ತೊಗರಿ ಬೆಳೆಯಲ್ಲಿ ಅಕ್ರಮವಾಗಿ ಬೆಳೆಸಿದ್ದ ಗಾಂಜಾ ಗಿಡಗಳ ಜಪ್ತಿ

0
1218

ಕಲಬುರಗಿ, ಸೆ. 15: ಅಕ್ರಮವಾಗಿ ತೊಗರಿ ಬೆಳೆಯಲ್ಲಿ ಬೆಳಿಸಿದ್ದ ಗಾಂಜಾ ಗಿಡಗಳನ್ನು ಪೋಲಿಸರು ಜಿಲ್ಲೆಯ ಚಿಂಚೋಳಿ ತಾಲೂಕಿನ ಸಂಗಾಪೂರದ ಹೊಲದಲ್ಲಿ ಜಪ್ತಿ ಮಾಡಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.

ಸಂಗಾಪೂರದ ಸರ್ವೇ ನಂ. 1ರಲ್ಲಿ ತೊಗರಿ ಬೆಳೆಯ ಮಧ್ಯಯದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿದ್ದ ಮಾಹಿತಿ ಮೇರೆಗೆ ಡಿವೈಎಸ್‌ಪಿ ವಿಜಯಕುಮಾರ ರಾಂಪುರೆ ಅವರ ಮಾರ್ಗದರ್ಶನದಲ್ಲಿ ಪೋಲಿಸರು ದಾಳಿ ಮಾಡಿ ಸುಮಾರು 48 ಸಾವಿರ ರೂಪಾಯಿ ಮೌಲ್ಯದ ಗಾಂಜಾ ಗಿಡಗಳನ್ನು ಜಪ್ತಿ ಮಾಡುವುದರೊಂದಿಗೆ ಆರೋಪಿ ಜಮೀನಿನ ಮಾಲೀಕ ವಿನೋದ ಪಾಂಡು ಎಂಬವನನ್ನು ಬಂಧಿಸಿದ್ದಾರೆ.

Total Page Visits: 1186 - Today Page Visits: 1

LEAVE A REPLY

Please enter your comment!
Please enter your name here