ಮಕ್ತಂಪೂರ ಗದ್ದುಗೆ ಮಠದಲ್ಲಿ ಇಂದು ಸದ್ಭಾವಗೋಷ್ಠಿ ಶ್ರಾವಣ ಮುಕ್ತಾಯ ಸಮಾರಂಭ

0
320

ಕಲಬುರಗಿ, ಸೆ. 17: ನಗರದ ಮಕ್ತಂಪೂರ ಬಡಾವಣೆಯಲ್ಲಿ ರುವ ಗದ್ದುಗೆ ಮಠದಲ್ಲಿ ಇಂದು ದಿನಾಂಕ : 17.09.2023 ಸಂಜೆ 6.30 ಗಂಟೆಗೆ ಪೂಜ್ಯ ಶ್ರೀ ಲಿಂ. ಹಾನಗಲ್ಲ ಕುಮಾರ ಮಹಾ ಶಿವಯೋಗಿಗಳ 156ನೇ ಜಯಂತಿ ಮಹೋತ್ಸವ ಹಾಗೂ ಸದ್ಭಾವ ಗೋಷ್ಠಿ – ಶ್ರಾವಣ ಮುಕ್ತಾಯ ಸಮಾರಂಭ ನಡೆಯಲಿದೆ.
ಮಕ್ತಂ ಪೂರದ ಗುರುಬಸವ ಬ್ರಹನ್ಮಠ, ಜಗದ್ಗುರುಗಳಾದ ಶ್ರೀ ಮ.ನಿ.ಪ್ರ. ಶಿವಾನಂದ ಮಹಾ ಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ, ಮ.ನಿ.ಪ್ರ. ಚರಲಿಂಗ ಮಹಾಸ್ವಾ ಮಿಗಳು, ಗದ್ದುಗೆಮಠ, ಕಲ ಬುರಗಿ ಅಧ್ಯಕ್ಷತೆ ವಹಿಸುವರು.
ನೇತೃತ್ವವನ್ನು ಪೂಜ್ಯ ಶ್ರೀ ಮೃತ್ಯುಂಜಯದೇವರು ಕೊಳ್ಳುರು, ಪೂಜ್ಯ ಶ್ರೀ ಶಿವಲಿಂಗ ದೇವರು, ನಿಂಬರ್ಗಾ, ಪೂಜ್ಯ ಶ್ರೀ ಶಶಿಕು ಮಾರ ದೇವರು, ಘಟಪ್ರಭಾ ಪೂಜ್ಯ ಶ್ರೀ ನಿರುಪಾದಿ ದೇವರು, ಗಂಗೂರು
ಈ ಕಾರ್ಯಕ್ರಮಕ್ಕೆ ಅತಿಥಿ ಗಳಾಗಿ ಹೈ.ಕ. ಶಿಕ್ಷಣ ಸಂಸ್ಥೆ, ಅಧ್ಯಕ್ಷರಾದ ಭೀಮಾಶಂಕರ ಸಿ. ಬಿಲಗುಂದಿ, ಮಾಜಿ ಶಾಸಕರಾದ ದತ್ತಾತ್ರೇಯ ಪಾಟೀಲ್ ರೇವೂರ, ಮಾಜಿ ಕ್ರೆಡಲ್ ಅಧ್ಯಕ್ಷರಾದ ಚಂದ್ರಕಾAತ ಪಾಟೀಲ, ಗಣೇಶ ಕೋ-ಆಪರೇಟಿವ್ ಬ್ಯಾಂಕ್, ಅಧ್ಯಕ್ಷರಾದ ಶಾಂತಕುಮಾರ ಬಿಲಗುಂದಿ, ಯುವ ಕಾಂಗ್ರೆಸ್ ಮುಖಂಡರಾದ ಸಂತೋಷ ಬಿ. ಬಿಲಗುಂದಿ,
ಕ.ಸಾ.ಪ. ಕಾರ್ಯಾಧ್ಯಕ್ಷರಾದ ಶರಣರಾಜ ಚಪ್ಪರಬಂದಿ, ಶಿವಶ ರಣಪ್ಪ ಗೋಗಿ, ಕಲಬುರಗಿ, ಶಿವರಾಜ ಖೂಬಾ, ಶಿವಶರಣಪ್ಪ ಭೀಮಳ್ಳಿ ಅವರುಗಳು ಆಗಮಿ ಸಲಿದ್ದಾರೆ.
ಈ ಸಂದರ್ಭದಲ್ಲಿ ರೇವಣ ಸಿದ್ದೇಶ್ವರ ಅಕ್ಕನ ಬಳಗದ ವತಿ ಯಿಂದ ಭಜನೆ ಕಾರ್ಯಕ್ರಮ ನಡೆ ಯಲಿದೆ.
ಕಾರ್ಯಕ್ರಮದ ನಿರೂಪಣೆ ಯನ್ನು ಕುಮಾರಿ ಬಸಮ್ಮಾ ಪಸಾರ, ಕಲಗುರ್ತಿ ಮಾಡಲಿ ದ್ದಾರೆ.
ಶ್ರಾವಣ ಮಾಸದ ಮುಕ್ತಾಯ (ಖಾಂಡ) ವಿರುವುದರಿಂದ ಸಕಲ ಸದ್ಭಕ್ತರು, ಪಾದಪೂಜೆಗೆ ಭಾಗಿ ಯಾಗಿ ಪ್ರಸಾದ ಸ್ವೀಕರಿಸಿ ಪುನೀತರಾಗಿ.

LEAVE A REPLY

Please enter your comment!
Please enter your name here