಪಾನ್ ತಿಂದು ಉಗುಳಿದ ಕಲೆಗಳನ್ನು ನೀರು ಹಾಕಿ ಸ್ವಚ್ಛಗೊಳಿಸಲಾಯಿತು.

ವಿಶೇಷ ಭೂಸ್ವಾಧೀನಾಧಿಕಾರಿ ಡಿ.ಎಂ.ಪಾಣಿ, ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕರ ಹಕ್ಕುಗಳ ಇಲಾಖೆಯ ಉಪನಿರ್ದೇಶಕ ಶಾಂತಗೌಡ ವಿ. ಗುಣಕಿ, ಪದವಿ ಪೂರ್ವ ಶಿಕ್ಷಣ ಇಲಾ ಖೆಯ ಉಪನಿರ್ದೇಶಕ ಶಿವಶ ರಣಪ್ಪ ಮೂಳೆಗಾಂವ, ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಹೆಚ್. ಎಂ.ಹರನಾಳ, ಡಿ.ಸಿ. ಕಚೇರಿಯ ಸಾಮಾಜಿಕ ಭದ್ರತಾ ವಿಭಾಗದ ಸಹಾಯಕ ನಿರ್ದೇಶಕ ಶಿವಶರಣಪ್ಪ ಧನ್ನಿ, ಚುನಾವಣಾ ತಹ ಶೀಲ್ದಾರ ಪಂಪಯ್ಯ, ಡಿ.ಯು.ಡಿ.ಸಿ ಎ.ಇ.ಇ. ಸೋಮು ರಾಠೋಡ, ಸೇರಿದಂತೆ ಜಿಲ್ಲಾಡಳಿತ ಭವನ ದಲ್ಲಿರುವ ವಿವಿಧ ಇಲಾಖೆಯ ಸಿಬ್ಬಂದಿಗಳು, ಡಿ.ಸಿ.ಕಚೇರಿ ಸಿಬ್ಬಂದಿಗಳು ಸ್ವಚ್ಛತಾ ಕಾರ್ಯದಲ್ಲಿ ಕೈಜೋಡಿಸಿದ್ದರು.
ಕಲಬುರಗಿ ಮಹಾನಗರ ಪಾಲಿಕೆಯ ಆರೋಗ್ಯ ನಿರೀಕ್ಷಕ ಬಸವರಾಜ ಕಲಾಲ್, ಅರುಣ ಕುಮಾರ, ರಾಜಕುಮಾರ, ಮೇಲ್ವಿಚಾರಕ ಪ್ರಶಾಂತ ಮತ್ತು ಪಾಲಿಕೆ ಪೌರಕಾರ್ಮಿಕರು ಇದ್ದರು.

LEAVE A REPLY

Please enter your comment!
Please enter your name here