ಬ್ರಹ್ಮಪೂರ ಹಾಗೂ ಹನುಮಾನ ಭವಾನಿ ಮಂದಿರದ ಅರ್ಚಕರಾದ ಶೇಷಾಚಾರ್ಯ ಕಟ್ಟಿ ನಿಧನ

0
671

ಕಲಬುರಗಿ, ಸೆ. 24:ನಗರದ ಬ್ರಹ್ಮಪೂರದ ನ್ಯೂ ರಾಘವೇಂದ್ರ ಕಾಲೋನಿಯಲ್ಲಿರುವ ಗಂಗಾನಗರದ ಹನುಮಾನ ಮಂದಿರದ ಹಾಗೂ ಭವಾನಿ ಮಂದಿರದ ಅರ್ಚಕರಾದ ಶೇಷಾಚಾರ್ಯ ಕಟ್ಟಿ ಅವರು ಇಂದು ರವಿವಾರ ಸಂಜೆ ನಿಧನರಾದರೆಂದು ತಿಳಿಸಲು ವಿಷಾಧವೆನಿಸುತ್ತದೆ.
ಅತ್ಯಂತ ಹಳೆಯದಾದ ಈ ಭವಾನಿ ಮಂದಿರದಲ್ಲಿ ನಿಜಾಮನ ಕಾಲದಿಂದಲೂ ಪೂಜೆ ಸಲ್ಲಿಸುತ್ತಿದ್ದ ದಿವಂಗತರಿಗೆ 97 ವರ್ಷ ವಯಸ್ಸಾಗಿತ್ತು. ಅವರು ಓರ್ವ ಪುತ್ರಿ, ಇಬ್ಬರು ಗಂಡು ಮಕ್ಕಳು, ಪತ್ನಿ ಸೇರಿದಂತೆ ಅಪಾರ ಬಂಧು-ಬಳಗವನ್ನು ಬಿಟ್ಟು ಹರಿಪಾದ ಸೇರಿದ್ದಾರೆ.
ದಿವಂಗತರ ನಿಧನದಿಂದಾಗಿ ಈ ಉಭಯ ಮಂದಿರದ ಅಪಾರ ಭಕ್ತಾದಿಗಳಿಗೆ ಅತ್ಯಂತ ನೋವುಂಟಾಗಿದ್ದು, ಆ ದೇವರು ಅವರ ಆತ್ಮಕ್ಕೆ ಚಿರಶಾಂತಿಯನ್ನು ದಯಪಾಲಿಸಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯ ಜೀರ್ಣೋದ್ದಾರ ಸಂಘದ ಅಧ್ಯಕ್ಷರಾದ ರಾಯಪ್ಪ ಹೊನಗುಂಟಿ ಹಾಗೂ ಉಪಾಧ್ಯಕ್ಷರಾದ ದತ್ತು ಹುನ್ನಳ್ಳಿ, ಗಂಗಾನಗರ ಬಡಾವಣೆಯ ಕೋಲಿ ಸಮಾಜ ಮುಖಂಡರಾದ ಶಾಂತಪ್ಪ ಎ. ಕೂಡಿ, ಅಂಬು ಡಿಗ್ಗಿ, ವಿಜಯಕುಮಾರ ಹದಗಲ್, ಅಶೋಕ ಬಿದನೂರ, ಶ್ರೀಕಾಂತ ಆಲೂರ, ಮಲ್ಲು ಕೂಡಿ, ಶರಣು ಕೌಲಗಿ ಸೇರಿದಂತೆ ಹಲವಾರು ಬಡಾವಣೆಯ ಹಿರಿಯರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.
ದಿವಂಗತರ ಅಂತ್ಯಸAಸ್ಕಾರ ರವಿವಾರ ರಾತ್ರಿ 10.30 ಗಂಟೆಗೆ ಗಂಗಾ ನಗರದ ನ್ಯೂರಾಘವೇಂದ್ರ ಕಾಲೋನಿಯಲ್ಲಿರುವ ರುದ್ರಭೂಮಿಯಲ್ಲಿ ನೆರವೇರಲಿದೆ ಎಂದು ಅವರ ಕುಟುಂಬದ ಮೂಲಗಳಿಂದ ತಿಳಿದುಬಂದಿದೆ.

LEAVE A REPLY

Please enter your comment!
Please enter your name here