ಹುಚ್ಚು ನಾಯಿ ಕಚ್ಚಿ13 ಜನರಿಗೆ ಗಂಭೀರ ಗಾಯ

0
436

ಕಲಬುರಗಿ, ಸೆ. 10: ಹುಚ್ಚು ನಾಯಿ ದಾಳಿಗೆ ಒಳಗಾಗಿ 13 ಮಂದಿ ಗಂಭೀರವಾಗಿ ಗಾಯಗೊಂಡ ಘಟನೆ ಚಿಂಚೋಳಿ ತಾಲೂಕಿನ ಐನಾಪೂರ ಹಾಗೂ ಬೆನಕಪಳ್ಳಿ ಗ್ರಾಮದಲ್ಲಿ ನಡೆದ ಬಗ್ಗೆ ವರದಿಯಾಗಿದೆ.
ಹುಚ್ಚು ನಾಯಿ ಕಡಿತದಿಂದ ಗಾಯಗೊಂಡ 13 ಜನರಲ್ಲಿ 5 ಜನ ಮಹಿಳೆಯರು ಸೇರಿದ್ದಾರೆ.
ಗಾಯಗೊಂಡವರನ್ನು ಮೊದಲು ಐನಾಪೂರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ನಂತರ ಗಾಯಾಳುಗಳನ್ನು ಅಂಬುಲೇನ್ಸ್ ಮೂಲಕ ಕಲಬುರಗಿ ಕರೆ ತಂದು ಜಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಳೆಗಾಲವಿರುವುದರಿಂದ ನಾಯಿಗಳ ಹಾವಳಿ ಎಲ್ಲಡೆ ಹೆಚ್ಚಾಗಿದ್ದು, ರಾತ್ರಿ ಸಮಯವಲ್ಲದೇ ಹಗಲು ಹೊತ್ತಿನಲ್ಲೂ ನಾಯಿಗಳು ಗುಂಪಿನಲ್ಲಿ ಬಂದು ದಾಳಿ ಮಾಡುವ ಸಂಗತಿಗಳು ಹಲವೆಡೆ ವರದಿಯಾಗಿದ್ದು, ಅಲ್ಲದೇ ಸರಕಾರ ಬೀದಿ ನಾಯಿಗಳಿಗೆ ಮಟ್ಟ ಹಾಕಿ ಅವುಗಳಿಗೆ ಎಂಟಿ ರ‍್ಯಾಬಿಸ್ ಚುಚ್ಚುಮದ್ದು ನೀಡಿದರೆ, ಅದರ ಕಡಿತದಿಂದ ಆಗುವ ಗಂಭೀರ ಪರಿಣಾಮಗಳು ತಪ್ಪಿಸಬಹುದಾಗಿದೆ.
ಕಳೆದ ವರ್ಷ ಕಲಬುರಗಿಯಲ್ಲಿ ಚಿಕ್ಕ ಚಿಕ್ಕ ಮಕ್ಕಳ ಮೇಲೆ ನಾಯಿಗಳು ದಾಳಿ ಮಾಡಿ ಗಂಭೀರವಾಗಿ ಗಾಯಗೊಳಿಸಿದ ಘಟನೆಗಳು ವರದಿಯಾಗಿದ್ದವು.

LEAVE A REPLY

Please enter your comment!
Please enter your name here